Viral: ಗಂಡ ಹಾಸಿಗೆಯ ಮೇಲೆ ಮಾಡುವ ಈ ಕೆಲಸ ನನಗೆ ಇಷ್ಟ ಆಗ್ತಿಲ್ಲ, ಪತಿಗೆ ಡಿವೋರ್ಸ್‌ ನೀಡಿದ ಪತ್ನಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 31, 2024 | 6:43 PM

ಸಣ್ಣಪುಟ್ಟ ಕಾರಣಕ್ಕೆ ಪತಿ-ಪತ್ನಿಯರ ಸಂಬಂಧ ಮುರಿದು ಬಿದ್ದಿರುವುದನ್ನು ನಾವು ನೋಡಿದ್ದೇವೆ. ಗಂಡ ಕುರ್‌ಕುರೆ ತಂದಿಲ್ಲ, ಗಂಡ ಬೇರೆ ಬಣ್ಣದ ಲಿಪ್‌ಸ್ಟಿಕ್‌ ತಂದ, ಹೆಂಡತಿ ದಪ್ಪ ಇದ್ದಾಳೆ ಇತ್ಯಾದಿ ಕ್ಷುಲ್ಲಕ ಕಾರಣಗಳಿಗೆ ಡಿವೋರ್ಸ್ ‌ ನೀಡಲು ಮುಂದಾದವರ ಸುದ್ದಿಗಳು ಈ ಹಿಂದೆಯೂ ವೈರಲ್‌ ಆಗಿತ್ತು. ಇದೀಗ ಅಂತಹದೇ ಘಟನೆಯೊಂದು ನಡೆದಿದ್ದು, ಗಂಡ ಪದೇ ಪದೇ ಕೊಳೆ ಬಟ್ಟೆಯನ್ನು ಬೆಡ್‌ ಮೇಲೆ ತಂದು ಬಿಸಾಕುತ್ತಾನೆ ಎಂದು ಮಹಿಳೆಯೊಬ್ಬರು ತನ್ನ ಗಂಡನಿಗೆ ಡಿವೋರ್ಸ್‌ ನೀಡಲು ಮುಂದಾಗಿದ್ದಾರೆ.

Viral: ಗಂಡ ಹಾಸಿಗೆಯ ಮೇಲೆ ಮಾಡುವ ಈ ಕೆಲಸ ನನಗೆ ಇಷ್ಟ ಆಗ್ತಿಲ್ಲ, ಪತಿಗೆ ಡಿವೋರ್ಸ್‌ ನೀಡಿದ ಪತ್ನಿ
Follow us on

ಗಂಡ ಹೆಂಡತಿಯ ಸಂಬಂಧ ಏಳೇಲು ಜನ್ಮದ ಬಂಧ ಎನ್ನಲಾಗುತ್ತದೆ. ಆದ್ರೆ ಇತ್ತೀಚಿಗೆ ಸಣ್ಣ ಸಣ್ಣ ವಿಚಾರಗಳಿಗೆ ಪತಿ ಪತ್ನಿಯರ ನಡುವೆ ಜಗಳವಾಗಿ ದಾಂಪತ್ಯ ಜೀವನ ಮುರಿದು ಬೀಳುತ್ತಿದೆ. ಗಂಡ ಕುರ್‌ಕುರೆ ತಂದಿಲ್ಲ, ಗಂಡ ಬೇರೆ ಬಣ್ಣದ ಲಿಪ್‌ಸ್ಟಿಕ್‌ ತಂದ, ಹೆಂಡತಿ ದಪ್ಪ ಇದ್ದಾಳೆ ಇತ್ಯಾದಿ ಕ್ಷುಲ್ಲಕ ಕಾರಣಗಳಿಗೆ ಗಂಡ ಹೆಂಡತಿಗೆ, ಪತ್ನಿ ಪತಿಗೆ ಡಿವೋರ್ಸ್‌ ನೀಡಲು ಮುಂದಾದ ಸುದ್ದಿಗಳು ಈ ಹಿಂದೆಯೂ ವೈರಲ್‌ ಆಗಿದ್ದವು. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಪದೇ ಪದೇ ಕೊಳೆ ಬಟ್ಟೆಯನ್ನು ಬೆಡ್‌ ಮೇಲೆ ತಂದು ಬಿಸಾಕುವ ಪತಿರಾಯನ ಈ ಒಂದು ಅಭ್ಯಾಸದಿಂದ ಬೇಸತ್ತ ಪತ್ನಿ ಆತನಿಗೆ ಡಿವೋರ್ಸ್‌ ನೀಡಲು ಮುಂದಾಗಿದ್ದಾರೆ.

ಈ ಸುದ್ದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಸ್ವತಃ ಆ ಮಹಿಳೆಯೇ ನನ್ನ ಗಂಡನ ಈ ಒಂದು ಅಭ್ಯಾಸವನ್ನು ಸಹಿಸಲಾರದೆ ಆತನಿಗೆ ನಾನು ಡಿವೋರ್ಸ್‌ ನೀಡಿದರೂ ನೀಡಬಹುದು ಎಂದು ಹೇಳಿದ್ದಾರೆ. ಆ ಮಹಿಳೆ ತನ್ನ ಪತಿಯನ್ನು ತುಂಬಾ ಪ್ರೀತಿ ಮಾಡ್ತಿದ್ರೂ ಕೂಡಾ ಆಕೆ ಡಿವೋರ್ಸ್‌ ನೀಡಲು ಮುಂದಾಗಿದ್ದಾಳೆ. ಆಕೆಯ ಪತಿ ಚೆಫ್‌ ಆಗಿದ್ದು, ಕೆಲಸದಿಂದ ಬಂದ ಕೂಡಲೇ ಆಹಾರದ ಕಲೆ, ಗ್ರೀಸ್‌ ಕಲೆಗಳಿಂದ ತುಂಬಿದ ಕೊಳೆ ಬಟ್ಟೆಯನ್ನು ಆತ ಬೆಡ್‌ ಮೇಲೆಯೇ ತಂದು ಬಿಸಾಡುತ್ತಿದ್ದ. ನನಗೆ ಪದೇ ಪದೇ ಬೆಡ್‌ಶೀಟ್‌ ಚೇಂಜ್‌ ಮಾಡಿ ಸಾಕಾಕಿದೆ. ಅಷ್ಟೇ ಅಲ್ಲದೇ ಈ ಕೆಟ್ಟ ಅಭ್ಯಾಸವನ್ನು ಬಿಟ್ಟು ಬಿಡಿ ಎಂದು ಹೇಳಿದರೂ ಕೇಳುತ್ತಿಲ್ಲ. ಗಂಡನ ಈ ನಡವಳಿಕೆಯನ್ನು ಸಹಿಸಲಾರದೆ ನಾನು ಆತನಿಗೆ ಡಿವೋರ್ಸ್‌ ನೀಡಬಹುದು ಎಂದು ಆಕೆ ಹೇಳಿಕೊಂಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ