Delhi: ನಿತ್ಯವೂ ಸಾಮಾಜಿಕ ಜಾಲತಾಣದಲ್ಲಿ ದೆಹಲಿ ಮೆಟ್ರೋದ (Metro) ಬಗ್ಗೆ ತಕರಾರು ಇಲ್ಲದಿದ್ದರೆ ಆ ದಿನ ಸಂಪನ್ನವೇ ಆಗುವುದಿಲ್ಲವೇನೋ ಎಂಬ ಮಟ್ಟಿಗೆ ಬಂದು ನಿಂತಿದೆ ಪರಿಸ್ಥಿತಿ. ರೈಲಿನಲ್ಲಿ ಹೊಡೆದಾಟ, ಕೂಗಾಟ, ಚೀರಾಟ, ರೀಲ್ಸ್, ಪ್ರೀತಿ, ಪ್ರೇಮ ಹೀಗೆ ಇನ್ನೂ ಏನೇನೋ. ಇದೀಗ ಸೀಟಿಗಾಗಿ ಪುರುಷ ಮತ್ತು ಮಹಿಳೆಯರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ವಿಡಿಯೋ ವೈರಲ್ ಆಗಿದೆ. ಸೆ. 9ರಂದು ಹಂಚಿಕೊಂಡ ಈ ವಿಡಿಯೋ ಅನ್ನು 1 ಲಕ್ಷಕ್ಕಿಂತಲೂ ಹೆಚ್ಚು ಜನರು ಹಂಚಿಕೊಂಡಿದ್ದಾರೆ. ಮೊದಲು ಮಹಿಳೆ ಮತ್ತು ಪುರುಷನೊಬ್ಬ ವಾಗ್ವಾದಕ್ಕಿಳಿದಿರುತ್ತಾರೆ. ಆಗ ಇನ್ನೊಬ್ಬ ಮಹಿಳೆಯೂ ಮಧ್ಯಪ್ರವೇಶಿಸುತ್ತಾಳೆ. ಸಹಪ್ರಯಾಣಿಕರು ಮೂವರ ಜಗಳವನ್ನು ನಿಲ್ಲಿಸಲು ಪ್ರಯತ್ನಿಸುತ್ತಾರೆ.
ಇದನ್ನೂ ಓದಿ : Viral Video: ‘ನಾನು ದೂರದ ಕಡಲತೀರದಲ್ಲಿ ಬದುಕುತ್ತಿರುವುದು ಈ ಕಾರಣಕ್ಕೆ’ ಸಮೃದ್ಧಿ ಮಲ್ಹೋತ್ರಾ
Xನ @gharkekalesh ಎನ್ನುವ ಖಾತೆಯಲ್ಲಿ ವಿಡಿಯೋ ಅನ್ನು ಹಂಚಿಕೊಳ್ಳಲಾಗಿದೆ. ಹೀಗೆ ಮಾಡುವುದರಿಂದ ವಿನಾಕಾರಣ ಪ್ರಯಾಣಿಕರು ತೊಂದರೆಯನ್ನು ಅನುಭವಿಸುತ್ತಾರೆ. ಇನ್ನಾದರೂ ಇಂಥ ಪ್ರಕರಣಗಳ ಕಡೆಗೆ ಮೆಟ್ರೋ ಆಡಳಿತ ಗಮನ ಕೊಡಬೇಕು ಎಂದು ಕೆಲ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಇನ್ನುಳಿದವರು ಸನ್ನಿವೇಶದ ಬಗ್ಗೆ ಹಾಸ್ಯ ಚಟಾಕಿಗಳನ್ನು ಹಾರಿಸಿದ್ದಾರೆ.
Anything happens in Delhi metro kaleshi admin: pic.twitter.com/vN4NQc01j2
— जौली ♡☾ (@blackbindigirl) September 9, 2023
ಈ ವ್ಯಕ್ತಿ ಅಲ್ಲಿಯ ಹೆಣ್ಣುಮಕ್ಕಳೊಂದಿಗೆ ಅನುಚಿತವಾಗಿ ವರ್ತಿಸಿರುವ ಹಾಗಿದೆ. ಹೆಣ್ಣುಮಕ್ಕಳಿಗೆ ಗೌರವ ಕೊಡಬೇಕು, ಅವನಿಗೆ ಶಿಕ್ಷೆಯಾಗಬೇಕು ಎಂದು ಕೆಲವರು ಹೇಳಿದ್ಧಾರೆ. ಕ್ಯಾಮೆರಾಮ್ಯಾನ್ ಬೇಗ ಇತ್ತ ಫೋಕಸ್ ಮಾಡಿ ಎಂಬ ಟ್ವೀಟ್ ಅನೇಕರನ್ನು ನಗೆಗಡಲಿನಲ್ಲಿ ತೇಲಿಸಿದೆ. ಇದು ಮೆಟ್ರೋ ಮಸಾಲಾ ಎಂದು ಒಬ್ಬರು. ಮೆಟ್ರೋ ಹೊತ್ತಿ ಉರಿಯುತ್ತಿದೆ ಎಂದು ಇನ್ನೊಬ್ಬರು.
ಇದನ್ನೂ ಓದಿ : Viral: ಅಕಸ್ಮಾತ್ ಆಕೆ ಅಪರಿಚಿತರಿಗೆ ಆನ್ಲೈನ್ನಲ್ಲಿ ಹಣ ಕಳಿಸಿದಳು, ಮುಂದೇನಾಯಿತು?
ಮೆಟ್ರೋದಲ್ಲಿ ಪ್ರಯಾಣಿಸುವವರು ಯಾಕೆ ಹೀಗೆಲ್ಲ ಮಾಡುತ್ತಿರುತ್ತಾರೆ, ಏನಾಗಿದೆ ಇವರಿಗೆಲ್ಲ? ಉಳಿದ ಮೆಟ್ರೋಗಳಲ್ಲಿ ಯಾಕೆ ಇಂಥ ಪ್ರಕರಣಗಳು ನಡೆಯುವುದಿಲ್ಲ? ಎಂದು ಕೇಳಿದ್ಧಾರೆ ಒಬ್ಬರು. ಇಂಥಾ ಜಗಳದ ಮಧ್ಯೆಯೂ ಆ ಹೆಣ್ಣುಮಗಳು ತನ್ನ ಕೂದಲನ್ನು ಸರಿಪಡಿಸಿಕೊಳ್ಳುತ್ತಿದ್ದಾಳೆ! ಎಂದು ನಕ್ಕಿದ್ದಾರೆ ಮತ್ತೊಂದಿಷ್ಟು ಜನ. ಇಂಥ ವಿಡಿಯೋ ಪೋಸ್ಟ್ ಮಾಡುವ ಕಾಳೇಶ ದಿನಾಲೂ ದೆಹಲಿ ಮೆಟ್ರೋದೊಳಗೆ ಪ್ರಯಾಣಿಸುತ್ತಾನೆ ಎನ್ನಿಸುತ್ತದೆ ಎಂದಿದ್ದಾರೆ ಉಳಿದ ಜನ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 5:39 pm, Mon, 11 September 23