ಉದ್ಯೋಗದಲ್ಲಿರುವವರಿಗೆ ಬೇಕೆಂದಾಗ ರಜೆ ಸಿಗುವುದೇ ಇಲ್ಲ. ಅದರಲ್ಲಿಯೂ ಬಾಸ್ ಮೂಡ್ ಸರಿಯಿದೆಯೇ ಎಂದು ನೋಡಿಕೊಂಡು ರಜೆ ಕೇಳಬೇಕಾಗುತ್ತದೆ. ಒಂದು ವೇಳೆ ಬಾಸ್ ನೋ ಎಂದು ಬಿಟ್ಟರೆ, ಅರೆಮನಸ್ಸಿನಲ್ಲಿ ಆಫೀಸಿಗೆ ಬಂದು ಕೆಲಸ ಮಾಡಬೇಕು. ಇಲ್ಲೊಂದು ಘಟನೆ ಕೂಡ ಹೀಗೆ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಮಹಿಳಾ ಉದ್ಯೋಗಿಯೊಬ್ಬರು ತನ್ನ ಬಾಸ್ ಬಳಿ ರಜೆಯ ವಿಚಾರವಾಗಿ ಮಾಡಿದ ಮೆಸೇಜ್ ಸ್ಕ್ರೀನ್ ಶಾಟ್ ವೊಂದು ವೈರಲ್ ಆಗಿದೆ.
ಪ್ರಾಚಿ ಎನ್ನುವ ಹೆಸರಿನ ಎಕ್ಸ್ ಖಾತೆಯಲ್ಲಿ ಬಾಸ್ ಜೊತೆಗೆ ಮಹಿಳಾ ಉದ್ಯೋಗಿ ನಡೆಸಿದ ಮೆಸೇಜ್ ಸ್ಕ್ರೀನ್ ಶಾಟ್ ಶೇರ್ ಮಾಡಿಕೊಳ್ಳಲಾಗಿದೆ. ಈ ಮೆಸೇಜ್ ನಲ್ಲಿ ತನಗೆ ಅರ್ಧ ದಿನದ ರಜೆಯ ಅಗತ್ಯವಿದೆ ಎಂದು ಬಾಸ್ ಗೆ ಮೆಸೇಜ್ ಮಾಡಿರುವುದನ್ನು ನೋಡಬಹುದು. ಈ ಮೆಸೇಜ್ನ ಪ್ರಾರಂಭದಲ್ಲಿ, ಹೆಲೋ ಮೇಡಂ, ಈ ಮೂಲಕ ನಾನು ವಿನಂತಿಸುವೇನೆಂದರೆ ಈ ಶನಿವಾರ ನನಗೆ ಅರ್ಧ ದಿನ ರಜೆಯ ಅವಶ್ಯಕತೆ ಇದೆ. ಆದರೆ ಈ ಪ್ರಾಜೆಕ್ಟ್ ಸಮಯದಲ್ಲಿ ರಜೆ ನೀಡುವುದು ಕಷ್ಟ ಎಂದು ನನಗೆ ತಿಳಿದಿದೆ. ಆದರೆ ಅನಿವಾರ್ಯ ಕಾರಣಗಳಿಂದ ನನಗೆ ದಯವಿಟ್ಟು ರಜೆ ಅನುಮತಿಸಿ. ಖಾಸಗಿ ಕಾರ್ಯಕ್ರಮದಲ್ಲಿ ನಾನು ಕುಟುಂಬದ ಜೊತೆಗೆ ಪಾಲ್ಗೊಳ್ಳಬೇಕಿದೆ. ದಯವಿಟ್ಟು ರಜೆ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
imagine being 25 and still pulling the mom said no card. pic.twitter.com/msDb46YC1S
— praachiii (@crankyranterr) July 31, 2024
ಇದಕ್ಕೆ ಬಾಸ್ ಪ್ರತಿಕ್ರಿಯಿಸಿದ್ದು, ದಯವಿಟ್ಟು ರಜೆ ತೆಗೆದುಕೊಳ್ಳುವುದು ಬೇಡ ಎಂದಿದ್ದು, ಮತ್ತೆ ಇದು ನನ್ನ ಮನವಿ ಎಂದು ಮೂರು ಇಮೋಜಿ ಹಾಕಿ ಮೆಸೇಜ್ ಕಳುಹಿಸಿದ್ದಾರೆ. ಆದರೆ ಮಹಿಳಾ ಉದ್ಯೋಗಿಯೂ ದಯವಿಟ್ಟು ಕೊಡಿ ಎಂದು ಅಳುವ ಇಮೋಜಿ ಕಳುಹಿಸಿದ್ದು, ನಿಜಕ್ಕೂ ನನಗೆ ರಜೆಯ ಅವಶ್ಯಕತೆ ಇದೆ, ರಜೆ ಕೊಡದಿದ್ದರೆ ನನ್ನ ತಾಯಿ ಕೊಂದೇ ಬಿಡುತ್ತಾರೆ ಎಂದು ಮೆಸೇಜ್ ಮಾಡಿದ್ದಾರೆ. ಆದರೆ ಈ ಮೆಸೇಜ್ ಗೆ ಬಾಸ್ ಕಡೆಯಿಂದ ಯಾವುದೇ ಪ್ರತಿಕ್ರಿಯೆಯೂ ಬಂದಿಲ್ಲ.
ಇದನ್ನೂ ಓದಿ: ವಿದೇಶಿ ಆವಕಾಡೊ ಹಣ್ಣನ್ನು ದೇವರಿಗೆ ಅರ್ಪಿಸಿದ ಬೆಂಗಳೂರಿನ ವ್ಯಕ್ತಿ, ನೆಟ್ಟಿಗರು ಶಾಕ್
ಉದ್ಯೋಗಿಯೂ ಕೊನೆಗೆ ಈ ರೀತಿ ಮೆಸೇಜ್ ಮಾಡಿರುವುದು ತಮಾಷೆಯಾಗಿದ್ದರೂ ಈ ಮೆಸೇಜ್ ನೋಡಿದ ನೆಟ್ಟಿಗರು ಅಯ್ಯೋ ಪಾಪ ಎಂದಿದ್ದಾರೆ. ಈ ಪೋಸ್ಟ್ ವೊಂದು ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದ್ದು, ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಗಳನ್ನು ಮಾಡಿದ್ದಾರೆ. ಈ ಪೋಸ್ಟ್ ಗೆ ನೆಟ್ಟಿಗರೊಬ್ಬರು, ‘ಅರ್ಧ ದಿನ ರಜೆಗೆ ಇಷ್ಟು ಮನವಿ ಮಾಡಬೇಕಾ’ ಎಂದು ಕೇಳಿದ್ದಾರೆ. ಮತ್ತೊಬ್ಬರು ‘ರಜೆ ಕೊಡದ ಇಂತಹ ಕಂಪನಿಯಲ್ಲಿ ಕೆಲಸ ಮಾಡದಿರುವುದೇ ಲೇಸು’ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ