Viral Video : ಅಲ್ಲಿ ಕೆರೆ ಇದೆ. ಕೆರೆಯ ತುಂಬಾ ನೀರಿದೆ. ಅಲ್ಲಿ ಮಾತ್ರ ಯಾವ ಕಾರಣಕ್ಕೂ ಹೋಗಬೇಡ. ಅದು ಅಪಾಯ! ಎಂದು ಹೇಳಿ ಸುಮ್ಮನೆ ನಿಮ್ಮ ಪಾಡಿಗೆ ನೀವು ಎಲ್ಲೋ ಗಮನ ನೆಟ್ಟಂತೆ ಕುಳಿತುಕೊಳ್ಳಿ. ನಿಮ್ಮ ಮಗು ಮಾತ್ರ ನೀವು ಏನು ಬೇಡವೆಂದಿರುತ್ತೀರೋ ಅದನ್ನೇ ಮುದ್ದಾಮ್ ಮಾಡುತ್ತದೆ. ಬೇಡವೆಂಬುದನ್ನು ಮಾಡುವುದೇ ಮಗುವಿನ ಸ್ವಭಾವ. ಇದು ಮನೋವೀಜ್ಞಾನದ ಮೂಲಕ ಸಾಬೀತಾಗಿದೆ. ಆದರೆ ಸಾಕುಪ್ರಾಣಿಗಳು ಹಾಗಲ್ಲ. ಏನು ಮಾಡಬೇಡ ಎಂದು ಹೇಳುತ್ತೀರೋ ಅದನ್ನು ಚಾಚೂತಪ್ಪದೆ ಪಾಲಿಸಿ ಪೋಷಕರ ವಿಶ್ವಾಸ ಗಳಿಸಲು ಪ್ರಯತ್ನಿಸುತ್ತವೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ಗಮನಿಸಿ.
@oscarnkarma ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಒಂದು ಜರ್ಮನ್ ಶೆಫರ್ಡ್ ಇನ್ನೊಂದು ಗೋಲ್ಡನ್ ರಿಟ್ರೈವರ್. ಈಗ ಸುರಿಯುತ್ತಿರುವ ಧೋಮಳೆಗೆ ಮುಖ್ಯರಸ್ತೆಗಳ ತುಂಬಾ ಗುಂಡಿಗಳು. ಇನ್ನು ಇಂಥ ಚಿಕ್ಕಪುಟ್ಟ ಕಾಲುದಾರಿಗಳ ಗತಿ? ಈ ನಾಯಿಗಳ ಪೋಷಕಿ ವಾಕಿಂಗ್ ಕರೆದುಕೊಂಡು ಹೋಗಿದ್ದಾರೆ. ದಾರಿಮಧ್ಯೆ ನೀರು ನಿಂತಿದೆ. ‘ಹುಷಾರಾಗಿ ಬನ್ನಿ, ಆ ನೀರಿನಲ್ಲಿ ಕಾಲಿಡಬೇಡಿ’ ಎಂದು ಪೋಷಕಿ ನಾಯಿಗಳಿಗೆ ಹೇಳುತ್ತಾಳೆ. ಅವೆರಡೂ ಅವಳ ಮಾತನ್ನು ಚಾಚೂತಪ್ಪದೆ ಪಾಲಿಸುತ್ತವೆ. ಕಾಲಿಗೆ ಚೂರೂ ನೀರನ್ನು ತಾಕಿಸಿಕೊಳ್ಳದೆ ಇದ್ದ ಸಣ್ಣಜಾಗದಗುಂಟ ಗೋಲ್ಡನ್ ರಿಟ್ರವೈರ್ ಹಾದುಬರುತ್ತದೆ. ಜರ್ಮನ್ ಶೆಫರ್ಡ್ ಕೊನೆಯಲ್ಲಿ ನೀರಿನ ಮೇಲೆ ಹೆಜ್ಜೆ ಇಟ್ಟುಬರುತ್ತದೆ.
ಅದೇ ನೀವು ನಿಮ್ಮ ಪುಟ್ಟ ಮಕ್ಕಳಿಗೆ ಹೇಳಿದ್ದರೆ ಏನು ಮಾಡುತ್ತಿದ್ದವು? ಜಂಪಿಂಗ್ ಇನ್ ದಿ ಮಡ್ಡಿಪಡಲ್ಸ್ ಎಂದು ಆ ನೀರಿನೊಳಗೆ ಕುಣಿದು ಕುಪ್ಪಳಿಗೆ ನಿಮ್ಮನ್ನು ಹೈರಾಣು ಮಾಡುತ್ತಿದ್ದವು. ಹೌದು ತಾನೆ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ