ಈ ಬಾರಿಯ ಬಿಸಿಲಿನ ಝಳಕ್ಕೆ ಮನುಷ್ಯರು ಮಾತ್ರವಲ್ಲದೆ ಪ್ರಾಣಿ ಪಕ್ಷಿಗಳೂ ಕೂಡಾ ಬಸವಳಿದೆ. ಹೌದು ಕಳೆದ ವರ್ಷಕ್ಕಿಂತ ಈ ಬಾರಿ ಬಿಸಿಲಿನ ತಾಪ ಏರಿಕೆಯಾಗಿದ್ದು, ಇಳೆಗೆ ಮಳೆ ಬಿದ್ದರೆ ಸಾಕು ಎಂದು ಜನರು ಕಾಯುತ್ತಿದ್ದಾರೆ. ಈ ನಡುವೆ ಇಲ್ಲೊಬ್ಬರು ಮಹಿಳೆ ಅಲ್ಲಾ ಇಷ್ಟೊಂದು ಬಿಸಿಲಿದೆಯಲ್ವಾ, ಸುಮ್ನೆ ಮನೆಯ ಗ್ಯಾಸ್ ಏನಕ್ಕೆ ವೇಸ್ಟ್ ಮಾಡೋದು ಅಂತ ಹೇಳಿ ರಣ ಬಿಸಿಲಿಗೆ ನಡುರಸ್ತೆಯಲ್ಲಿ ಆಮ್ಲೆಟ್ ಮಾಡಿ ತಿಂದಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಮಹಿಳೆಯ ಅವತಾರವನ್ನು ಕಂಡು ನೆಟ್ಟಿಗರು ದಂಗಾಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರು ಉರಿ ಬಿಸಿಲಿಗೆ ಗ್ಯಾಸ್ ಇಲ್ಲದೆ ಅಡುಗೆ ಮಾಡಿದ್ರೆ ಹೇಗೆ ಅಂತ ಪ್ಲಾನ್ ಮಾಡಿ ರಸ್ತೆಯ ಬಳಿ ಬಂದು ರಸ್ತೆಗೆ ಚೆನ್ನಾಗಿ ನೀರು ಹಾಕಿ ಕ್ಲೀನ್ ಮಾಡಿ ಬಳಿಕ ಅದಕ್ಕೆ ಎಣ್ಣೆ ಸುರಿದು, ಆ ರಸ್ತೆಯಲ್ಲಿಯೇ ಎರಡು ಮೊಟ್ಟೆಗಳ ಆಮ್ಲೆಟ್ ತಯಾರಿಸುತ್ತಿರುವಂತಹ ಹಾಸ್ಯಮಯ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ತಾಳಿ ಕಟ್ಟುವಾಗ ವಧುವಿಗೆ ಮುತ್ತಿಟ್ಟ ವರ; ರಣರಂಗವಾದ ಕಲ್ಯಾಣ ಮಂಟಪ
@tajalmodi454 ಎಂಬ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ 10 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಕೆಲವರು ದಯವಿಟ್ಟು ವಿಡಿಯೋ ಮಾಡುವ ಸಲುವಾಗಿ ಫುಡ್ ವೇಸ್ಟ್ ಮಾಡದಿರಿ ಎಂದು ಸಲಹೆ ನೀಡಿದ್ದಾರೆ. ಇನ್ನೂ ಕೆಲವರು ಈ ಕಣ್ಣಲ್ಲಿ ಇನ್ನೂ ಏನೇನೂ ನೋಡೋದಿದೆಯೋ ಎಂದು ಕಾಮೆಂಟ್ಸ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ