Viral News: ತಾಳಿ ಕಟ್ಟುವಾಗ ವಧುವಿಗೆ ಮುತ್ತಿಟ್ಟ ವರ; ರಣರಂಗವಾದ ಕಲ್ಯಾಣ ಮಂಟಪ

ವರನ ಕೃತ್ಯದಿಂದ ಕುಪಿತಗೊಂಡ ವಧುವಿನ ಕುಟುಂಬ ಜಗಳಕ್ಕೆ ಇಳಿದ್ದಿದ್ದಾರೆ. ಬಳಿಕ ವಧುವಿನ ಕುಟುಂಬಸ್ಥರು ದೊಣ್ಣೆ ಹಿಡಿದು ವೇದಿಕೆ ಮೇಲೆ ಏರಿ ವರನ ಮನೆಯವರಿಗೆ ಥಳಿಸಿದ್ದಾರೆ. ಘರ್ಷಣೆಯಲ್ಲಿ ವಧುವಿನ ತಂದೆ ಸೇರಿದಂತೆ ಆರು ಮಂದಿ ಗಾಯಗೊಂಡಿದ್ದಾರೆ.

Viral News: ತಾಳಿ ಕಟ್ಟುವಾಗ ವಧುವಿಗೆ ಮುತ್ತಿಟ್ಟ ವರ; ರಣರಂಗವಾದ ಕಲ್ಯಾಣ ಮಂಟಪ
Follow us
ಅಕ್ಷತಾ ವರ್ಕಾಡಿ
|

Updated on: May 23, 2024 | 5:12 PM

ಉತ್ತರ ಪ್ರದೇಶದಲ್ಲಿ ಸೋಮವಾರ ನಡೆದ ವಿವಾಹದ ಸಂದರ್ಭದಲ್ಲಿ ವರನೊಬ್ಬ ತನ್ನ ವಧುವಿನ ಮೇಲಿನ ಪ್ರೀತಿಯನ್ನು ಸಾರ್ವಜನಿಕವಾಗಿ ತೋರಿಸಲು ತಾಳಿ ಕಟ್ಟುವ ವೇಳೆಯಲ್ಲಿ ಆಕೆಗೆ ಚುಂಬಿಸಿದ್ದಾನೆ. ವರ ಚುಂಬಿಸುತ್ತಿದ್ದಂತೆ ಸಿಟ್ಟಿಗೆದ್ದ ವಧುವಿನ ಕುಟುಂಬ ವರನ ಸಂಬಂಧಿಕರೊಂದಿಗೆ ಜಗಳಕ್ಕೆ ಇಳಿದ್ದಿದ್ದಾರೆ. ವಾಗ್ವಾದ ತೀವ್ರ ಸ್ವರೂಪ ಪಡೆದಿತ್ತು. ಶುಭ ಕಾರ್ಯದ ಮದುವೆ ಮಂಟಪ ಒಂದೇ ಒಂದು ಕ್ಷಣದಲ್ಲಿ ರಣರಂಗವಾಗಿ ಮಾರ್ಪಟ್ಟಿದೆ. ಈ ಘಟನೆ ಉತ್ತರ ಪ್ರದೇಶದ ಹಾಪುರದ ಅಶೋಕ್ ನಗರದಲ್ಲಿ ನಡೆದಿದೆ.

ವರನ ಕೃತ್ಯದಿಂದ ಕುಪಿತಗೊಂಡ ವಧುವಿನ ಕುಟುಂಬ ಜಗಳಕ್ಕೆ ಇಳಿದ್ದಿದ್ದಾರೆ. ಇದಾದ ಬಳಿಕ ವಧುವಿನ ಕುಟುಂಬಸ್ಥರು ದೊಣ್ಣೆ ಹಿಡಿದು ವೇದಿಕೆ ಮೇಲೆ ಏರಿ ವರನ ಮನೆಯವರಿಗೆ ಥಳಿಸಿದ್ದಾರೆ. ಘರ್ಷಣೆಯಲ್ಲಿ ವಧುವಿನ ತಂದೆ ಸೇರಿದಂತೆ ಆರು ಮಂದಿ ಗಾಯಗೊಂಡಿದ್ದಾರೆ. ಬಳಿಕ ಪೊಲೀಸರನ್ನು ಕರೆಸಲಾಗಿದ್ದು, ಎರಡೂ ಕುಟುಂಬಗಳ ಏಳು ಜನರನ್ನು ಬಂಧಿಸಲಾಯಿತು. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.

ಪೊಲೀಸರ ಪ್ರಕಾರ, ಸೋಮವಾರ ರಾತ್ರಿ ವಧುವಿನ ತಂದೆ ತನ್ನ ಇಬ್ಬರು ಹೆಣ್ಣುಮಕ್ಕಳ ಮದುವೆಯನ್ನು ಏರ್ಪಡಿಸಿದ್ದರು. ಮೊದಲ ಮದುವೆ ಯಾವುದೇ ತೊಂದರೆಯಿಲ್ಲದೆ ಮುಕ್ತಾಯಗೊಂಡರೆ, ಎರಡನೇ ಸಮಾರಂಭವು ಕೆಟ್ಟದ್ದಕ್ಕೆ ತಿರುವು ಪಡೆಯಿತು. ವಧುವಿನ ಕುಟುಂಬ, ವರನು ವೇದಿಕೆಯ ಮೇಲೆ ಬಲವಂತವಾಗಿ ಚುಂಬಿಸಿದ್ದಾನೆ ಎಂದು ಆರೋಪಿಸಿದ್ದಾರೆ.

ಮತ್ತಷ್ಟು ಓದಿ: Viral Video: ಕಸ ಎಸೆದಿಲ್ಲ ಏಕೆ? ಕೆಲಸದಿಂದ ಮನೆಗೆ ಬರುತ್ತಿದ್ದಂತೆ ಪತಿರಾಯನಿಗೆ ಜಾಡಿಸಿ ಒದ್ದ ಪತ್ನಿ

ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಲಿಖಿತ ದೂರು ಬಂದಿಲ್ಲ ಮತ್ತು ದೂರಿನ ಸ್ವೀಕೃತಿಯ ಮೇರೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹಾಪುರ್ ಹಿರಿಯ ಪೊಲೀಸ್ ಅಧಿಕಾರಿ ರಾಜ್‌ಕುಮಾರ್ ಅಗರ್ವಾಲ್ ತಿಳಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 151 ರ ಅಡಿಯಲ್ಲಿ ಸಾರ್ವಜನಿಕ ಶಾಂತಿ ಕದಡುವ ಆರೋಪದಡಿ ಆರು ಜನರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ