AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕಸ ಎಸೆದಿಲ್ಲ ಏಕೆ? ಕೆಲಸದಿಂದ ಮನೆಗೆ ಬರುತ್ತಿದ್ದಂತೆ ಪತಿರಾಯನಿಗೆ ಜಾಡಿಸಿ ಒದ್ದ ಪತ್ನಿ

ಪತಿ ಪತ್ನಿಯರ ನಡುವೆ ಸಣ್ಣ ಸಣ್ಣ ವಿಷಯಗಳಿಗೂ ಕೆಲವು ಬಾರಿ ಜಗಳಗಳು ನಡೆಯುತ್ತವೆ. ಎಷ್ಟೇ ಜಗಳ ನಡದರೂ ಪತ್ನಿಯಾದವಳು ಪತಿಯ ಮೇಲೆ ಕೈ ಮಿಲಾಯಿಸುವ ಮಟ್ಟಕ್ಕೆ ಹೋಗುವುದಿಲ್ಲ. ಆದರೆ ಇಲ್ಲೊಬ್ಬಳು ಹೆಮ್ಮಾರಿ ಹೆಂಡತಿ ಗಂಡ ಮನೆಯಲ್ಲಿನ ಕಸ ಬಿಸಾಡಲಿಲ್ಲವೆಂದು, ಆತ ಕೆಲಸದಿಂದ ಮನೆಗೆ ಬರುತ್ತಿದ್ದಂತೆ, ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Viral Video: ಕಸ ಎಸೆದಿಲ್ಲ ಏಕೆ? ಕೆಲಸದಿಂದ ಮನೆಗೆ ಬರುತ್ತಿದ್ದಂತೆ ಪತಿರಾಯನಿಗೆ ಜಾಡಿಸಿ ಒದ್ದ ಪತ್ನಿ
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: May 22, 2024 | 4:55 PM

Share

ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಹಲವಾರು ವಿಡಿಯೋಗಳು ಹರಿದಾಡುತ್ತಿರುತ್ತವೆ. ಅವುಗಳಲ್ಲಿ ಕೆಲವು ದೃಶ್ಯಗಳನ್ನು ನೋಡಿದಾಗ ಅಯ್ಯೋ ದೇವ್ರೇ ಎಂತಹ ವಿಚಿತ್ರ ಜನರು ಈ ಭೂಮಿ ಇದ್ದಾರಪ್ಪ ಎಂದು ಭಾಸವಾಗುತ್ತದೆ. ಇದೀಗ ಅಂತಹದ್ದೇ ವಿಚಿತ್ರ ಘಟನೆಯೊಂದು ನಡೆದಿದ್ದು, ಮನೆಯಲ್ಲಿದ್ದ ಕಸವನ್ನು ಬಿಸಾಡಿ ಬರಲಿಲ್ಲ ಎಂಬ ಒಂದೇ ಕಾರಣಕ್ಕೆ ಪತಿಯು ಕೆಲಸ ಮುಗಿಸಿ ಸುಸ್ತಾಗಿ ಮನೆಗೆ ಬರುತ್ತಿದ್ದಂತೆ ಹೆಮ್ಮಾರಿ ಪತ್ನಿ ತನ್ನ ಗಂಡನ ಮೇಲೆ ಕೈ ಮಾಡಿದ್ದಾಳೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹೆಮ್ಮಾರಿ ಪತ್ನಿಗೆ ನಡವಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಈ ಕುರಿತ ವಿಡಿಯೋವನ್ನು @cctvidiots ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಪತಿ 14 ಗಂಟೆಗಳ ಪಾಳಿ ಕೆಲಸ ಮುಗಿಸಿ ಮನೆಗೆ ಹಿಂದಿರುಗುವಾಗ ಕಸವನ್ನು ಬಿಸಾಡಲು ಮರೆತಿದ್ದಾನೆ ಎಂದು ಪತ್ನಿ ಆತನಿಗೆ ಥಳಿಸಿದ್ದಾಳೆ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.

ವೈರಲ್ ವಿಡಿಯೋದಲ್ಲಿ ಪತಿಯು ಕೆಲಸ ಮುಗಿಸಿ ಸುಸ್ತಾಗಿ ಮನೆಗೆ ಬರುವಂತಹ ದೃಶ್ಯವನ್ನು ಕಾಣಬಹುದು. ಆತ ಬರುತ್ತಿದ್ದಂತೆ ಓಡಿ ಬಂದ ಪತ್ನಿ ತನ್ನ ಗಂಡನಿಗೆ ಜಾಡಿಸಿ ಒದ್ದಿದ್ದಾಳೆ. ನಂತರ ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾಳೆ.  ಪತ್ನಿ ತನ್ನ ಮೇಲೆ ಕೈ ಮಾಡಿದರೂ ಪತಿರಾಯ ಕೂಗಾಡದೇ ಸುಮ್ಮನೆ ನಿಂತಿದ್ದ. ಈ ದೃಶ್ಯ ಮನೆಯಲ್ಲಿ ಅಳವಡಿಸಲಾಗಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಸಿಟ್ಟಿನಿಂದ ಮಹಿಳೆಯನ್ನು ಎತ್ತಿ ಬಿಸಾಕಿದ ಗೂಳಿ; ವಿಡಿಯೋ ಇಲ್ಲಿದೆ ನೋಡಿ

ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 1.3 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಪತ್ನಿಯ ಈ ಮೃಗೀಯ ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ