ಸಲ್ಮಾನ್-ಪ್ರಭಾಸ್ ಮದುವೆ ಆದ್ರೆ ಮಾತ್ರ ನಾನು ವಿವಾಹ ಆಗೋದು ಎಂದ ದಕ್ಷಿಣದ ಸ್ಟಾರ್ ನಟ

ವಿಶಾಲ್ ಅವರಿಗೆ 46 ವರ್ಷ. ಅವರಿನ್ನೂ ಬ್ಯಾಚುಲರ್ ಆಗಿಯೇ ಉಳಿದಿದ್ದಾರೆ. ಅವರ ಮದುವೆ ಬಗ್ಗೆ ಅನೇಕ ಪ್ರಶ್ನೆಗಳು ಇವೆ. ಅವರು ಯಾವಾಗ ಮದುವೆ ಆಗುತ್ತಾರೆ? ಅವರು ಮದುವೆ ಆಗೋ ಹುಡುಗಿ ಹೇಗಿರುತ್ತಾಳೆ ಎಂಬಿತ್ಯಾದಿ ವಿಚಾರಗಳು ಚರ್ಚೆ ಆಗುತ್ತಲೇ ಇರುತ್ತವೆ. ಆದರೆ, ಪ್ರತಿ ಬಾರಿ ಅವರು ಒಂದಲ್ಲ ಒಂದು ಕಾರಣ ನೀಡಿ ಈ ವಿಚಾರದಿಂದ ತಪ್ಪಿಸಿಕೊಳ್ಳುತ್ತಾರೆ.

ಸಲ್ಮಾನ್-ಪ್ರಭಾಸ್ ಮದುವೆ ಆದ್ರೆ ಮಾತ್ರ ನಾನು ವಿವಾಹ ಆಗೋದು ಎಂದ ದಕ್ಷಿಣದ ಸ್ಟಾರ್ ನಟ
ಪ್ರಭಾಸ್-ಸಲ್ಲು
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:May 23, 2024 | 12:45 PM

ಸಲ್ಮಾನ್ ಖಾನ್ ಹಾಗೂ ಪ್ರಭಾಸ್ (Prabhas) ಅವರಿಗೆ ಮದುವೆ ವಯಸ್ಸು ಮೀರಿ ಹೋಗಿದೆ. ಆದಾಗ್ಯೂ ಇವರು ಮದುವೆ ಆಗೋ ಆಲೋಚನೆ ಮಾಡಿಲ್ಲ. ಇದಕ್ಕೆ ಅವರು ಯಾವುದೇ ಕಾರಣ ನೀಡೋಕೂ ಹೋಗಿಲ್ಲ. ಇವರ ಬಗ್ಗೆ ಒಂದಲ್ಲ ಒಂದು ವಿಚಾರಕ್ಕೆ ಚರ್ಚೆ ಆಗುತ್ತಲೇ ಇರುತ್ತದೆ. ಈಗ ಸ್ಟಾರ್ ನಟರೊಬ್ಬರಿಗೆ ಮದುವೆ ಬಗ್ಗೆ ಕೇಳಲಾಗಿದೆ. ಇದಕ್ಕೆ ಅವರು ಸಲ್ಮಾನ್ ಖಾನ್, ಪ್ರಭಾಸ್ ಹಾಗೂ ಸಿಂಬು ಹೆಸರನ್ನು ಎಳೆದು ತಂದಿದ್ದಾರೆ. ಹೀಗೆ ಹೇಳಿದ್ದು ಬೇರಾರೂ ಅಲ್ಲ ತಮಿಳು ನಟ ವಿಶಾಲ್.

ವಿಶಾಲ್ ಅವರಿಗೆ 46 ವರ್ಷ. ಅವರಿನ್ನೂ ಬ್ಯಾಚುಲರ್ ಆಗಿಯೇ ಉಳಿದಿದ್ದಾರೆ. ಅವರ ಮದುವೆ ಬಗ್ಗೆ ಅನೇಕ ಪ್ರಶ್ನೆಗಳು ಇವೆ. ಅವರು ಯಾವಾಗ ಮದುವೆ ಆಗುತ್ತಾರೆ? ಅವರು ಮದುವೆ ಆಗೋ ಹುಡುಗಿ ಹೇಗಿರುತ್ತಾಳೆ ಎಂಬಿತ್ಯಾದಿ ವಿಚಾರಗಳು ಚರ್ಚೆ ಆಗುತ್ತಲೇ ಇರುತ್ತವೆ. ಆದರೆ, ಪ್ರತಿ ಬಾರಿ ಅವರು ಒಂದಲ್ಲ ಒಂದು ಕಾರಣ ನೀಡಿ ಈ ವಿಚಾರದಿಂದ ತಪ್ಪಿಸಿಕೊಳ್ಳುತ್ತಾರೆ. ಈಗ ವಿಶಾಲ್ ಅವರಿಗೆ ಮದುವೆ ಬಗ್ಗೆ ಕೇಳಲಾಗಿದೆ.

‘ಸಲ್ಮಾನ್ ಖಾನ್, ಸಿಂಬು ಹಾಗೂ ಪ್ರಭಾಸ್ ಮದುವೆ ಆದ ಬಳಿಕವೇ ನಾನು ಮದುವೆ ಆಗುತ್ತೇನೆ’ ಎಂದು ಅವರು ಹೇಳಿದ್ದಾರೆ. ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಕೆಲವರು ‘ವಿಶಾಲ್ ಅವರ ಜೀವನದಲ್ಲಿ ಮದುವೆ ಚಾಪ್ಟರ್ ಇರುವುದೇ ಇಲ್ಲ’ ಎಂದು ಕಮೆಂಟ್ ಮಾಡಿದ್ದಾರೆ. ವಿಶಾಲ್​ ತಮಗೆ ಹೊಂದಿಕೆ ಆಗೋ ಹುಡುಗಿಯ ಹುಡುಕಾಟದಲ್ಲಿ ಇದ್ದಾರಂತೆ.

ಸಲ್ಮಾನ್ ಖಾನ್ ಅವರಿಗೆ ಈಗ 58 ವರ್ಷ ವಯಸ್ಸು. ಅವರು ಮದುವೆ ಆಗೋ ಆಲೋಚನೆ ಮಾಡಿಲ್ಲ. ಇನ್ನುಮುಂದೆ ಅವರು ಮದುವೆ ಆಗುವುದು ಅನುಮಾನವೇ. ಇಷ್ಟೊಂದು ಹಣ ಇದ್ದು ಸಲ್ಲು ತಮ್ಮದೇ ಸಂಸಾರವನ್ನು ಏಕೆ ಆರಂಭಿಸಿಲ್ಲ ಅನ್ನೋದು ಅನೇಕರ ಪ್ರಶ್ನೆ. ಸಲ್ಲು ಈಗಾಗಲೇ ಅನೇಕ ನಟಿಯರ ಜೊತೆ ಸುತ್ತಾಟ ನಡೆಸಿದ್ದಾರೆ. ಯಾವುದೂ ಮದುವೆವರೆಗೆ ಹೋಗಿಲ್ಲ.

ಇದನ್ನೂ ಓದಿ: ಯಾರಿದು ಬುಜ್ಜಿ? ಪ್ರಭಾಸ್​ರ ನಂಬಿಕಸ್ತ ಗೆಳೆಯ, ಮೇ 22ಕ್ಕೆ ರಿವೀಲ್

ಪ್ರಭಾಸ್ ಮದುವೆ ವಿಚಾರಕ್ಕೆ ಬಂದರೆ ಅವರಿಗೆ 44 ವರ್ಷ ವಯಸ್ಸು. ಅವರು ಹಲವು ಬ್ಲಾಕ್​ಬಸ್ಟರ್ ಸಿನಿಮಾಗಳನ್ನು ನೀಡಿದ್ದಾರೆ. ಅನುಷ್ಕಾ ಶೆಟ್ಟಿ ಜೊತೆ ಅವರ ಹೆಸರು ತಳುಕುಹಾಕಿಕೊಂಡಿತ್ತು. ಇನ್ನು, ಕಾಲಿವುಡ್ ನಟ ಸಿಂಬು ಕೂಡ ಈ ಮೊದಲು ಕೆಲವರ ಜೊತೆ ಡೇಟ್ ಮಾಡಿದ್ದರು. ಆದರೆ, ಮದುವೆ ಆಗುವ ಆಲೋಚನೆಯನ್ನು ಅವರು ಮಾಡಿಲ್ಲ.

ವಿಶಾಲ್ ಅವರ ನಟನೆಯ ‘ರತ್ನಂ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿದೆ. ಇದನ್ನು ಹರಿ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಕಮಾಲ್ ಮಾಡಲು ವಿಫಲವಾಗಿದೆ.  ಅವರು ಅಣ್ಣಾಮಲೈ ಬಯೋಪಿಕ್​ನ ಭಾಗವಾಗಲಿದ್ದಾರೆ ಎಂದು ವರದಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:23 am, Thu, 23 May 24

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ