ಹಾವಿನ ವಿಷ ಪ್ರಕರಣ: ಯೂಟ್ಯೂಬರ್ ಎಲ್ವಿಶ್ ಯಾದವ್ ವಿರುದ್ಧ ಇಡಿ ತನಿಖೆ

ಹಾವಿನ ವಿಷದ ಮಾರಾಟದಲ್ಲಿ ತೊಡಗಿದ್ದ ಬಿಗ್​ಬಾಸ್ ವಿನ್ನರ್ ಎಲ್ವಿಶ್ ಯಾದವ್​ಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಹಾವಿನ ವಿಷ ಮಾರಾಟ ಪ್ರಕರಣವನ್ನು ಇದೀಗ ಇಡಿ (ಜಾರಿ ನಿರ್ದೇಶನಾಲಯ) ಕೈಗೆತ್ತಿಕೊಂಡಿದೆ.

ಹಾವಿನ ವಿಷ ಪ್ರಕರಣ: ಯೂಟ್ಯೂಬರ್ ಎಲ್ವಿಶ್ ಯಾದವ್ ವಿರುದ್ಧ ಇಡಿ ತನಿಖೆ
Follow us
ಮಂಜುನಾಥ ಸಿ.
|

Updated on: May 23, 2024 | 5:28 PM

ಮಾಜಿ ಬಿಗ್​ಬಾಸ್ (Bigg Boss) ವಿನ್ನರ್ ಹಾಗೂ ಯೂಟ್ಯೂಬರ್ ಸಹ ಆಗಿರುವ ಎಲ್ವಿಶ್ ಯಾದವ್ (Elvish Yadav) ಇತ್ತೀಚೆಗೆ ರೇವ್ ಪಾರ್ಟಿ ಆಯೋಜನೆ ಮಾಡಿ ಬಂಧನಕ್ಕೆ ಒಳಗಾಗಿದ್ದರು. ಅವರ ಪಾರ್ಟಿಯಲ್ಲಿ ಹಾವಿನ ವಿಷವನ್ನು ಅಮಲಿನ ಪದಾರ್ಥವಾಗಿ ಬಳಕೆ ಮಾಡಲಾಗಿತ್ತು ಎಂಬ ಆರೋಪವಿದೆ. ಪ್ರಕರಣ ಸಂಬಂಧ ಎಲ್ವಿಶ್ ಯಾದವ್ ಈಗಾಗಲೇ ಬಂಧನಕ್ಕೆ ಒಳಗಾಗಿದ್ದು, ಜಾಮೀನು ಪಡೆದು ಹೊರಬಂದಿದ್ದಾರೆ. ಇದೀಗ ಎಲ್ವಿಶ್ ವಿರುದ್ಧ ಇಡಿ (ಜಾರಿ ನಿರ್ದೇಶನಾಲಯ) ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಆರಂಭಿಸಿದೆ.

ಪ್ರಕರಣದ ತನಿಖೆಯನ್ನು ನೊಯ್ಡಾ ಪೊಲೀಸರು ನಡೆಸುತ್ತಿದ್ದರು, ಇದೀಗ ಪ್ರಕರಣವನ್ನು ಇಡಿ ಸಹ ಕೈಗೆತ್ತಿಕೊಂಡಿದ್ದು, ಎಲ್ವಿಶ್ ಯಾದವ್​ಗೆ ಸಂಕಷ್ಟ ಎದುರಾಗಿದೆ. ನೊಯ್ಡಾ ಪೊಲೀಸರು ಘಟನೆ ಸಂಬಂಧ ಈಗಾಗಲೇ 1200 ಪುಟಗಳ ಜಾರ್ಜ್​ಶೀಟ್ ಸಲ್ಲಿಕೆ ಮಾಡಿದ್ದಾರೆ. ಸಾಕ್ಷಿಗಳ ಹೇಳಿಕೆಗಳು, ಎಲೆಕ್ಟ್ರಾನಿಕ್ ಸಾಕ್ಷ್ಯಗಳು, ಫೊರೆನ್ಸಿಕ್ ರಿಪೋರ್ಟ್​, ರಕ್ತ ಪರೀಕ್ಷಣಾ ವರದಿಗಳನ್ನು ಸಹ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಈ ವರದಿಗಳನ್ನು ಸಂಗ್ರಹಿಸಿರುವ ಇಡಿ, ತನಿಖೆಯನ್ನು ಮುಂದುವರೆಸಿದೆ. ಶೀಘ್ರವೇ ಎಲ್ವಿಶ್ ಯಾದವ್ ಅನ್ನು ವಿಚಾರಣೆಗೆ ಕರೆಯುವ ಸಂಭವ ದಟ್ಟವಾಗಿದೆ.

ಇದನ್ನೂ ಓದಿ:ನೋಯ್ಡಾದಲ್ಲಿ ರೇವ್ ಪಾರ್ಟಿಗಳಿಗಾಗಿ ಹಾವಿನ ವಿಷ: ಯೂಟ್ಯೂಬರ್ ಎಲ್ವಿಶ್ ಯಾದವ್ ವಿರುದ್ಧ ಕೇಸ್

ಕಳೆದ ವರ್ಷ ನವೆಂಬರ್ 3 ರಂದು ಎಲ್ವಿಶ್ ಯಾದವ್ ಹಾಗೂ ಆತನ ಸಹಚರರ ಮೇಲೆ ಅರಣ್ಯ ಸಂಪತ್ತು ಸಂರಕ್ಷಣೆ ಕಾಯ್ದೆಯ ಅಡಿ ಪ್ರಕರಣ ದಾಖಲಿಸಲಾಗಿತ್ತು. ಎಲ್ವಿಶ್ ಯಾದವ್ ಹಾಗೂ ಆತನ ಸಹಚರರು ಹಾವಿನ ವಿಷಯವನ್ನು ಮಾರಾಟ ಮಾಡುತ್ತಿದ್ದರು ಎಂದು ಆರೋಪಿಸಲಾಗಿತ್ತು. ಐದು ನಾಗರಹಾವು, ಒಂದು ಹೆಬ್ಬಾವು ಎರಡು ಸ್ಯಾಂಡ್ ಸ್ನೇಕ್, ಒಂದು ರ್ಯಾಟ್ ಸ್ನೇಕ್​​ಗಳನ್ನು ಅವರಿಂದ ವಶಕ್ಕೆ ಪಡೆಯಲಾಗಿತ್ತು. ಈ ಐವರನ್ನು ಬಂಧಿಸಿದಾಗ ಈ ಐವರಿಂದ ಹಾವಿನ ವಿಷವನ್ನು ಸಹ ವಶಪಡಿಸಿಕೊಳ್ಳಲಾಗಿತ್ತು.

ಅಷ್ಟು ಮಾತ್ರವೇ ಅಲ್ಲದೆ ಪೊಲೀಸರು, ಡ್ರಗ್ಸ್ ಹಾಗೂ ಸೈಕೋಟ್ರಾಫಿಕ್ ವಸ್ತುಗಳನ್ನು ಸಹ ಇವರಿಂದ ವಶಪಡಿಸಿಕೊಂಡಿದ್ದರು. ಮಾರ್ಚ್​ ತಿಂಗಳಲ್ಲಿ ಎಲ್ವಿಶ್ ಯಾದವ್ ಹಾಗೂ ಆತನ ಸಹಚರರನ್ನು ಬಂಧಿಸಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಪೊಲೀಸರ ವಿಚಾರಣೆ ವೇಳೆ ತಾನು ಹಾವಿನ ವಿಷವನ್ನು ಪಾರ್ಟಿಗಳಿಗೆ ಸರಬರಾಜು ಮಾಡುತ್ತಿದ್ದುದಾಗಿ ಒಪ್ಪಿಕೊಂಡಿದ್ದಾನೆ. ಆದರೆ ಆತನ ವಕೀಲರು, ಎಲ್ವಿಶ್ ಯಾದವ್​ ಹಾವಿನ ವಿಷ ಮಾರಾಟದಲ್ಲಿ ಭಾಗಿಯಾಗಿಲ್ಲವೆಂದು ವಾದಿಸಿದ್ದಾರೆ. ಹಾವಿನ ವಿಷ ಸರಬರಾಜಿಗೆ ಲಕ್ಷಾಂತರ ರೂಪಾಯಿ ಹಣವನ್ನು ಎಲ್ವಿಶ್ ಯಾದವ್ ಪಡೆಯುತ್ತಿದ್ದ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ