
ಚೀತಾ (Cheetah), ಚಿರತೆ, ಸಿಂಹ, ಹುಲಿ ಇತ್ಯಾದಿ ನರ ಭಕ್ಷಕ ಪ್ರಾಣಿಗಳೆಂದರೆ ಬಹುತೇಕ ಎಲ್ಲರೂ ಭಯಪಟ್ಟುಕೊಳ್ಳುತ್ತಾರೆ. ಅವುಗಳ ಘರ್ಜನೆ ಕೇಳಿದರೆ ಸಾಕು ಮೈಯೆಲ್ಲಾ ನಡುಗಿ ಹೋಗುತ್ತದೆ. ಹೀಗಿದ್ರೂ ಕೂಡಾ ಈ ಕಾಡು ಪ್ರಾಣಿಗಳನ್ನು (wild animals) ಸಾಕು ಪ್ರಾಣಿಗಳಂತೆ ಸಾಕುವವರೂ ಇದ್ದಾರೆ. ಇದಕ್ಕೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಕಾಣಸಿಗುತ್ತಿರುತ್ತವೆ. ಅದೇ ರೀತಿ ಇಲ್ಲೊಬ್ಬಳು ಮಹಿಳೆ ಬೆಕ್ಕನ್ನು ಮುದ್ದಿಸುವಂತೆ ದೈತ್ಯ ಚೀತಾವನ್ನು ತಬ್ಬಿ ಮುದ್ದಿಸಿದ್ದಾಳೆ. ಈ ವಿಡಿಯೋ ಇದೀಗ ಸಖತ್ ವೈರಲ್ (Viral) ಆಗಿದ್ದು, ದೈತ್ಯ ಚೀತಾ ಬೆಕ್ಕಿನಂತೆ ವರ್ತಿಸಿದ್ದನ್ನು. ದೃಶ್ಯವನ್ನು ಕಂಡು ನೆಟ್ಟಿಗರು ಬಾಯಿ ಮೇಲೆ ಬೆರಳಿಟ್ಟುಕೊಂಡ್ಡಿದ್ದಾರೆ.
ಸಾಮಾನ್ಯವಾಗಿ ಜನ ನಾಯಿ, ಬೆಕ್ಕುಗಳನ್ನು ಮುದ್ದಾಡುತ್ತಾರೆ. ಆದ್ರೆ ಇಲ್ಲೊಬ್ಬಳು ಮಹಿಳೆ ದೈತ್ಯ ಚೀತಾವನ್ನು ಮುದ್ದಾಡಿದ್ದಾಳೆ. ಆ ಚೀತಾ ಕೂಡಾ ಅಷ್ಟೇ ಮಹಿಳೆಯೊಂದಿಗೆ ಬಹಳ ಪ್ರೀತಿ ಪೂರ್ವಕವಾಗಿ ಬೆಕ್ಕಿನ ಮರಿಯಂತೆ ವರ್ತಿಸಿದೆ. lisatorajaqueline ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಕುರಿತ ವಿಡಿಯೋವನ್ನು ಶೇರ್ ಮಾಡಲಾಗಿದೆ.
ಇದನ್ನೂ ಓದಿ: ಮದುವೆ ಸಮಯದಲ್ಲೂ ಗ್ರಾಹಕನಿಗೆ ಸ್ಪಂದಿಸಿದ ವರ, ವಿಡಿಯೋ ವೈರಲ್
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ದೈತ್ಯ ಚೀತಾವೊಂದು ಬೆಕ್ಕಿನಂತೆ ಮಹಿಳೆಯ ಬಳಿ ಬರುವ ದೃಶ್ಯವನ್ನು ಕಾಣಬಹುದು. ಹೀಗೆ ಬಂದ ಚೀತಾವನ್ನು ಆ ಮಹಿಳೆ ತಬ್ಬಿ ಮುದ್ದಾಡಿದ್ದಾಳೆ.
ಏಪ್ರಿಲ್ 6 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಆ ಮಹಿಳೆಯ ಧೈರ್ಯಕ್ಕೆ ಮೆಚ್ಚಲೇಬೇಕುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಿಜಕ್ಕೂ ಈ ದೃಶ್ಯ ತುಂಬಾನೇ ಸುಂದರವಾಗಿದೆʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಮಹಿಳೆ ಹಾಗೂ ಚೀತಾದ ಬಾಂಧವ್ಯದ ಸುಂದರ ದೃಶ್ಯಕ್ಕೆ ಮನಸೋತಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:55 pm, Sat, 3 May 25