Viral Video: ಬಿಹಾರ; ವಿದೇಶದಿಂದ ಮರಳಿದ ಗಂಡ ತಲಾಖ್​ ನೀಡಿದ, ಹೆಂಡತಿ ಬೀದಿರಂಪಕ್ಕಿಳಿದಳು

Divorce : ಈ ಘಟನೆ ಬಿಹಾರದಲ್ಲಿ ನಡೆದಿದೆ. ಮದುವೆಯಾದ 11ತಿಂಗಳಿಗೆ ಹೆಂಡತಿಯನ್ನು ಬಿಟ್ಟು ವಿದೇಶಕ್ಕೆ ಹೋದ ಗಂಡ ನಾಲ್ಕು ವರ್ಷಗಳ ಮೇಲೆ ಮರಳಿದ್ದಾನೆ. ಆತನಕ ತಾಯಿಯ ಮನೆಯಲ್ಲಿದ್ದ ಆಕೆ ಅತ್ತೆಯಮನೆಗೆ ಮರಳಿದ್ದಾಳೆ. ಆದರೆ ಗಂಡ ಆಕೆಯನ್ನು ಮನೆಯೊಳಗೆ ಕಾಲಿಡಲು ಬಿಡದೆ ತಲಾಖ್ ನೀಡಿದ್ದಾನೆ. ಮುಂದೇನಾಯಿತು ಎಂದು ಈ ವಿಡಿಯೋ ನೋಡಿ.

Viral Video: ಬಿಹಾರ; ವಿದೇಶದಿಂದ ಮರಳಿದ ಗಂಡ ತಲಾಖ್​ ನೀಡಿದ, ಹೆಂಡತಿ ಬೀದಿರಂಪಕ್ಕಿಳಿದಳು
ವಿದೇಶದಿಂದ ಮರಳಿ ಬಂದ ಗಂಡ ವಿಚ್ಛೇದನ ನೀಡಿದಾಗ ಜಗಳಕ್ಕಿಳಿದ ಹೆಂಡತಿ

Updated on: Aug 25, 2023 | 12:47 PM

Jehanabad: ಗಂಡ ತಲಾಖ್ ನೀಡಿದ ನಂತರ ಈ ಮಹಿಳೆ ಸಾರ್ವಜನಿಕವಾಗಿ ಬೀದಿಗಿಳಿದು ಗಂಡನೊಂದಿಗೆ ಜೋರು ಜಗಳಕ್ಕಿಳಿದಿದ್ದಾಳೆ. ಬೀದಿಯಲ್ಲಿರುವ ಜನರೆಲ್ಲಾ ಸುತ್ತುವರಿದು ಜಗಳ ನೋಡುತ್ತಿದ್ದಾರೆ. ಆಗ ಜಗಳವನ್ನು ಬಿಡಿಸಲು ಗಂಡನ ಗೆಳೆಯ ಮಧ್ಯ ಪ್ರವೇಶಿಸಿದ್ದಾನೆ. ‘ನೀ ಸುಮ್ನಿರು ನಾನು ನನ್ನ ಗಂಡನೊಂದಿಗೆ ಮಾತನಾಡುತ್ತಿದ್ದೇನೆ!’ ಎಂದಿದ್ದಾಳೆ. ಈ ವಿಚಿತ್ರ ಜಗಳ ಬಿಹಾರದ (Bihar) ಜೆಹಾನಾಬಾದ್​ನಲ್ಲಿ ನಡೆದಿದೆ. ಮದುವೆಯಾಗಿ ಒಂದು ವರ್ಷದೊಳಗೆ ಆಕೆಯನ್ನು ಬಿಟ್ಟು ನಾಲ್ಕು ವರ್ಷಗಳ ಕಾಲ ಗಂಡ ವಿದೇಶಕ್ಕೆ ಹಾರಿದ್ದಾನೆ. ನಂತರ ವಾಪಾಸು ಬಂದು ಆಕೆಯನ್ನು ನಿರಾಕರಿಸಿ ತ್ರಿವಳಿ ತಲಾಖ್ ನೀಡಿದ್ದಾನೆ.

ಇದನ್ನೂ ಓದಿ : Viral Video: ತಾಯಿಯ ಹೊಟ್ಟೆಯಿಂದ ಹೊರಬರುತ್ತಿದ್ದಂತೆ ಸಾಹಸ ಪ್ರದರ್ಶನಕ್ಕಿಳಿದ ಮಗುವಿನ ವಿಡಿಯೋ ವೈರಲ್

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ತಲಾಖ್​ನ ನಂತರ ಗಂಡ ಗೆಳೆಯನ ಬೈಕ್ ಮೇಲೆ ಪರಾರಿಯಾಗಲು ಯತ್ನಿಸಿದಾಗ ಆಕೆ ಅವನನ್ನು ತಡೆಯಲು ಪ್ರಯತ್ನಿಸಿದ್ದನ್ನು ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ. ಉತ್ಕರ್ಷ ಸಿಂಗ್​ ಎನ್ನುವವರು ಈ ವಿಡಿಯೋ ಅನ್ನು ಆ. 23ರಂದು X (ಟ್ವಿಟರ್​) ನಲ್ಲಿ ಪೋಸ್ಟ್​ ಮಾಡಿದ್ದಾರೆ. ವಿದೇಶದಿಂದ ಮರಳಿದ ಗಂಡ ಆಕೆಯನ್ನು ನಿರಾಕರಿಸಿದ್ದಾನೆ. ಆಗ ಆಕೆ ನಿನ್ನನ್ನು ಹೋಗಲು ಬಿಡಲಾರೆ. 11 ತಿಂಗಳಿನಿಂದ ನನ್ನೊಂದಿಗೆ ಸಂಸಾರ ಮಾಡಿದ್ದನ್ನು ಮರೆತಿದ್ದೀಯಾ? ಎಂದು ಕೇಳಿದ್ದಾಳೆ.

ಈ ಬೀದಿಜಗಳದ ದೃಶ್ಯ ಇಲ್ಲಿದೆ

ಅವನ ಈ ನಡೆಯನ್ನು ಪ್ರಶ್ನಿಸಿದ್ದಾಳೆ. ಇದೀಗ ಈ ಜಗಳ ಗ್ರಾಂ.ಪಂ.ನ ಮೆಟ್ಟಿಲನ್ನೇರಲಿದೆ. ಅವನು ವಿದೇಶದಿಂದ ಹಿಂದಿರುಗಿದ ಮೇಲೆ ತಾಯಿಯ ಮನೆಯಿಂದ ಅತ್ತೆಯ ಮನೆಗೆ ಹೋಗಿದ್ದಾಳೆ. ಅಲ್ಲಿ ಗಂಡನ ಕುಟುಂಬದವರು ಆಕೆಯನ್ನು ತಡೆದಿದ್ದಾರೆ. ಅಲ್ಲದೇ ಮನೆಯ ಆವರಣದಿಂದ ಹೊರಹೋಗುವಂತೆ ಹೇಳಿದ ಗಂಡ ಬಾಗಿಲನ್ನು ಮುಚ್ಚಿದ್ದಾನೆ. ಆಕೆ ಎಷ್ಟೋ ಗಂಟೆಗಳ ಕಾಲ ಹೊರಗೇ ಕಾದು ನಂತರ ಸ್ಫೋಟಗೊಂಡಿದ್ದಾಳೆ.

ಇದನ್ನೂ ಓದಿ : Viral Video: ಕಾವಾಲಾ ಕಾವು; ಉಗಾಂಡಾದ ಮಕ್ಕಳ ವಿಡಿಯೋ ಪೋಸ್ಟ್ ಮಾಡಿದ ಗಾಯಕಿ ಶಿಲ್ಪಾ ರಾವ್​

ಆರೋಪಿ ಡ್ಯಾನಿಷ್​ 2019ರಲ್ಲಿ ಶಹಬಾಝ್​ ಝರೀನ್​ನೊಂದಿಗೆ ಮದುವೆಯಾಗಿದ್ದ. 11 ತಿಂಗಳ ನಂತರ ವಿದೇಶಕ್ಕೆ ಹಾರಿಹೋದ. ‘ಜನವರಿಯಲ್ಲಿ ಫೋನ್ ಮಾಡಿ, ಭಾರತಕ್ಕೆ ಹಿಂದಿರುಗುವುದಾಗಿ ಹೇಳಿದ್ದ. ಆದರೆ ಪರಿಸ್ಥಿತಿ ಹೀಗಾಗಿದೆ. ಸಾರ್ವಜನಿಕವಾಗಿ ನಡೆದ ಈ ಜಗಳದಿಂದ ನನ್ನ ಗೌರವಕ್ಕೆ ಧಕ್ಕೆ ಉಂಟಾಗಿದೆ. ನನ್ನನ್ನು ಇಂಥ ಪರಿಸ್ಥಿತಿಗೆ ಗುರಿಮಾಡಿದ ಉದ್ದೇಶ ಅಲ್ಲಾಹ್​ನಿಗೆ ಮಾತ್ರ ಗೊತ್ತಿದೆ.’ ಎಂದಿದ್ದಾಳೆ ಶಹಭಾಝ್​ ಝರೀನ್​.

ಮತ್ತಷ್ಟು ವೈರಲ್​ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 12:44 pm, Fri, 25 August 23