
ಇತ್ತೀಚೆಗಿನ ದಿನಗಳಲ್ಲಿ ಕ್ಯಾಬ್ ಬುಕ್ ಮಾಡಲು ರೈಡ್ ಹೇಲಿಂಗ್ ಅಪ್ಲಿಕೇಶನ್ (Ride hailing app) ಬಳಸುವವರೇ ಹೆಚ್ಚು. ಇಲ್ಲಿ ನೀವು ಯಾವ ಸ್ಥಳದಲ್ಲಿದ್ದೀರಿ ಹಾಗೂ ಯಾವ ಸ್ಥಳ ತಲುಪಬೇಕು ಎನ್ನುವುದು ಉಲ್ಲೇಖಿಸಬೇಕಾಗುತ್ತದೆ. ಕ್ಯಾಬ್ ಡ್ರೈವರ್ ಇಲ್ಲಿ ಉಲ್ಲೇಖಿಸಿದ ಸ್ಥಳಕ್ಕೆ ಪ್ರಯಾಣಿಕರನ್ನು ತಲುಪಿಸುತ್ತಾರೆ. ಆದರೆ ಇದೀಗ ಇದೇ ವಿಚಾರಕ್ಕೆ ಕ್ಯಾಬ್ ಡ್ರೈವರ್ (Cab Driver) ಹಾಗೂ ಮಹಿಳೆಯ ನಡುವೆ ವಾಗ್ವಾದ ನಡೆದಿದೆ. ಈ ಅಪ್ಲಿಕೇಶನ್‌ನಲ್ಲಿ ನಿರ್ದಿಷ್ಟ ಪಡಿಸಿದ ಸ್ಥಳವನ್ನು ಮೀರಿ ಮುಂದೆ ಹೋಗಲು ನಿರಾಕರಿಸಿದ್ದು, ಹಣ ಪಾವತಿ ಮಾಡುವುದಿಲ್ಲ ಎಂದು ಮಹಿಳೆಯ ಬೆದರಿಕೆ ಹಾಕಿರುವ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಡ್ಯಾಶ್ ಕ್ಯಾಮ್ ನಲ್ಲಿ ಸೆರೆ ಹಿಡಿಯಲಾದ ವಾಗ್ವಾದದ ದೃಶ್ಯ ನೋಡಿದ ಈ ನೆಟ್ಟಿಗರು ಮಹಿಳೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಶೋನೇಕಪೂರ್ (ShoneeKapoor) ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ರೈಡ್ ಹೇಲಿಂಗ್ ಅಪ್ಲಿಕೇಶನ್ ನಿರ್ದಿಷ್ಟಪಡಿಸಿದ ಡ್ರಾಪ್-ಆಫ್ ಪಾಯಿಂಟ್ ಮೀರಿ ಹೋಗಲು ಕ್ಯಾಬ್ ಚಾಲಕನು ನಿರಾಕರಿಸಿದ್ದು, ಈ ಮಹಿಳೆಯು ತಾನು ಹಣ ಪಾವತಿಸುವುದಿಲ್ಲ ಎಂದು ಬೆದರಿಕೆ ಹಾಕಿದ್ದಾಳೆ. ನೀವು ಪಾವತಿಸದೇ ಹೋಗುವಿರಾದರೆ, ಈಗಲೇ ಹೊರಡಿ ಎಂದು ಡ್ರೈವರ್ ಹೇಳುವುದನ್ನು ನೋಡಬಹುದು.
Not all women, but always women. pic.twitter.com/jf2GINptp0
— ShoneeKapoor (@ShoneeKapoor) September 21, 2025
ಈ ವೇಳೆಯಲ್ಲಿ ಮಹಿಳೆ ತಾನು ಕಾರಿನೊಳಗೆ ಕುಳಿತುಕೊಳ್ಳಬಾರದೆ ಎಂದು ಪ್ರಶ್ನಿಸಿದ್ದು, ಮತ್ತೆ ಚಾಲನೆ ಮಾಡುವಂತೆ ಒತ್ತಡ ಹಾಕುವುದನ್ನು ನೀವಿಲ್ಲಿ ಕಾಣಬಹುದು. ಆದರೆ ಚಾಲಕನು ಇದು ಡ್ರಾಪ್-ಆಫ್ ಪಾಯಿಂಟ್, ನಾನು ನಿಮ್ಮನ್ನು ಏಕೆ ಒಳಗೆ ಬಿಡಬೇಕು ಎಂದು ಪ್ರಶ್ನೆ ಮಾಡಿದ್ದಾನೆ. ನೀವು ರೆಡಿ ಇದ್ರೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಬಹುದು, ಆದರೆ ನಾನು ನಿಗದಿತ ಸ್ಥಳದಿಂದ ದೂರಕ್ಕೆ ಡ್ರೈವ್ ಮಾಡುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾನೆ.
ಈ ವೇಳೆಯಲ್ಲಿ ತಾನು ಹಣ ಪಾವತಿ ಮಾಡುವುದಿಲ್ಲ ಎಂದು ಮಹಿಳೆ ನೇರವಾಗಿ ಹೇಳಿದ್ದಕ್ಕೆ, ನೀವು ಹಣ ಪಾವತಿಸದಿದ್ದರೆ ನನಗೆ ಏನು ಸಮಸ್ಯೆ ಇಲ್ಲ. 132 ರೂ ನನ್ನನ್ನು ಶ್ರೀಮಂತನನ್ನಾಗಿ ಮಾಡುವುದಿಲ್ಲ, ಹಾಗೆಯೇ ನಿಮ್ಮನ್ನೂ ಶ್ರೀಮಂತರನ್ನಾಗಿ ಮಾಡುವುದಿಲ್ಲ ಎಂದು ಹೇಳಿದ್ದಾನೆ. ಹೀಗೆನ್ನುತ್ತಿದ್ದಂತೆ ಮಹಿಳೆಯೂ ಯಾವ ಸಂದರ್ಭಗಳಲ್ಲಿ ನಾನು ನಿಮ್ಮ ಕ್ಯಾಬ್ ಅನ್ನು ಬುಕ್ ಮಾಡಿದ್ದೇನೆ ಎಂದು ತಿಳಿದಿಲ್ಲ ಎಂದು ವ್ಯಂಗ್ಯವಾಗಿ ಹೇಳುತ್ತಾನೆ.
ಈ ಮಾತು ಕೇಳುತ್ತಿದ್ದಂತೆ ಚಾಲಕನ ಪಿತ್ತ ನೆತ್ತಿಗೇರುತ್ತದೆ, ಕೋಪದಲ್ಲೇ ಚಾಲಕನು ನಾನು ನಿಮ್ಮ ಹಣವನ್ನು ತಿನ್ನುತ್ತಿಲ್ಲ. ಮಾತಿನಲ್ಲಿ ಹಿಡಿತವಿರಲಿ ನೀವು ಯಾಕೆ ಹೀಗೆ ಮಾತಾಡುತ್ತೀರಿ?. ಇಲ್ಲಿಯವರೆಗೆ ನಿಮ್ಮನ್ನು ಕರೆತಂದಿದ್ದರೂ ನೀವು ನನ್ನ ಹಣವನ್ನು ಪಾವತಿ ಮಾಡುತ್ತಿಲ್ಲ, ಇದೆಷ್ಟು ಸರಿ ಎಂದು ಪ್ರಶ್ನೆ ಮಾಡಿರುವುದನ್ನು ಕಾಣಬಹುದು.
ಇದನ್ನೂ ಓದಿ:ಊಬರ್ ಚಾಲಕ ರೈಡ್ ಕ್ಯಾನ್ಸಲ್ ಮಾಡಿದ್ರೂ, 5 ಸ್ಟಾರ್ ರೇಟಿಂಗ್ ಕೊಟ್ಟ ಪ್ರಯಾಣಿಕ, ಕಾರಣವೇನು?
ಸೆಪ್ಟೆಂಬರ್ 21 ರಂದು ಶೇರ್ ಮಾಡಲಾದ ಈ ವಿಡಿಯೋವನ್ನು ನಾಲ್ಕು ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದು, ಒಬ್ಬ ಬಳಕೆದಾರ ಈ ಮಹಿಳೆಯರನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟ. ಅವರು ಪಬ್ ಗಳು, ಬಾರ್ ಗಳಿಗೆ ಸಾವಿರಾರು ರೂಪಾಯಿ ಖರ್ಚು ಮಾಡ್ತಾರೆ, ಆದರೆ ಕ್ಯಾಬ್ ಗಳಿಗೆ 100 ರೂಪಾಯಿ ಕೊಡಲು ಅವರಿಗೆ ಆಗಲ್ಲ ಎಂದಿದ್ದಾರೆ. ಮತ್ತೊಬ್ಬರು ಎಲ್ಲಾ ಕ್ಯಾಬ್ ಚಾಲಕರು ಈ ಮಹಿಳೆಯನ್ನು ನೋ ಡ್ರೈವ್ ಲಿಸ್ಟ್ ನಲ್ಲಿ ಸೇರಿಸಬೇಕು ಎಂದು ಹೇಳಿದ್ದಾರೆ. ಗೌರವ ಕೊಟ್ಟರೆ ಗೌರವ ಬರುತ್ತದೆ. ಕ್ಯಾಬ್ ಗಳನ್ನು ಬುಕ್ ಮಾಡುವವರು ಚಾಲಕರು ಗುಲಾಮರಲ್ಲ ಎಂದು ತಿಳಿದಿರಬೇಕು. ಸಭ್ಯತೆಯಿಂದ ವರ್ತಿಸುವುದರಿಂದ ಒಂದು ಪೈಸೆಯೂ ಖರ್ಚಾಗುವುದಿಲ್ಲ ಎಂದು ಮತ್ತೊಬ್ಬ ಬಳಕೆದಾರ ಖಾರವಾಗಿಯೇ ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ