ಕೆಮ್ಮು, ಶೀತವೆಂದು ವೈದ್ಯರ ಸಲಹೆಯಿಲ್ಲದೆ ಔಷಧ ತೆಗೆದುಕೊಂಡ ಮಹಿಳೆಯ ಕಣ್ಣಿನಿಂದ ಹರಿಯಿತು ರಕ್ತದ ಕೋಡಿ

|

Updated on: Apr 17, 2024 | 12:21 PM

Viral News:ನೀವೇ ಸ್ವಯಂ ವೈದ್ಯರಾಗಲು ಹೋಗಬೇಡಿ, ಸಣ್ಣ ಪುಟ್ಟ ಜ್ವರ, ಶೀತವಷ್ಟೇ ತಾನೆ ಎಂದು ನಿಮಗೆ ಅನಿಸಬಹುದು ಆದರೆ ವೈದ್ಯರ ಸಲಹೆಯಿಲ್ಲದೆ ತಿನ್ನುವ ಮಾತ್ರೆಗಳು ನಿಮ್ಮನ್ನು ಜೀವನ ಪರ್ಯಂತ ನರಕಕ್ಕೆ ತಳ್ಳಬಹುದು, ಅದಕ್ಕೆ ಈ ಇರಾಕ್​ ಮಹಿಳೆಯೇ ಸಾಕ್ಷಿ. ಆದರೆ ಶೀತ, ಕೆಮ್ಮೆಂದು ತೆಗೆದುಕೊಂಡ ಔಷಧವನ್ನು ಆಕೆಯನ್ನು ಯಾವ ಪರಿಸ್ಥಿತಿಗೆ ನೂಕಿದೆ ನೋಡಿ.

ಕೆಮ್ಮು, ಶೀತವೆಂದು ವೈದ್ಯರ ಸಲಹೆಯಿಲ್ಲದೆ ಔಷಧ ತೆಗೆದುಕೊಂಡ ಮಹಿಳೆಯ ಕಣ್ಣಿನಿಂದ ಹರಿಯಿತು ರಕ್ತದ ಕೋಡಿ
ಔಷಧ
Follow us on

ಮನೆಮದ್ದು ಬೇರೆ, ಆದರೆ ಕೆಮ್ಮು, ಶೀತ, ಜ್ವರ ಎಂದು ಇಂಗ್ಲಿಷ್ ಮೆಡಿಸಿನ್​ ಅನ್ನು ವೈದ್ಯರ ಸಲಹೆಯಿಲ್ಲದೆ ತೆಗೆದುಕೊಂಡರೆ ಏನಾಗಬಹುದು ಎನ್ನುವುದಕ್ಕೆ ಈ ಮಹಿಳೆಯೇ ಸಾಕ್ಷಿ. ನೆಗಡಿಯಾದರೆ ಸಾಕು ಔಷಧಿ ತೆಗೆದುಕೊಳ್ಳುತ್ತೇವೆ, ಎಷ್ಟೋ ಸಲ ವೈದ್ಯರ ಸಲಹೆಯನ್ನೂ ತೆಗೆದುಕೊಳ್ಳುವುದಿಲ್ಲ. ಮಹಿಳೆ ಕೂಡ ಅದೇ ತಪ್ಪನ್ನು ಮಾಡಿದ್ದಾಳೆ. ಜ್ವರ ತರಹದ ಲಕ್ಷಣಗಳು ಕಾಣಿಸಿಕೊಂಡಾಗ, ಮೈ-ಕೈ ನೋವು ನಿವಾರಕ ಇಬುಪ್ರೊಫೇನ್ ಎನ್ನುವ ಮಾತ್ರೆಯನ್ನು ನುಂಗಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಕಣ್ಣು ಕೆಂಪಾಯಿತು, ಮುಖದ ಸುಕ್ಕುಗಟ್ಟಿದಂತಾಗಿ ಹಾವಿನ ಚರ್ಮದಂತಾಗಿತ್ತು.

ತುಟಿಗಳ ಮೇಲೆ ಹಳದಿ ಪದರವು ರೂಪುಗೊಂಡಿತ್ತು, ಹಾಗೆಯೇ ಕಣ್ಣಿನಿಂದ ರಕ್ತದ ಕೋಡಿಯೇ ಹರಿಯಲು ಪ್ರಾರಂಭವಾಗಿತ್ತು. ಪ್ರತಿ ಮಾತ್ರೆ, ಔಷಧಿಗಳ ಮೇಲೆ ವೈದ್ಯರ ಸಲಹೆ ಇಲ್ಲದೆ ನೀವು ಇದನ್ನು ತೆಗೆದುಕೊಳ್ಳಬೇಡಿ ಎಂದು ಬರೆದಿರುತ್ತದೆ.

ಇಬುಪ್ರೊಫೇನ್ ಸಾಮಾನ್ಯವಾಗಿ ಸುರಕ್ಷಿತವಾಗಿದೆ, ಆದರೆ ವೈದ್ಯರ ಸಲಹೆಯಿಲ್ಲದೆ ಅದನ್ನು ತೆಗೆದುಕೊಳ್ಳಬಾರದು ಎಂದು ವೈದ್ಯರು ಹೇಳಿದ್ದಾರೆ. ಆದರೆ ಇರಾಕ್ ಮಹಿಳೆ ಇದೇ ತಪ್ಪನ್ನು ಮಾಡಿದ್ದಳು. ಮೈ-ಕೈ ನೋವು ಶೀತವೆಂದು ಈ ಔಷಧಗಳನ್ನು ತೆಗೆದುಕೊಂಡ ಬಳಿಕ ಈ ಲಕ್ಷಣಗಳು ಗೋಚರಿಸಲು ಪ್ರಾರಂಭವಾಯಿತು.

ಮತ್ತಷ್ಟು ಓದಿ: ನವಜಾತ ಶಿಶುವನ್ನು ಬಿಸಿಲಿನಲ್ಲಿ ಮಲಗಿಸಿ, ಹಾಲು ನೀಡದೆ, ಉಸಿರುಚೆಲ್ಲುವಂತೆ ಮಾಡಿದ ತಂದೆ

ದೇಹದ ಪ್ರತಿರಕ್ಷಣಾ ವ್ಯವಸ್ಥೆ ಮೇಲೆ ಔಷಧವು ಆಕ್ರಮಣ ಮಾಡಲು ಪ್ರಾರಂಭಿಸಿದಾಗ ಇದು ಸಂಭವಿಸುತ್ತದೆ. ಇದು ದೇಹದ ಆರೋಗ್ಯಕರ ಜೀವಕೋಶಗಳ ಮೇಲೆ ದಾಳಿ ಮಾಡುತ್ತದೆ. ವ್ಯಕ್ತಿಗೆ ಹಾನಿ ಮಾಡಲು ಪ್ರಾರಂಭಿಸುತ್ತಾರೆ.
ಇದರಿಂದ ದೇಹದಲ್ಲಿ ಗುಳ್ಳೆಗಳು ಏಳಬಹುದು ಮತ್ತು ಊತ ಉಂಟಾಗುತ್ತದೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು ಸ್ಟೀವನ್ಸ್-ಜಾನ್ಸನ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ಇದು ಅಪರೂಪದ ಸೋಂಕಾಗಿದೆ.

ಮಹಿಳೆಯು ಈಗ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಏನೂ ತಿನ್ನಲು, ಕುಡಿಯಲು ಸಾಧ್ಯವಾಗುತ್ತಿಲ್ಲ. ಗಂಟಲಿಗೆ ಟ್ಯೂಬ್ ಅಳವಡಿಸಲಾಗಿದೆ. ಮಹಿಳೆಗೆ ಈ ಮೊದಲು ಯಾವುದಾದರೂ ಕಾಯಿಲೆ ಇತ್ತೇ ಎನ್ನುವ ಮಾಹಿತಿ ಲಭ್ಯವಾಗಿಲ್ಲ.
ಕೆಲವು ಅಪರೂಪದ ಸಂದರ್ಭಗಳಲ್ಲಿ ಅವು ಸಾವಿಗೆ ಕಾರಣವಾಗಬಹುದು. ಅನೇಕ ಬಾರಿ ಗಂಭೀರ ಚರ್ಮದ ಸೋಂಕುಗಳು ಸಂಭವಿಸುತ್ತವೆ.

ಆರೋಗ್ಯಕರ ಜೀವಕೋಶಗಳು ಮತ್ತು ಅನೇಕ ರಕ್ತನಾಳಗಳು ಪರಿಣಾಮ ಬೀರಬಹುದು. ಪ್ರತಿಕ್ರಿಯೆಗೆ ಮೊದಲು 400 ಮಿಗ್ರಾಂ ಇಬುಪ್ರೊಫೇನ್ ಎರಡು ಮಾತ್ರೆಗಳನ್ನು ತೆಗೆದುಕೊಂಡಿದ್ದೇನೆ ಎಂದು ಮಹಿಳೆ ವೈದ್ಯರಿಗೆ ತಿಳಿಸಿದ್ದರು.

 

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ