ಐಫಲ್​ ಟವರ್​ ಎದುರು ಗಂಗೂಬಾಯಿ ಚಿತ್ರದ ಹಾಡಿಗೆ ಮಹಿಳೆಯರ ಸಖತ್​ ಸ್ಟೆಪ್​ : ವಿಡಿಯೋ ವೈರಲ್​

ಮೂವರು ಮಹಿಳೆಯರು ಸೀರೆ ಉಟ್ಟು ಪ್ಯಾರಿಸ್​ನ ಐಫಲ್ ಟವರ್​ ಎದುರು ಗಂಗೂಬಾಯಿ ಚಿತ್ರದ ಹಾಡಿಗೆ ಡ್ಯಾನ್ಸ್​​ ಮಾಡಿದ್ದಾರೆ.  ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಐಫಲ್​ ಟವರ್​ ಎದುರು ಗಂಗೂಬಾಯಿ ಚಿತ್ರದ ಹಾಡಿಗೆ ಮಹಿಳೆಯರ ಸಖತ್​ ಸ್ಟೆಪ್​ : ವಿಡಿಯೋ ವೈರಲ್​
ಡ್ಯಾನ್ಸ್​ ಮಾಡಿದ ಮಹಿಳೆಯರು
Edited By:

Updated on: Mar 18, 2022 | 9:40 AM

ಬಾಲಿವುಡ್​ನಲ್ಲಿ ಸದ್ದು ಮಾಡಿದ್ದ ಆಲಿಯಾ ಭಟ್​ ನಟನೆಯ ಗಂಗೂಬಾಯಿ ಕಠಿಯಾವಾಡಿ (Gangubai Kathiawadi) ಚಿತ್ರ ಸಖತ್​ ಹಿಟ್​ ಆಗಿದೆ. ಆಲಿಯಾ ನಟನೆ ವೀಕ್ಷಕರನ್ನು ಸೆಳೆದಿದೆ. ಕಡಿಮೆ ಸಮಯದಲ್ಲಿಯೇ ಬಾಕ್ಸ್​ ಆಫೀಸ್​ನಲ್ಲಿ ಭಾರೀ ಹಣಗಳಿಸುವ ಮೂಲಕ ಬಾಲಿವುಡ್​ನಲ್ಲಿ ಸಂಚಲನ ಮೂಡಿಸಿದೆ. ಚಿತ್ರದ ಹಾಡುಗಳೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹಿಟ್​ ಆಗಿದೆ. ಇದೀಗ ಮೂವರು ಮಹಿಳೆಯರು ಸೀರೆ ಉಟ್ಟು ಪ್ಯಾರಿಸ್​ನ ಐಫಲ್ ಟವರ್ (Eiffel Tower) ​ ಎದುರು ಗಂಗೂಬಾಯಿ ಚಿತ್ರದ ಹಾಡಿಗೆ ಡ್ಯಾನ್ಸ್​​ ಮಾಡಿದ್ದಾರೆ.  ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಿಡಿಯೋದಲ್ಲಿ ಕೇಸರಿ ಬಿಳಿ ಹಸಿರಿನ ಸೀರೆಯುಟ್ಟ ಮೂವರು ಮಹಿಳೆಯರು ಗಂಗೂಬಾಯಿ ಚಿತ್ರದ ಧೋಲಿಡಾ ಹಾಡಿಗೆ ಸಖತ್​ ಸ್ಟೆಪ್​ ಹಾಕಿದ್ದಾರೆ. ಇನ್ಸ್ಟಾಗ್ರಾಮ್​ನಲ್ಲಿ ಮಾನ್ಸಿ ಡ್ಯಾನ್ಸ್​ಡ್ರಾಮ್​ ಎನ್ನುವ ಬಳಕೆದಾರರು ವಿಡಿಯೋ ಹಂಚಿಕೊಂಡಿದ್ದಾರೆ.  ನೃತ್ಯ ಸಂಯೋಜಕಿ ಮಾನ್ಸಿ ಪರೇಖ್ ಮತ್ತು ಆಕೆಯ ಇಬ್ಬರು ಸ್ನೇಹಿತರು ಗುಜರಾತಿ ಶೈಲಿಯ ಸೀರೆ ಮತ್ತು ಸ್ನೀಕರ್ಸ್ ಧರಿಸಿರುವುದನ್ನು ವೀಡಿಯೊದಲ್ಲಿ ನೋಡಬಹುದು. ನಂತರ ಮೂವರು ಪ್ಯಾರಿಸ್‌ನ ಆರ್ಕ್ ಡಿ ಟ್ರಯೋಂಫ್ ಮತ್ತು ಐಫೆಲ್ ಟವರ್‌ನ ಮುಂದೆ ಧೋಲಿಡಾದಲ್ಲಿ ನೃತ್ಯ ಮಾಡಿದ್ದಾರೆ. ಈ ಮೂವರ ಡ್ಯಾನ್ಸ್​ ನೋಡಲು ಬೀದಿಯಲ್ಲಿ ಓಡಾಡುತ್ತಿದ್ದವರೂ ಕೂಡ ನಿಂತು ನೋಡವ ದೃಶ್ಯಗಳು ವಿಡಿಯೋದಲ್ಲಿ ಕಾಣುತ್ತವೆ.

ಸದ್ಯ ವೈರಲ್​ ಆಗಿರುವ ವಿಡಿಯೋ 13 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ವಿಡಿಯೋ ನೋಡಿ ನೆಟ್ಟಿಗರು ಮೆಚ್ಚಿಕೊಂಡು ಕಾಮೆಂಟ್​ ಮಾಡಿದ್ದಾರೆ. ಅದ್ಭುತ ನೃತ್ಯ ಎಂದು ಬಳಕೆದಾರರೊಬ್ಬರು ಹೇಳಿದ್ದು, ಹಲವರು ಹಾರ್ಟ್​ ಎಮೋಜಿ ಮೂಲಕ ಡ್ಯಾನ್ಸ್​ ಮೆಚ್ಚಿಕೊಂಡಿರುವ ಬಗ್ಗೆ ಕಾಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ:

Viral News: ಮಗು ಹುಟ್ಟಿದ ಬಳಿಕ ನಿದ್ರೆಗೆಡಬೇಕಾದ ಗಂಡನಿಗೆ ಲ್ಯಾಂಬೋರ್ಗಿನಿ ಗಿಫ್ಟ್​ ಕೊಟ್ಟ ಗರ್ಭಿಣಿ ಹೆಂಡತಿ!