ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ವಿಡಿಯೋಗಳು ಹರಿದಾಡುತ್ತಿರುತ್ತದೆ. ಕೆಲವು ಭಯ ಹುಟ್ಟಿಸುತ್ತದೆ. ಇನ್ನು ಕೆಲವು ಆಶ್ಚರ್ಯವನ್ನುಂಟು ಮಾಡುತ್ತವೆ. ಹಲವು ವಿಡಿಯೋಗಳು ಎಚ್ಚರಿಕೆಯ ಸಂದೇಶವನ್ನೂ ಸಾರುತ್ತದೆ. ಅಂಥಹದ್ದೇ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಣಿವೆಗಳಲ್ಲಿ ಜೋಕಾಲಿ ( ಸ್ವಿಂಗ್ ರೈಡ್) ಆಡುವುದು ಅಂದ್ರೆ ಕೆಲವರಿಗೆ ಇಷ್ಟವಾಗಿರಬಹುದು. ಆದರೆ, ಅದೃಷ್ಟ ಕೆಟ್ಟಿದ್ರೆ ಏನೆಲ್ಲಾ ಆಗುತ್ತೆ ಅನ್ನೋದಕ್ಕೆ ಉದಾಹರಣೆಯಾಗಿ ಇಲ್ಲೊಂದು ಭಯಾನಕ ವಿಡಿಯೋ ವೈರಲ್ ಆಗಿದೆ.
ರಷ್ಯಾದಲ್ಲಿ ಸೆರೆಯಾದ ವಿಡಿಯೋವೊಂದು ಇದೀಗ ಭಾರೀ ಸುದ್ದಿಯಲ್ಲಿದೆ. ಇಬ್ಬರು ಯುವತಿಯರು ಜೋಕಾಲಿ (ಸ್ವಿಂಗ್ ರೈಡ್) ಆಟ ಆಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಓರ್ವ ವ್ಯಕ್ತಿಯು ಹಿಂದಿನಿಂದ ಜೋರಾಗಿ ತಳ್ಳುತ್ತಿರುತ್ತಾರೆ. ಆರಂಭದಲ್ಲಿ ಸ್ವಿಂಗ್ ರೈಡ್ಅನ್ನು ಆನಂದಿಸುತ್ತಿರುತ್ತಾರೆ. ಆದರೆ ಇದ್ದಕ್ಕಿದ್ದಂತೆಯೇ ಜೋಕಾಲಿಯ ಸರಪಳಿ ಕಳಚುತ್ತದೆ. ಇಬ್ಬರೂ ಕೆಳಗೆ ಬೀಳುತ್ತಾರೆ.
Moment two women fell off a 6000-Ft cliff swing over the Sulak Canyon in Dagestan, Russia.
Both women landed on a narrow decking platform under the edge of the cliff & miraculously survived with minor scratches.
Police have launched an investigation. pic.twitter.com/oIO9Cfk0Bx— UncleRandom (@Random_Uncle_UK) July 14, 2021
ವಿಡಿಯೋ ನೋಡಿದ ತಕ್ಷಣ ಒಮ್ಮಲೆ ಮೈ ಜುಂ.. ಅನ್ನುವುದಂತೂ ಸತ್ಯ. ಕೆಲವು ಬಾರಿ ಅದೃಷ್ಟ ಕೆಟ್ಟಿದ್ದರೆ ಏನೆಲ್ಲಾ ಸಂಭವಿಸಬಹುದು ಎಂಬುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. 6300 ಅಡಿ ಬಂಡೆಯ ಅಂಚಿಲ್ಲಿದ್ದ ಇಬ್ಬರು ಯುವತಿಯರು ಬಿದ್ದಿದ್ದಾರೆ. ಅದೃಷ್ಟವಷಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೆಳಗೆ ಬಿದ್ದಿರುವ ಪರಿಣಾಮ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ವರದಿಗಳಿಂದ ತಿಳಿದು ಬಂದಿದೆ.
ಘಟನೆ ನಡೆದ ಬಳಿಕ ಯುವತಿಯರು ಗಾಬರಿಗೊಂಡಿದ್ದರು. ಯಾವುದೇ ಗಂಭೀರವಾದ ಗಾಯಗಳಾಗಿಲ್ಲ. ಮೈ ಕೈ ತೆರೆಚಿದೆ. ಸ್ವಿಂಗ್ನ ಸುರಕ್ಷತಾ ಮಾನದಂಡಗಳನ್ನು ಪಾಲಿಸಲಿಲ್ಲ. ಹಾಗಾಗಿ ಯುವತಿಯರು ಕೆಳಗೆ ಬಿದ್ದಿದ್ದಾರೆ ಎಂದು ಡಾಗೆಸ್ತಾನ್ನ ಪ್ರವಾಸೋದ್ಯಮ ಸಚಿವಾಲಯವು ಹೇಳಿದೆ. ಈ ಕುರಿತಂತೆ ಪರಿಶೀಲನೆಗಳು ನಡೆಯುತ್ತಿವೆ ಎಂದು ವರದಿಗಳಿಂದ ತಿಳಿದು ಬಂದಿದೆ.
ಇದನ್ನೂ ಓದಿ:
Viral Photo: ಮರದ ಕೊಂಬೆಗೆ ನೇತಾಡುತ್ತಿದೆ ನಿಗೂಢ ಗೊಂಬೆಯ ಆಕೃತಿ; ಭಯಾನಕ ದೃಶ್ಯದ ಹಿಂದಿನ ಸತ್ಯವೇನು?
Published On - 12:24 pm, Thu, 15 July 21