ಅಮ್ಮಾ ಎಷ್ಟು ತಿನ್ನಿಸ್ತೀಯಾ ನನ್ಗೆ ಊಟ ಸಾಕು ಎಂದು ಮಕ್ಕಳು ಎಷ್ಟೇ ಹಟ ಮಾಡಿದ್ರೂ, ತಾಯಿಯಾದವಳು ತನ್ನ ಮಕ್ಕಳ ಹೊಟ್ಟೆ ತುಂಬುವವರೆಗೂ ಊಟ ಮಾಡಿಸುತ್ತಾಳೆ. ಅಮ್ಮನ ಕೈ ರುಚಿಯೇ ಹಾಗೇ ಅದು ಅಮೃತವಿದ್ದಂತೆ. ಅದು ಪ್ರೀತಿ ವಾತ್ಸಲ್ಯದ ಪ್ರತೀಕ. ನಾವೆಲ್ಲರೂ ಅಮ್ಮನ ಕೈ ತುತ್ತು ತಸವಿದಿರುತ್ತೇವೆ. ಹಾಗೇನೇ ಪ್ರತಿಯೊಬ್ಬ ತಾಯಿಯೂ ತನ್ನ ಮಕ್ಕಳಿಗೆ ಪ್ರೀತಿಯಿಂದ ಕೈತುತ್ತು ನೀಡುತ್ತಾಳೆ. ಆದ್ರೆ ಇಲ್ಲೊಬ್ಬರು ತಾಯಿ ಹಸಿದು ಬಂದಂತಹ ಹಕ್ಕಿ ಮರಿಗಳಿಗೂ ಕೂಡಾ ಪ್ರೀತಿಯಿಂದ ಕೈತುತ್ತು ನೀಡಿದ್ದಾರೆ. ಅರೇ ಹಕ್ಕಿಗಳು ಮನುಷ್ಯರನ್ನು ಕಂಡ್ರೆ ಹಾರಿ ಹೋಗುತ್ತೆ ಅಲ್ವಾ, ಅದು ಹೇಗೆ ಕೈ ತುತ್ತು ತಿನ್ನಲು ಸಾಧ್ಯ ಅಂತ ಯೋಚ್ನೆ ಮಾಡ್ತಿದ್ದೀರಾ? ಹಾಗಿದ್ರೆ ಈ ಹೃದಯಸ್ಪರ್ಶಿ ವಿಡಿಯೋವನ್ನೊಮ್ಮೆ ನೋಡಿ.
@kumaresan.p16041990 ಎಂಬ ಇನ್ಸ್ಟಾಗ್ರಾಮ್ ಪೇಜ್ ಅಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ʼಮಹಿಳೆಯೊಬ್ಬರು ಹಕ್ಕಿ ಮರಿಗಳಿಗೆ ಪ್ರೀತಿಯಿಂದ ಕೈ ತುತ್ತು ನೀಡುವ ಹೃದಯಸ್ಪರ್ಶಿ ದೃಶ್ಯವನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
ಈ ವೈರಲ್ ವಿಡಿಯೋದಲ್ಲಿ ಮಹಿಳೆಯೊಬ್ಬರು ಮರದ ಮೇಲೆ ಕುಳಿತಿದ್ದಂತಹ ಎರಡು ಹಕ್ಕಿ ಮರಿಗಳಿಗೆ ಪ್ರೀತಿಯಿಂದ ಕೈ ತುತ್ತು ನೀಡುತ್ತಿರುವುದನ್ನು ಕಾಣಬಹುದು. ಹಸಿದು ಬಂದಂತಹ ಎರಡು ಹಕ್ಕಿ ಮರಿಗಳು ಅಮ್ಮಾ ನನ್ಗೆ ಕೈ ತುತ್ತು ನೀಡಮ್ಮಾ… ಅಮ್ಮಾ ನನ್ಗೆ ಮೊದ್ಲು ಕೈ ತುತ್ತು ನೀಡಮ್ಮಾ… ಎನ್ನುತ್ತಾ ಬಾಯಿ ತೆರೆದು ಕುಳಿತಿರುತ್ತವೆ. ಆ ಹಕ್ಕಿಗಳಿಗೆ ಈ ತಾಯಿ ಪ್ರೀತಿಯಿಂದ ತುತ್ತನ್ನು ತಿನ್ನಿಸುತ್ತಾರೆ.
ಇದನ್ನೂ ಓದಿ: ರಾಮ ಮಂದಿರ ಥೀಮ್ನಲ್ಲಿ ಮೂಡಿಬಂದ ಕ್ರಿಸ್ಮಸ್ ಕೇಕ್
ನವೆಂಬರ್ 02 ರಂದು ಹಂಚಿಕೊಳ್ಳಲಾದ ಈ ವಿಡಿಯೋ 12.6 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 1.1 ಮಿಲಿಯನ್ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼನಾನು ಮೊದಲ ಬಾರಿಗೆ ಮನುಷ್ಯರು ಹಕ್ಕಿಗಳಿಗೆ ಕೈ ತುತ್ತು ನೀಡುತ್ತಿರುವುದನ್ನು ನೋಡುತ್ತಿರುವುದು, ಈ ದೃಶ್ಯವನ್ನು ಕಂಡು ನಾನು ಭಾವುಕನಾದೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼತಾಯಿ ಪ್ರೀತಿಗೆ ಸರಿಸಾಟಿ ಯಾವುದು ಇಲ್ಲʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ತಾಯಿ ತನ್ನ ಸ್ವಂತ ಮಕ್ಕಳಿಗೆ ತುತ್ತು ನೀಡುತ್ತಿರುವಂತೆ ಭಾಸವಾಗುತ್ತಿದೆʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಈ ಹೃಯಯಸ್ಪರ್ಶಿ ವಿಡಿಯೋಗೆ ಭಾರೀ ಮೆಚ್ಚುಗೆಯನ್ನು ಸೂಚಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: