Viral News: ಹೊಟೆಲ್​ನಲ್ಲಿ ಆರ್ಡರ್​​ ಮಾಡಿದ ಊಟದ​ ಬೆಲೆ​ ಬರೋಬ್ಬರಿ 3,000 ರೂಪಾಯಿ ಎಂದು ತಿಳಿದು ಮಹಿಳೆ ಕಂಗಾಲು!

ಹೊಟೆಲ್​ನಲ್ಲಿ ನೀವು ಪಾವತಿಸುವ ಹಣ ನೀವು ತಿಂದ ಆಹಾರದ ಗುಣಮಟ್ಟಕ್ಕೆ ಹೊಂದಿಕೆಯಾಗಬೇಕು. ಮಹಿಳೆಯ ಊಟ ನೋಡಿ ಆ ಊಟಕ್ಕೆ 3,000 ರೂಪಾಯಿ ಎಂದು ತಿಳಿದ ಬಳಿಕ ನೆಟ್ಟಿಗರು ಗೊಂದಲಕ್ಕೊಳಗಾಗಿದ್ದಾರೆ.

Viral News: ಹೊಟೆಲ್​ನಲ್ಲಿ ಆರ್ಡರ್​​ ಮಾಡಿದ ಊಟದ​ ಬೆಲೆ​ ಬರೋಬ್ಬರಿ 3,000 ರೂಪಾಯಿ ಎಂದು ತಿಳಿದು ಮಹಿಳೆ ಕಂಗಾಲು!
ಹೊಟೆಲ್​ನಲ್ಲಿ ಆರ್ಡರ್​​ ಮಾಡಿದ ಊಟದ​ ಬೆಲೆ​ ಬರೋಬ್ಬರಿ 3,000 ರೂಪಾಯಿ ಎಂದು ತಿಳಿದು ಮಹಿಳೆ ಕಂಗಾಲು!
Updated By: shruti hegde

Updated on: Aug 30, 2021 | 8:52 AM

ಸಾಮಾನ್ಯವಾಗಿ ಹೊಟೆಲ್ ಹೋಗಿ ತಿಂಡಿ ತಿಂದರೆ ಎಷ್ಟು ಖರ್ಚಾಗಬಹುದು? ನಾವು ಆರ್ಡರ್ ಮಾಡುವ ಫುಡ್ ಮತ್ತು ಅದಕ್ಕೆ ನಿಗದಿಯಾಗಿರುವ ಬೆಲೆಯ ಅನುಸಾರ ಹಣ ಪಾವತಿಯಾಗುತ್ತದೆ. ಆದರೆ ಊಟಕ್ಕೆ ತಕ್ಕಂತೆಯೇ ಬೆಲೆ ನಿಗದಿ ಆಗಿರಬೇಕಲ್ವೇ? ಇಲ್ಲೋರ್ವ ಮಹಿಳೆ ಹೊಟೆಲ್​ನಲ್ಲಿ ತೆಗೆದುಕೊಂಡ ತಿಂಡಿಗೆ ಬರೋಬ್ಬರಿ 3,000 ರೂಪಾಯಿ ಬಿಲ್ ನೀಡಿದ್ದಾರೆ. ಬಿಲ್​ ನೋಡಿದ ಮಹಿಳೆ ಒಮ್ಮೆಲೆ ಧಂಗಾಗಿದ್ದು ಪೋಟೋಸಮೇತ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಸುದ್ದಿ ಪುಲ್ ವೈರಲ್ ಆಗಿದ್ದು ಅವರು ತೆಗೆದುಕೊಂಡ ಊಟದಲ್ಲಿ ಅಂಥದ್ದೇನು ಸ್ಪೆಷಲ್ ಇರಬಹುದು? ಎಂದು ನೆಟ್ಟಿಗರು ಕನ್ಫ್ಯೂಸ್ ಆಗಿದ್ದಾರೆ.

ಹೊಟೆಲ್​ನಲ್ಲಿ ನೀವು ಪಾವತಿಸುವ ಹಣ ನೀವು ತಿಂದ ಆಹಾರದ ಗುಣಮಟ್ಟಕ್ಕೆ ಹೊಂದಿಕೆಯಾಗಬೇಕು. ಮಹಿಳೆಯ ಊಟ ನೋಡಿ ಆ ಊಟಕ್ಕೆ 3,000 ರೂಪಾಯಿ ಎಂದು ತಿಳಿದ ಬಳಿಕ ನೆಟ್ಟಿಗರು ಗೊಂದಲಕ್ಕೊಳಗಾಗಿದ್ದಾರೆ.

ಮಹಿಳೆ ಲಂಡನ್​ನ ಪ್ರಸಿದ್ಧ ಹೊಟೆಲ್ ಶಾರ್ಡ್​ನಲ್ಲಿ ಊಟವನ್ನು ಆರ್ಡರ್ ಮಾಡುತ್ತಾಳೆ. ಬಟ್ಟಲಲ್ಲಿ ಸ್ವಲ್ಪವೇ ಊಟವಿದೆ. ಆದರೆ ಅದಕ್ಕೇ ಬರೋಬ್ಬರಿ 3,000 ರೂಪಾಯಿ. ತನ್ನ ಊಟದ ಫೋಟೋ ಜತೆಗೆ ತಾನು ಪಾವತಿಸಿದ ಹಣವನ್ನು ಮಹಿಳೆ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ತಿಳಿದ ನೆಟ್ಟಿಗರು ಒಮ್ಮೆಲೆ ಶಾಕ್ ಆಗಿದ್ದಾರೆ.

ಅನೇಕರು ಇದು ತಮಾಷೆಯೆಂದು ಭಾವಿಸಿದರು. ಟ್ವೀಟ್ ಈಗ 9,000 ಕ್ಕೂ ಹೆಚ್ಚು ಲೈಕ್ಸ್​ಗಳು, 400 ರೀಟ್ವೀಟ್​ಗಳು ಮತ್ತು 660 ಕಾಮೆಂಟ್ಸ್​ಗಳನ್ನು ಪಡೆದುಕೊಂಡಿದೆ. ಟ್ವಿಟರ್ ಬಳಕೆದಾರರಲ್ಲಿ ಕೆಲವರು ಮೆನು ನೋಡಿದ ಬಳಿಕ ಬೇರೆಡೆಗೆ ಹೋಗಬಹುದಿತ್ತು ಎಂದು ಪ್ರಶ್ನಿಸಿದ್ದಾರೆ.

ಇನ್ನು ಕೆಲವರು ಕಾಮೆಂಟ್ಸ್​ಗಳು ಬಂದಿದ್ದು ಶಾರ್ಡ್​ನಂತಹ ಹೊಟೆಲ್ ನಿರ್ಮಿಸಲು ಎಷ್ಟು ವೆಚ್ಚವಾಗಿದೆ, ಅದರೊಳಗೆ ಎಷ್ಟು ಆಸ್ತಿ ಇದೆ ಮತ್ತು ಜಾಗವೆಷ್ಟಿದೆ ಎಂಬುದು ನಿಮಗೆ ಅರ್ಥವಾಗಿದೆಯೇ? ಎಂದು ಕೇಳಿದ್ದಾರೆ. ಇನ್ನೋರ್ವರು ಅಭಿಪ್ರಾಯ ತಿಳಿಸಿದ್ದು, ನಿಮ್ಮನ್ನು ನೋಡಿ ನಿಜವಾಗಿಯೂ ನೋವಾಗುತ್ತಿದೆ, ಬಿಲ್ ನೋಡಿದ ನೀವು ಒಮ್ಮೆಲೆ ಧಂಗಾಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:

Viral News: ಮನೆ ಖರೀದಿಸಲು ಯೋಚಿಸುತ್ತಿದ್ದೀರಾ?; ಈ ಊರಿನಲ್ಲಿ 87 ರೂ.ಗೆ ಮನೆ ಮಾರಾಟಕ್ಕಿದೆ!

Viral News: ಕದ್ದು ಮುಚ್ಚಿ ಇಲಿಗಳಿಗೆ ಆಹಾರ ನೀಡುತ್ತಿದ್ದ ಮಕ್ಕಳಿಗೆ ಪಾಠ ಕಲಿಸಲು ಅಪ್ಪನ ಐಡಿಯಾ ಕೇಳಿದ್ರೆ ಧಂಗಾಗ್ತೀರಾ!

(Women order meal costing 3,000 has left netizens shocked)