ಜಗತ್ತಿನಲ್ಲಿ ಪ್ರತಿಭಾವಂತರಿಗೆ ಯಾವುದೇ ಕೊರತೆಯಿಲ್ಲ. ಜನರು ಸಾಹಸಗಳನ್ನು ಮಾಡಲು ಹೆಚ್ಚು ಇಷ್ಟಪಡುತ್ತಾರೆ. ಕೆಲವೊಮ್ಮೆ ಜನರ ಸ್ಟಂಟ್ಗಳು ಬೆರಗಾಗುವಂತೆ ಮಾಡುತ್ತದೆ. ಇದೀಗ ವೈರಲ್ ಆದ ವಿಡಿಯೋ ಕೂಡಾ ಅಂಥದ್ದೇ! ಯುವತಿಯ ಸ್ಟಂಟ್ ನೋಡಿ ನೆಟ್ಟಿಗರು ದಿಗ್ಭ್ರಾಂತರಾಗಿದ್ದಾರೆ. ವಿಡಿಯೋ ನೋಡಿದ್ರೆ ನೀವು ಬೆರಗಾಗೋದಂತೂ ಸತ್ಯ.
ಸಾಮಾಜಿಕ ಜಾಲತಾಣದಲ್ಲಿ ತಮಾಷೆಯ ವಿಡಿಯೋವೊಂದೇ ಅಲ್ಲ ಕೆಲವು ಅಚ್ಚರಿ ಮೂಡಿಸುವ ದೃಶ್ಯಗಳು ಹರಿದಾಡುತ್ತವೆ. ಇನ್ನು ಕೆಲವು ಜನರನ್ನು ಆಶ್ಚರ್ಯಚಕಿತರನ್ನಾಗಿ ಮಾಡುತ್ತಾರೆ. ನಂಬಲಾಗದಿದ್ದರೂ ಸಹ ವಿಡಿಯೋಗಳನ್ನು ನೋಡಿದಾಕ್ಷಣ ನಂಬಲೇ ಬೇಕು. ಈ ವಿಡಿಯೋದಲ್ಲಿನ ಯುವತಿಯ ಸಾಹಸ ನಿಜವಾಗಿಯೂ ಹುಬ್ಬೇರಿಸುವಂಥದ್ದು!
That’s one powerful mum ???pic.twitter.com/BVgnIAvnlH
— Ffs OMG Vids ?? (@Ffs_OMG) August 29, 2021
ಯುವತಿಯ ಹೆಗಲ ಮೇಲೆ ಓರ್ವ ವ್ಯಕ್ತಿಯನ್ನು ನಿಲ್ಲಿಸಿಕೊಂಡಿದ್ದಾಳೆ. ಆತ ಮತ್ತೋರ್ವ ಬಾಲಕಿಯನ್ನು ತನ್ನ ಹೆಗಲ ಮೇಲೆ ಕುಳಿಸಿಕೊಳ್ಳುತ್ತಾನೆ. ಮತ್ತಿಬ್ಬರು ಬಾಲಕರು ಬಲಭಾಗ ಮತ್ತು ಎಡಭಾಗದಲ್ಲಿ ನಿಲ್ಲುತ್ತಾರೆ. 4 ಮಂದಿಯನ್ನು ಮಹಿಳೆ ಭುಜದ ಮೇಲೆ ಹೊತ್ತು ಬ್ಯಾಲೆನ್ಸ್ ಮಾಡಿದ್ದಾಳೆ. ಮಹಿಳೆ ಸಾಹಸ ನಿಜವಾಗಿಯೂ ಆಶ್ಚರ್ಯಚಕಿರನ್ನಾಗಿ ಮಾಡುತ್ತದೆ.
ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ನೆಟ್ಟಿಗರು ತಮ್ಮ ಪ್ರತಿಕ್ರಿಯೆಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ವಿಡಿಯೋ ಇದುವರೆಗೆ 85 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.
ಇದನ್ನೂ ಓದಿ:
Viral Video: ಮೊಲದ ಮರಿ ಈಜುವುದನ್ನು ನೀವು ಎಂದಾದರೂ ನೋಡಿದ್ದೀರಾ? ಅಪರೂಪದ ದೃಶ್ಯ ವೈರಲ್
Viral Video: ಅಮೆರಿಕಾ ಪಡೆ ಜಾಗ ಖಾಲಿ ಮಾಡುತ್ತಿದ್ದಂತೆಯೇ ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದ ತಾಲಿಬಾನಿಗಳು
Published On - 1:57 pm, Tue, 31 August 21