Viral Video : ಭಾರತದಲ್ಲಿ ಹೆಣ್ಣುಮಕ್ಕಳು ದ್ವಿಚಕ್ರವಾಹನಗಳನ್ನು ಓಡಿಸಿಕೊಂಡು ಪ್ರಯಾಣಿಸುವುದು ಸರ್ವೇ ಸಾಮಾನ್ಯ. ಆದರೆ ಬುಲೆಟ್? ಬುಲೆಟ್ ಏನಿದ್ದರೂ ಗಂಡುಮಕ್ಕಳಿಗೆ ಮಾತ್ರ ಎನ್ನುವುದನ್ನು ಆಗಾಗ ಇಂಥ ಮಹಿಳಾಮಣಿಯರು ಕೊರೆದ ಗೆರೆಯನ್ನು ಅಳಿಸುತ್ತಿರುತ್ತಾರೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಮಧ್ಯರಾತ್ರಿಯಲ್ಲಿ ಇವರಿಬ್ಬರೂ ಸೀರೆಯುಟ್ಟು, ಘೂಂಘಟ್ ಹಾಕಿಕೊಂಡು ಬುಲೆಟ್ ಸವಾರಿ ಮಾಡಿದ್ದಾರೆ. ಯಾರೋ ಇವರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ನೋಡಿ ಇವರ ಉತ್ಸಾಹ ಮತ್ತು ಖುಷಿಯನ್ನು.
‘ಗುಜ್ಜರ್ ಕೀ ಹೋಡ್’ ಎಂಬ ಹಾಡಿನೊಂದಿಗೆ ಈ ವಿಡಿಯೋ ಎಡಿಟ್ ಮಾಡಲಾಗಿದೆ. ಸೋನಾ ಓಮಿ ಎಂಬ ಇನ್ಸ್ಟಾಗ್ರಾಂ ಖಾತೆದಾರರು ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈಗಾಗಲೇ 10,000 ದಷ್ಟು ಜನರು ಈ ವಿಡಿಯೋ ನೋಡಿದ್ದಾರೆ. 57,000ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿದ್ದಾರೆ.
ಇವರ ಆತ್ಮವಿಶ್ವಾಸ ನೆಟ್ಟಿಗರನ್ನು ಹುರಿದುಂಬಿಸಿದೆ. ಭಾಬೀ ಹೆಲ್ಮೆಟ್ ಹಾಕಿಕೊಂಡು ಗಾಡಿ ಓಡಿಸಿ ಎಂದು ಸಲಹೆ ನೀಡಿದ್ದಾರೆ ಅನೇಕರು. ಇಂಥ ದಿನಗಳನ್ನು ಭಾರತ ನೋಡಬೇಕಿದೆ ಎಂದು ಹಲವಾರು ಜನ ಪ್ರತಿಕ್ರಿಯಿಸಿದ್ಧಾರೆ. ಮಹಿಳೆಯರು ಹೀಗೆ ನಡುರಾತ್ರಿಯಲ್ಲಿಯೂ ನಿರಾತಂಕದಿಂದ, ಆತ್ಮವಿಶ್ವಾಸದಿಂದ ಪ್ರಯಾಣಿಸುವಂತಾಗಬೇಕು. ಎಂದಿದ್ದಾರೆ ಅನೇಕರು.
ಈ ವಿಡಿಯೋ ನೋಡಿ ನಿಮಗೆ ಏನನ್ನಿಸುತ್ತಿದೆ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 3:45 pm, Sat, 26 November 22