AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನಾಥ ಚಿಂಪಾಂಜಿ ಮೊದಲ ಸಲ ಹೊಸ ಕುಟುಂಬ ಸೇರಿದಾಗಿನ ಕ್ಷಣಗಳು

Chimpanzee : ನನ್ನ ತಂದೆ ಕೂಡ ಹೀಗೆ ನನ್ನನ್ನು ಒಮ್ಮೆಯೂ ಪ್ರೀತಿಸಲಿಲ್ಲ ಎಂದು ಒಬ್ಬರು. ನಾವು ಕೂಡ ಹೀಗೇ ಇರಬೇಕು, ಯಾಕೆ ಹೀಗಿಲ್ಲ ಎಂದು ಇನ್ನೊಬ್ಬರು. ಒಟ್ಟಾರೆ ಈ ವಿಡಿಯೋ ನಿಮ್ಮನ್ನು ಇಡೀ ದಿನ ಕಾಡುವಲ್ಲಿ ಸಂಶಯವಿಲ್ಲ.

ಅನಾಥ ಚಿಂಪಾಂಜಿ ಮೊದಲ ಸಲ ಹೊಸ ಕುಟುಂಬ ಸೇರಿದಾಗಿನ ಕ್ಷಣಗಳು
ಅನಾಥ ಚಿಂಪಾಂಜಿಯೊಂದು ಮೊದಲ ಸಲ ಹೊಸ ಚಿಂಪಾಂಜಿಗಳ ಕುಟುಂಬ ಸೇರಿದಾಗ
TV9 Web
| Updated By: ಶ್ರೀದೇವಿ ಕಳಸದ|

Updated on:Nov 26, 2022 | 5:12 PM

Share

Viral Video : ಮೊದಲ ಸಲ! ಈ ಪದಪುಂಜವೇ ಪುಳಕ, ಅಚ್ಚರಿ ಮತ್ತು ಪದೇಪದೆ ನೆನಪನ್ನು ಅರಳಿಸುತ್ತ ಹೃದಯವನ್ನು ಬೆಚ್ಚಗಾಗಿಸಲು ಪ್ರೇರೇಪಿಸುವಂಥದ್ದು. ಇದೀಗ ವೈರಲ್ ಆಗಿರುವ ಈ ವಿಡಿಯೋದ ‘ಮೊದಲ ಸಲ’ ಮಾತ್ರ ನಿಮ್ಮ ಮನಸಿನಲ್ಲಿ ಸದಾ ಉಳಿಯುತ್ತದೆ. ಮನುಷ್ಯನಿಗೇ ಆಗಲಿ, ಪ್ರಾಣಿಪಕ್ಷಿಗಳಿಗೇ ಆಗಲಿ ತಾನು ತನ್ನವರು ಮತ್ತವರ ಸಾಮಿಪ್ಯ ಎನ್ನುವುದು ಅಪಾರ ಆತ್ಮವಿಶ್ವಾಸ, ಧೈರ್ಯ, ಭದ್ರತಾ ಭಾವ ಕೊಡುತ್ತದೆ. ಈಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಅನಾಥ ಚಿಂಪಾಂಜಿಯೊಂದು ಮೊದಲ ಸಲ ತನ್ನ ಹೊಸ ಕುಟುಂಬವನ್ನು ಸೇರಿದಾಗಿನ ಆಪ್ತಘಳಿಗೆಗಳನ್ನು ಅನುಭವಿಸಿರುವ ಪರಿ ನೋಡಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Good News Movement (@goodnews_movement)

ಈ ಚಿಂಪಾಂಜಿಯ ಹೆಸರು ಬೆಕ್ಲಿ. ಪಶ್ಚಿಮ ಆಫ್ರಿಕಾದ ಅಭಯಾರಣ್ಯದಲ್ಲಿ ಈ ಅನಾಥ ಚಿಂಪಾಂಜಿ ವಾಸವಾಗಿತ್ತು. ಹೇಗಾದರೂ ಮಾಡಿ ಇದನ್ನು ಒಂದು ಕುಟುಂಬಕ್ಕೆ ಸೇರಿಸಬೇಕೆನ್ನುವ ಅರಣ್ಯ ಸಿಬ್ಬಂದಿಯ ಆಶಯ ಇದೀಗ ಸಾಫಲ್ಯಗೊಂಡಿದೆ. ಈತನಕ ಈ ವಿಡಿಯೋ ಅನ್ನು 1.9 ಮಿಲಿಯನ್​ ಜನರು ವೀಕ್ಷಿಸಿದ್ದಾರೆ. ಅನೇಕರು ಈ ವಿಡಿಯೋ ನೋಡಿ ಹರ್ಷಚಿತ್ತರಾಗಿದ್ದಾರೆ, ಹನಿಗಣ್ಣಾಗಿದ್ದಾರೆ. ಸಾವಿರಾರು ಜನ ಪ್ರತಿಕ್ರಿಯಿಸಿದ್ದಾರೆ.

ಈಗಿಲ್ಲಿ ಸಮಯ ಒಂಬತ್ತು ಗಂಟೆ. ಕಾಫಿ ಕಪ್​ ಹಿಡಿದುಕೊಂಡು ಕುಳಿತಿದ್ದೇನೆ. ನನ್ನ ತಂದೆ ಕೂಡ ನನ್ನನ್ನು ಹೀಗೆ ಪ್ರೀತಿಸಿದ್ದಿಲ್ಲ. ಎಷ್ಟು ಅದ್ಭುತವಾಗಿದೆ ಈ ವಿಡಿಯೋ ಎಂದು ಒಬ್ಬರು ಹೇಳಿದ್ದಾರೆ. ಈ ಕುಟುಂಬದಲ್ಲಿರುವ ಒಂದು ಚಿಂಪಾಂಜಿಯು ಉಳಿದ ಸದಸ್ಯರಿಗೆ ಪರಿಚಯಿಸುವ ಆ ಪರಿ ಗಮನಿಸಿದ್ದೀರಾ ಎಂದು ಇನ್ನೊಬ್ಬರು ಹೇಳಿದ್ದಾರೆ. ಪರಸ್ಪರ ಅಪ್ಪಿಕೊಂಡು ಉರುಳಾಡುವ ಆ ಸಂಭ್ರಮ ನೋಡಿ, ಇದೇ ಅಲ್ಲವೇ ನಾವೆಲ್ಲ ಒಂದೇ ಎಂದು ಸೂಚಿಸುವ ನಡೆ ಎಂದಿದ್ದಾರೆ ಮತ್ತೂ ಒಬ್ಬರು. ಅಬ್ಬಾ ನಾನಂತೂ ಈ ವಿಡಿಯೋ ನೋಡುತ್ತಲೇ ಇದ್ದೇನೆ, ಹೇಗವನು ತಬ್ಬಿಕೊಂಡಿದ್ದಾನೆ! ಎಂದಿದ್ದಾರೆ ಒಬ್ಬರು. ನಾವೆಲ್ಲರೂ ಹೀಗೆ ಯಾಕೆ ಇಲ್ಲ, ಹೀಗೇ ಇರಬೇಕಲ್ಲವೆ? ಎಂದಿದ್ದಾರೆ ಇನ್ನೂ ಒಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:02 pm, Sat, 26 November 22

ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು