ವಿಶ್ವ ಪೊಲೀಸ್​ ಸುಂದರಿ : ‘ಮಾಡೆಲ್​ ಆಗಲು ಪೊಲೀಸ್​ ವೃತ್ತಿ ತೊರೆಯಲಾರೆ’

Police Officer : ‘ರೂಪದರ್ಶಿಯಾಗುವುದಕ್ಕಿಂತ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಭಾವಿ ವ್ಯಕ್ತಿ ಎನ್ನಿಸಿಕೊಳ್ಳುವುದಕ್ಕಿಂತ ಜಗತ್ತಿನ ಅತ್ಯಂತ ಅಪಾಯಕಾರಿ ನಗರಗಳಲ್ಲೊಂದಾದ ಮೆಡೆಲಿನ್​ನ ರಸ್ತೆಗಳಲ್ಲಿ ಗಸ್ತು ಹೊಡೆಯುವುದನ್ನು ಪ್ರೀತಿಸುತ್ತೇನೆ’

ವಿಶ್ವ ಪೊಲೀಸ್​ ಸುಂದರಿ : ‘ಮಾಡೆಲ್​ ಆಗಲು ಪೊಲೀಸ್​ ವೃತ್ತಿ ತೊರೆಯಲಾರೆ’
"Won't Leave Police Job To Become Model," Says 'World's Most Beautiful Cop'
Updated By: ಶ್ರೀದೇವಿ ಕಳಸದ

Updated on: Nov 11, 2022 | 3:21 PM

Viral Video : ಸಾಮಾಜಿಕ ಜಾಲತಾಣದಲ್ಲಿ ‘ಜಗತ್ತಿನ ಅತೀ ಸುಂದರ ಪೊಲೀಸ್​ ಅಧಿಕಾರಿ’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಡಯಾನಾ ರೆಮಿರೇಝ್ ಈಗ ಸುದ್ದಿಯಲ್ಲಿದ್ದಾರೆ. ಈಕೆ ಪೊಲೀಸ್​ ಅಧಿಕಾರಿ. ಜಗತ್ತಿನ ಅತೀ ಅಪಾಯಕಾರಿ ನಗರಗಳಲ್ಲಿ ಒಂದಾದ ಕೊಲಂಬಿಯಾದ ಮೆಡೆಲಿನ್​ನಲ್ಲಿ ಇವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ಸುಮಾರು 4 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್​ ಹೊಂದಿರುವ ಇವರು, ಮಾಡೆಲಿಂಗ್​ ಮಾಡುವುದಕ್ಕಿಂತ ಪೊಲೀಸ್​ ಇಲಾಖೆಯ ಮೂಲಕ ದೇಶಸೇವೆ ಸಲ್ಲಿಸುವುದು ಗೌರವಯುತ ಕೆಲಸ ಎಂದಿದ್ದಾರೆ. ನೆಟ್ಟಿಗರು ಇವರ ನಡೆಯನ್ನು ಶ್ಲಾಘಿಸುತ್ತಿದ್ದಾರೆ.

ನ್ಯೂಯಾರ್ಕ್​ ಪೋಸ್ಟ್​ ಪ್ರಕಾರ, ‘ರೂಪದರ್ಶಿಯಾಗಲು ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಭಾವಿ ವ್ಯಕ್ತಿ ಎನ್ನಿಸಿಕೊಳ್ಳಲು ನಾನು ಈ ವೃತ್ತಿಯನ್ನು ತೊರೆಯಲಾರೆ’ ಎನ್ನುವ ಇವರು, ಮೆಡೆಲಿನ್​ನ ರಸ್ತೆಗಳಲ್ಲಿ ಗಸ್ತು ಹೊಡೆಯುತ್ತಾರೆ. ಈ ಮೂಲಕ ಅವರು ತಮ್ಮ ವೃತ್ತಿಯನ್ನು ಅದಮ್ಯವಾಗಿ ಪ್ರೀತಿಸುತ್ತಾರೆ.

‘ಬದುಕಿನಲ್ಲಿ ಮತ್ತೊಮ್ಮೆ ಆಯ್ಕೆ ಎನ್ನುವುದು ಇದ್ದಲ್ಲಿ ನಾನು ಇದೇ ವೃತ್ತಿಯಲ್ಲಿಯೇ ಮುಂದುವರಿಯಲು ಇಚ್ಛಿಸುತ್ತೇನೆ. ಇಂದು ನಾನು ಏನಾಗಿದ್ದೇನೋ ಅದಕ್ಕೆ ಪೊಲೀಸ್​ ಇಲಾಖೆಯೇ ಕಾರಣ’ ಎಂದು ಆಕೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಇನ್‌ಸ್ಟಾಫೆಸ್ಟ್ ಅವಾರ್ಡ್ಸ್​ ಸಮಾರಂಭದಲ್ಲಿ ಪೊಲೀಸ್​ ಇಲಾಖೆಯನ್ನು ಪ್ರತಿನಿಧಿಸಿದ್ದ ಇವರು ‘ವರ್ಷದ ಅತ್ಯುತ್ತಮ ಪೊಲೀಸ್ ಅಥವಾ ಮಿಲಿಟರಿ ಪ್ರಭಾವಿ’ ಎಂಬ ಹೆಗ್ಗಳಿಕೆಗೆ ಪಾತ್ರವಾದ ಸಂದರ್ಭದಲ್ಲಿ ಮೇಲಿನ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.

ನೆಟ್ಟಿಗರು ಇವರ ಅಭಿಪ್ರಾಯವನ್ನು ಗೌರವಿಸುತ್ತಿದ್ದಾರೆ. ಜಗತ್ತಿನ ಅತ್ಯಂತ ಸುಂದರ ಪೊಲೀಸ್​ ಅಧಿಕಾರಿ ಎಂದು ನೆಟ್ಟಿಗರು ಇವರಿಗೆ ಶುಭಾಶಯ ತಿಳಿಸುತ್ತಿದ್ದಾರೆ. ನೀವು ಅತೀಸುಂದರ, ನಿಮ್ಮನ್ನು ಬಹಳ ಪ್ರೀತಿಸುತ್ತೇನೆ ಎಂದಿದ್ದಾರೆ ಒಬ್ಬರು.

ಸಾಮಾಜಿಕ ಜಾಲತಾಣ ಎಂಬ ಭ್ರಮಾಜಗತ್ತಿನಲ್ಲಿ ನಮ್ಮ ನಮ್ಮ ಅಸ್ತಿತ್ವ ಎಷ್ಟಿರಬೇಕು ಮತ್ತು ಬದುಕನ್ನು ಸಲಹುವ ವೃತ್ತಿಯನ್ನು ಗೌರವಿಸುವ ಮೂಲಕ ಉತ್ತಮ ವ್ಯಕ್ತಿತ್ವವನ್ನು ಹೇಗೆ ರೂಪಿಸಿಕೊಳ್ಳಬೇಕು ಎನ್ನುವುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕೆ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 3:18 pm, Fri, 11 November 22