
ವಿಶ್ವದ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ದಿನಕ್ಕೆ 14 ಗಂಟೆಗಳ ಕಾಲ ಕೆಲಸ ಮಾಡಿ, 7 ಕೋಟಿ ರೂ.ಗಳ ಪ್ರಮೋಷನ್ ಪಡೆದ ಮರುದಿನವೇ ಅವರ ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಕಷ್ಟಪಟ್ಟು ಕೆಲಸ ಮಾಡಿ ಸೀನಿಯರ್ ಮ್ಯಾನೇಜರ್ ಪೋಸ್ಟ್ ಪಡೆದಿದ್ದರು. ಆದರೆ ಮನೆಗೆ ಬರುತ್ತಿದ್ದಂತೆಯೇ ಪತ್ನಿ ಶಾಕ್ ನೀಡಿದ್ದು, ವಿಚ್ಛೇದನ ಕೊಡುವುದಾಗಿ ತಿಳಿಸಿದ್ದಾರೆ.
ಅವರು ಕೆಲಸದಲ್ಲಿ ನಿರತಾಗಿದ್ದ ಕಾರಣ ಕುಟುಂಬದವರ ಜತೆ ಸಮಯವನ್ನು ಕಳೆಯಲು ಸಾಧ್ಯವಾಗಲಿಲ್ಲ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಚರ್ಚೆ ಶುರುವಾಗಿದೆ. ಕೆಲವರು ವ್ಯಕ್ತಿ ಪರ ಮಾತನಾಡಿದರೆ, ಕೆಲವರು ಅವರ ಹೆಂಡತಿ ಪರವಾಗಿ ಮಾತನಾಡಿದ್ದಾರೆ. ಎಲ್ಲರೂ ತಮ್ಮ ಕುಟುಂಬಕ್ಕಾಗಿ ದುಡಿಯುತ್ತಾರೆ, ಒಂದು ಹಂತಕ್ಕೆ ಬಂದು ತಲುಪಿದರೆ ಆಮೇಲೆ ಕುಟುಂಬದ ಜತೆ ಖುಷಿಯಾಗಿರಬಹುದು ಎಂದು ಆಲೋಚಿಸುತ್ತಾರೆ. ಆದರೆ ಗಂಡ ತನಗಾಗಿ ಸಮಯಕೊಡಲಿಲ್ಲ ಎಂದು ಗಂಡನನ್ನೇ ಬಿಡಲು ಮುಂದಾಗಿರುವ ಮಹಿಳೆ ಬಗ್ಗೆ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಈ ಘಟನೆ ನಡೆದಿರುವುದೆಲ್ಲಿ ಎಂಬುದು ತಿಳಿದುಬಂದಿಲ್ಲ.
ಈ ಬಡ್ತಿ ಪಡೆಯಲು ಮೂರು ವರ್ಷಗಳ ಕಾಲ ಸತತವಾಗಿ ಶ್ರಮಿಸಿದ್ದಾರೆ, ನಿತ್ಯವೂ 14 ಗಂಟೆಗಳಿಗೂ ಹೆಚ್ಚು ಕಾಲ ಕೆಲಸ ಮಾಡಿದ್ದಾರೆ. ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಮಟೆಯವರೆಗೂ ಕೆಲಸ ಮಾಡುತ್ತಿದ್ದೆ ಎಂದು ತಿಳಿಸಿದ್ದಾರೆ.
ಮತ್ತಷ್ಟು ಓದಿ:ಕುಂಭಮೇಳದಲ್ಲಿ ಚಹಾ ಮಾರಿ ಕೇವಲ ಒಂದು ದಿನದಲ್ಲಿ 5 ಸಾವಿರ ರೂ. ಲಾಭ ಗಳಿಸಿದ ಯುವಕ; ವಿಡಿಯೋ ವೈರಲ್
ಆದರೆ ದಿನವಿಡೀ ಮೀಟಿಂಗ್ ಇದ್ದ ಕಾರಣ ಮಗಳು ಹುಟ್ಟುವಾಗಲೂ ಪತ್ನಿ ಜತೆ ಇರಲು ಸಾಧ್ಯವಾಗಿರಲಿಲ್ಲ ಇದರಿಂದಾಗಿ ಪತ್ನಿ ಕುಗ್ಗಿ ಹೋಗಿದ್ದಳು, ಹೆರಿಗೆ ನಂತರ ಖಿನ್ನತೆಯಿಂದ ಬಳಲುತ್ತಿದ್ದರು, ಆಗಲೂ ಆಕೆಯನ್ನು ನೋಡಿಕೊಳ್ಳಲು ಸಾಧ್ಯವಾಗಿರಲಿಲ್ಲ ಇದರಿಂದ ಬೇಸರಗೊಂಡ ಆಕೆ ಈ ನಿರ್ಧಾರ ಮಾಡಿದ್ದಾರೆ.
Total comp $900,000, but at what cost?
I got out of this rat race when I looked around me and realized that even the winners were miserable. pic.twitter.com/c05byRzgo2
— Daniel Vassallo (@dvassallo) February 12, 2025
ನಾವು ದೊಡ್ಡವರಾದಾಗ, ನಾವೆಲ್ಲರೂ ನಮ್ಮ ಜೀವನದ ಕೆಲವು ಕ್ಷಣಗಳನ್ನು ನೆನಪಿಸಿಕೊಳ್ಳುತ್ತೇವೆ ಮತ್ತು ನಗುತ್ತೇವೆ. ಆ ಕ್ಷಣಗಳನ್ನು ನಮ್ಮ ತಲೆಯಲ್ಲಿ ಮೆಲುಕು ಹಾಕಿದಾಗ ನಮಗೆ ಸಂತೋಷವಾಗುತ್ತದೆ. ಆದರೆ ಬಡ್ತಿ ಪಡೆದ ದಿನವನ್ನು ನೆನಪಿಸಿಕೊಂಡರೆ ಇವರಿಗೆ ಖುಷಿಯಾಗಲು ಸಾಧ್ಯವೇ ಇಲ್ಲ ಎಂದು ಒಬ್ಬ ಬಳಕೆದಾರರು ಹೇಳಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ