Viral: ಶಿವಲಿಂಗದ ಮೇಲೆ ಹೆಡೆ ಎತ್ತಿ ಕುಳಿತ ನಾಗರಹಾವು; ವಿಡಿಯೋ ವೈರಲ್
ಇತ್ತೀಚಿಗಷ್ಟೇ ಛತ್ತೀಸ್‌ಗಢದ ದೇವಾಲಯವೊಂದರಲ್ಲಿ ಕರಡಿಯೊಂದು ಶಿವಲಿಂಗವನ್ನು ತಬ್ಬಿಕೊಂಡು ಕುಳಿತಿರುವಂತಹ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಇಲ್ಲೊಂದು ಅಂತಹದ್ದೇ ದೃಶ್ಯ ಹರಿದಾಡುತ್ತಿದ್ದು, ದೇವಾಲಯವೊಂದರಲ್ಲಿ ಶಿವಲಿಂಗವನ್ನು ಸುತ್ತಿಕೊಂಡು ಹೆಡೆ ಬಿಚ್ಚಿ ಕುಳಿತು ನಾಗರ ಹಾವು ದರ್ಶನ ನೀಡಿದೆ. ಮಾಘ ಪೂರ್ಣಿಮೆಯ ದಿನ ಶಿವಲಿಂಗದ ಮೇಲೆ ನಾಗಪ್ಪ ಪ್ರತ್ಯಕ್ಷನಾಗಿದ್ದು, ಭಕ್ತರು ಇದೆಲ್ಲಾ ಶಿವ ಪವಾಡವೆಂದು ಹೇಳಿದ್ದಾರೆ.

ಈ ಭೂಮಿಯ ಮೇಲೆ ನಡೆಯುವ ಕೆಲವೊಂದು ಸಂಗತಿಗಳು ನಮ್ಮಲ್ಲಿ ಅಚ್ಚರಿಯನ್ನು ಉಂಟು ಮಾಡುತ್ತವೆ. ಅನೇಕ ಪ್ರದೇಶಗಳಲ್ಲಿ ಇಂತಹ ಒಂದಲ್ಲಾ ಒಂದು ಘಟನೆಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಇಲ್ಲೊಂದು ಅಂತಹದ್ದೇ ಅಚ್ಚರಿಯ ಘಟನೆ ನಡೆದಿದ್ದು, ದೇವಾಲಯವೊಂದರಲ್ಲಿ ಶಿವಲಿಂಗವನ್ನು ಸುತ್ತಿಕೊಂಡು ಹೆಡೆ ಬಿಚ್ಚಿ ಕುಳಿತು ನಾಗರ ಹಾವು ಭಕ್ತರಿಗೆ ದರ್ಶನ ನೀಡಿದೆ. ಮಾಘ ಪೂರ್ಣಿಮೆಯ ದಿನ ಶಿವಲಿಂಗದ ಮೇಲೆ ನಾಗಪ್ಪ ಪ್ರತ್ಯಕ್ಷನಾಗಿದ್ದು, ಜನ ಇದೆಲ್ಲಾ ಶಿವ ಪವಾಡವೆಂದು ಹೇಳಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ದೇವಾಲಯವೊಂದರಲ್ಲಿ ಕರಡಿಯೊಂದು ಶಿವಲಿಂಗವನ್ನು ತಬ್ಬಿಕೊಂಡು ಕುಳಿತಿರುವಂತಹ ಅಚ್ಚರಿಯ ದೃಶ್ಯ ವೈರಲ್ ಆಗಿತ್ತು. ಇದೀಗ ಶಿವಲಿಂಗದ ಮೇಲೆ ನಾಗರ ಹಾವು ಹೆಡೆ ಎತ್ತಿ ಕುಳಿತಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಮಾಘ ಪೂರ್ಣಿಮೆಯ ದಿನ ಆಂಧ್ರ ಪ್ರದೇಶದ ವಿಶಾಖಪಟ್ಟಣದ ದೇವಾಲಯವೊಂದರಲ್ಲಿ ಈ ಅಪರೂಪದ ಘಟನೆ ಸಂಭವಿಸಿದೆ. ಶಿವಲಿಂಗವನ್ನು ಸುತ್ತಿಕೊಂಡು ಹೆಡೆ ಬಿಚ್ಚಿ ಕುಳಿತು ನಾಗರ ಹಾವು ದರ್ಶನ ನೀಡಿದ್ದು, ಈ ದೃಶ್ಯವನ್ನು ಕಂಡು ಜನ ಆಶ್ಚರ್ಯಚಕಿತರಾಗಿದ್ದಾರೆ. ವಿಶಾಖಪಟ್ಟಣದ ಚಂದ್ರಬಾಬು ನಾಯ್ಡು ಕಾಲೋನಿಯಲ್ಲಿರುವ ಸತ್ಯನಾರಾಯಣ ಸ್ವಾಮಿ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ಶಿವ ದೇವಾಲಯದಲ್ಲಿ ಮಾಘ ಪೂರ್ಣಿಮೆಯ ದಿನ ನಾಗರಹಾವು ಕಾಣಿಸಿಕೊಂಡಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
శివలింగానికి నాగాభరణం
వైజాగ్ చంద్రబాబునాయుడు కాలనీలో ఉన్న శివాలయంలోకి నాగుపాము ప్రవేశించి శివలింగాన్ని ఆభరణంలా చుట్టేసింది.
చాలాసేపు పడగ విప్పి అలాగే దర్శనమిచ్చింది. ఆలయంలో ఉన్న భక్తులు ఇది శివలీలేనంటూ భక్తి పారవశ్యంలో మునిగిపోయారు. pic.twitter.com/fJ2iOBoesP
— greatandhra (@greatandhranews) February 12, 2025
ನಾಗಪ್ಪ ಶಿವಲಿಂಗವನ್ನು ಸುತ್ತಿ ಹೆಡೆ ಬಿಚ್ಚಿ ಕುಳಿತಿದ್ದು, ಈ ಅಚ್ಚರಿಯ ದೃಶ್ಯವನ್ನು ಕಾಣಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಕ್ಕೆ ಜಮಾಯಿಸಿದ್ದಾರೆ. ಈ ಅತ್ಯಪರೂಪದ ದೃಶ್ಯವನ್ನು ಕಣ್ತುಂಬಿಕೊಂಡು ಖಂಡಿತವಾಗಿಯೂ ಇದು ಶಿವನ ಲೀಲೇಯೇ ಎಂದು ಹೇಳಿದ್ದಾರೆ.
ಈ ಕುರಿತ ವಿಡಿಯೋವನ್ನು greatandhra ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ನಾಗರ ಹಾವೊಂದು ಶಿವಲಿಂಗವನ್ನು ಸುತ್ತಿ ಹೆಡೆ ಎತ್ತಿ ಕುಳಿತಿರುವಂತಹ ಅದ್ಭುತ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ತರಕಾರಿ ಖರೀದಿಸುತ್ತಿದ್ದ ಮಹಿಳೆಯ ಜೇಬಿನಲ್ಲೇ ಫೋನ್ ಸ್ಫೋಟ: ಇದಕ್ಕೆ ಕಾರಣವೇನು?, ಎಚ್ಚರ ಬಹಿಸುವುದು ಹೇಗೆ?
ಫೆಬ್ರವರಿ 12 ರಂದು ಹಂಚಿಕೊಳ್ಳಲಾದ ಈ ವಿಡಿಯೋ 89 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಹರ ಹರ ಮಹಾದೇವ ಇದೆಂಥಾ ಲೀಲೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼದೇವರು ಹೀಗೆ ಒಂದಲ್ಲಾ ಒಂದು ರೀತಿಯಲ್ಲಿ ತನ್ನ ಅಸ್ತಿತ್ವವನ್ನು ತಿಳಿಸುತ್ತಲೇ ಇರುತ್ತಾನೆʼ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




