ಅದೃಷ್ಟ ಕೆಟ್ಟರೆ ಹಗ್ಗವೂ ಹಾವಾಗುತ್ತದೆ ಎಂಬ ಗಾದೆ ಮಾತಿದೆ. ಹೌದು ಅದೃಷ್ಟ ಕೆಟ್ಟರೆ ಅಪಾಯಗಳು ಹೇಗೆ, ಯಾವ ರೀತಿ ಬಂದೊದಗುತ್ತವೆ ಅಂತಾ ಹೇಳೋದು ಕಷ್ಟ ಸಾಧ್ಯ. ಇದೇ ಕಾರಣಕ್ಕೆ ಪ್ರತಿ ಕ್ಷಣವೂ ಮೈಯೆಲ್ಲಾ ಕಣ್ಣಾಗಿರಬೇಕು, ಅಪಾಯಗಳು ಯಾವಾಗ ಅಪ್ಪಳಿಸುತ್ತವೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಹಿರಿಯರು ಆಗಾಗ್ಗೆ ಹೇಳುತ್ತಿರುತ್ತಾರೆ. ಇದೇ ರೀತಿಯ ಘಟನೆಯೊಂದು ಇದೀಗ ನಡೆದಿದ್ದು, ಗೋಡೌನ್ ಒಂದರಲ್ಲಿ ಮಹಿಳೆಯೊಬ್ಬರು ಕಸ ಗುಡಿಸುತ್ತಿದ್ದ ವೇಳೆ ಅವರ ಮೇಲೆ ಅಕ್ಕಿ ಮೂಟೆಗಳು ಕುಸಿದು ಬಿದ್ದಿವೆ. ಆ ಸಂದರ್ಭದಲ್ಲಿ ಅಲ್ಲಿದ್ದ ಇತರೆ ಕೆಲಸಗಾರರು ತಮ್ಮ ಸಮಯ ಪ್ರಜ್ಞೆ ಹಾಗೂ ದಿಢೀರ್ ಕಾರ್ಯಾಚರಣೆಯಿಂದ ಆ ಮಹಿಳೆಯ ಪ್ರಾಣವನ್ನು ರಕ್ಷಿಸಿದ್ದಾರೆ. ಈ ಘಟನೆಯ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ಈ ಘಟನೆ ನವಿ ಮುಂಬೈನ ವಾಶಿ ನಗರದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಯಲ್ಲಿ ನಡೆದಿದ್ದು, ಇಲ್ಲಿನ ಗೋಡೌನ್ ಒಂದರಲ್ಲಿ ಕಸ ಗುಡಿಸುತ್ತಿದ್ದಂತ ಸಂದರ್ಭದಲ್ಲಿ ಮಹಿಳೆಯೊಬ್ಬರ ಮೇಲೆ ಅಕ್ಕಿ ಮೂಟೆಗಳು ಬಿದ್ದಿವೆ. ಆ ತಕ್ಷಣ ಅಲ್ಲಿದ್ದ ಇತರೆ ಕೆಲಸಗಾರರು ಸೂಪರ್ ಹೀರೋಗಳಂತೆ ತಮ್ಮ ದಿಢೀರ್ ಕಾರ್ಯಾಚರಣೆಯಿಂದ ಅಕ್ಕಿ ಮೂಟೆಗಳ ಅಡಿಯಲ್ಲಿ ಸಿಲುಕಿಹಾಕಿಕೊಂಡ ಮಹಿಳೆಯನ್ನು ರಕ್ಷಿಸಿದ್ದಾರೆ. ಈ ಭಯಾನಕ ದೃಶ್ಯ ಗೋಡೌನ್ ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವರದಿಗಳ ಪ್ರಕಾರ, ಅಪಘಾತದಲ್ಲಿ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Real Life Heros: While cleaning, multiple bags of grains fell on a woman, the fellow workers ran to her aid (Mumbai, India ) pic.twitter.com/x9vkJwueVK
— Restoring Your Faith in Humanity (@HumanityChad) March 17, 2024
ಈ ಕುರಿತ ವಿಡಿಯೋವೊಂದನ್ನು @HumanityChad ಎಂಬ ಹೆಸರಿನ X ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ಗೋಡೌನ್ ಅಲ್ಲಿ ಮಹಿಳೆಯೊಬ್ಬರು ತಮ್ಮ ಪಾಡಿಗೆ ಕಸ ಗುಡಿಸುತ್ತಿರುವ ದೃಶ್ಯವನ್ನು ಕಾಣಬಹುದು. ಆ ಸಂದರ್ಭದಲ್ಲಿ ಅಲ್ಲೇ ಪಕ್ಕದಲ್ಲಿ ಮೇಲಿಂದ ಮೇಲೆ ಜೋಡಿಸಲಾಗಿದ್ದ 30 ರಿಂದ 40 ಅಕ್ಕಿ ಮೂಟೆಗಳು ಏಕಾಏಕಿ ಆ ಮಹಿಳೆಯ ಮೇಲೆ ಕುಸಿದು ಬೀಳುತ್ತವೆ. ಆ ಸಂದರ್ಭದಲ್ಲಿ ಸೂಪರ್ ಹೀರೋಗಳಂತೆ ಬಂದ ಇತರೆ ಕೆಲಸಗಾರರು ತಮ್ಮ ಸಮಯ ಪ್ರಜ್ಞೆ ಮತ್ತು ದಿಢೀರ್ ಕಾರ್ಯಾಚರಣೆಯಿಂದ ಅಕ್ಕಿ ಮೂಟೆಗಳ ನಡುವೆ ಸಿಲುಕಿಹಾಕಿಕೊಂಡಿದ್ದ ಆ ಮಹಿಳೆಯ ಪ್ರಾಣ ರಕ್ಷಣೆಯನ್ನು ಮಾಡಿದ್ದಾರೆ.
ಇದನ್ನೂ ಓದಿ: ಎಸಿ ನೀರು ಹೀಗೆ ಬಳಸಿ… ವಿಡಿಯೋ ಹಂಚಿಕೊಂಡ ಉದ್ಯಮಿ ಆನಂದ್ ಮಹೀಂದ್ರ
ಮಾರ್ಚ್ 17 ರಂದು ಹಂಚಿಕೊಳ್ಳಲಾದ ಈ ವಿಡಿಯೋ 5 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹಲವರು ಸೂಪರ್ ಹೀರೋಗಳಂತೆ ಬಂದು ಆ ಮಹಿಳೆಯ ಪ್ರಾಣ ರಕ್ಷಣೆ ಮಾಡಿದಂತಹ ಕೆಲಸಗಾರರಿಗೆ ಭಾರಿ ಮೆಚ್ಚುಗೆಯನ್ನು ಸೂಚಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ