Viral Video: ಹೇಗಿದೆ ನೋಡಿ ವಿಶ್ವದ ಅತಿ ಚಿಕ್ಕ ವಿವಾಹ ಆಮಂತ್ರಣ ಪತ್ರಿಕೆ
ಇಂದಿನ ಕಾಲದಲ್ಲಿ ವಿವಾಹ ಕಾರ್ಯಕ್ರಮಗಳನ್ನು ಬಹಳ ಅದ್ಧೂರಿಯಾಗಿ ಆಯೋಜಿಸುವುದರ ಜೊತೆಗೆ ದುಬಾರಿ ಬೆಲೆಯ ವಿಶಿಷ್ಟ ಆಮಂತ್ರಣ ಪತ್ರಿಕೆಗಳನ್ನು ಕೂಡಾ ಅಚ್ಚು ಹಾಕಿಸುತ್ತಾರೆ. ಆದರೆ ಇಲ್ಲೊಬ್ಬರು ಬಹಳ ಸಿಂಪಲ್ ಆಗಿರುವ ಹಾಗೇನೆ ಮುದ್ದಾಗಿರುವ ಜಗತ್ತಿನ ಅತ್ಯಂತ ಸಣ್ಣ ವಿವಾಹ ಆಮಂತ್ರಣ ಪತ್ರಿಕೆಯನ್ನು ಮುದ್ರಿಸುವ ಮೂಲಕ ಅಚ್ಚರಿಗೆ ಕಾರಣರಾಗಿದ್ದಾರೆ. ಈ ಕುರಿತ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇವರ ಕ್ರಿಯೆಟಿವಿಟಿಗೆ ನೆಟ್ಟಿಗರು ತಲೆ ಬಾಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮದುವೆ, ನಿಶ್ಚಿತಾರ್ಥ ಮುಂತಾದ ಶುಭ ಸಮಾರಂಭಗಳನ್ನು ವಿನೂತನ ರೀತಿಯಲ್ಲಿ ಆಯೋಜಿಸುವ ಪರಿಪಾಠ ಆರಂಭವಾಗಿದೆ. ಹೌದು ಪ್ರತಿಯೊಬ್ಬರೂ ತಮ್ಮ ಅನುಕೂಲಕ್ಕೆ ತಕ್ಕಂತೆ ಅದ್ಧೂರಿಯಾಗಿ ವಿವಾಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಜೊತೆಗೆ ಮದುವೆ ಆಮಂತ್ರಣ ಪತ್ರಿಕೆಗಳನ್ನು ಸಹ ವಿನೂತನ ರೀತಿಯಲ್ಲಿ ಹಚ್ಚು ಹಾಕಿಸುವ ಟ್ರೆಂಡ್ ಕೂಡಾ ಶುರುವಾಗಿದೆ. ಕೆಲವೊಬ್ಬರು ದುಬಾರಿ ವೆಚ್ಚದ ಮದುವೆ ಕಾರ್ಡ್ ಪ್ರಿಂಟ್ ಮಾಡಿಸಿದರೆ, ಇನ್ನೂ ಕೆಲವರು ಪರಿಸರ ಸ್ನೇಹಿ ಆಮಂತ್ರಣ ಪತ್ರಿಕೆ, ಮತದಾನದ ಜಾಗೃತಿಯನ್ನು ಮೂಡಿಸುವ ಬರಹಗಳಿರುವ ವಿವಾಹ ಆಮಂತ್ರಣ ಪತ್ರಿಕೆಯನ್ನು ಪ್ರಿಂಟ್ ಮಾಡಿಸುತ್ತಾರೆ. ಈ ಹಿಂದೆ ಇಂತಹ ಕೆಲವು ವಿನೂತನ ಮದುವೆ ಆಮಂತ್ರಣ ಪತ್ರಿಕೆಗಳ ಕುರಿತ ಸುದ್ದಿಗಳು ವೈರಲ್ ಆಗಿದ್ದು, ಇದೀಗ ಅಂತಹದ್ದೇ ಸುದ್ದಿಯೊಂದು ವೈರಲ್ ಆಗಿದ್ದು, ವ್ಯಕ್ತಿಯೊಬ್ಬರು ವಿಶ್ವದ ಅತ್ಯಂತ ಚಿಕ್ಕವಿವಾಹ ಆಮಂತ್ರಣ ಪತ್ರಿಕೆಯನ್ನು ಅಚ್ಚು ಹಾಕಿಸಿದ್ದಾರೆ. ಇವರ ಕ್ರಿಯೆಟಿವಿಟಿಯನ್ನು ಕಂಡು ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ.
@abi_cards ಎಂಬ ಹೆಸರಿನ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಪುಟಾಣಿ ಹಾಗೇನೇ ಬಹಳ ವಿನೂತನವಾಗಿರುವ ವಿವಾಹ ಆಮಂತ್ರಣ ಪತ್ರಿಕೆಯನ್ನು ಕಾಣಬಹುದು. ಶಶಿ ಕುಮಾರ್ ಮತ್ತು ಸಪ್ತಿಕಾ ಎಂಬವರ ಮದುವೆಯ ಆಮಂತ್ರಣ ಪತ್ರಿಕೆ ಇದಾಗಿದ್ದು, ಈ ಪುಟ್ಟ ಆಮಂತ್ರಣ ಪತ್ರಿಕೆಯಲ್ಲಿ ನಾಮ ಸಂವತ್ಸರ, ವಧು ವರರ ಹೆಸರು, ಮದುವೆ ನಡೆಯುವ ಸ್ಥಳ, ಮುಹೂರ್ತ ಹೀಗೆ ಮದುವೆಯ ಪತ್ರಿಯೊಂದು ಡಿಟೇಲ್ಸ್ ಗಳನ್ನು ಬಹಳ ವಿನೂತನವಾಗಿ ಹಚ್ಚು ಹಾಕಿಸಲಾಗಿದೆ.
ಇದನ್ನೂ ಓದಿ: ದೇವ್ರೆ ನನ್ನ ನೀನೇ ಕಾಪಾಡ್ಬೇಕಪ್ಪ; ದೇವರಿಗೆ ಕೈ ಮುಗಿದು ದೇಗುಲದ ಹುಂಡಿ ಹಣವನ್ನೇ ಎಗರಿಸಿದ ಭೂಪ
ವೈರಲ್ ವಿಡಿಯೋ ಇಲ್ಲಿದೆ ನೊಡಿ:
View this post on Instagram
ಕೆಲ ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 10.3 ಮಿಲಿಯನ್ ವೀಕ್ಷಣೆಗಳನ್ನು ಪಡೆದು ನೆಟ್ಟಿಗರ ಮನ ಗೆದ್ದಿದೆ. ಹಲವಾರು ಕಾಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಕಡಿಮೆ ಖರ್ಚಿನಲ್ಲಿ ಮದುವೆ ಆಮಂತ್ರಣ ಪತ್ರಿಕೆ ಮುದ್ರಣ ಮಾಡಬೇಕೆನ್ನುವವರಿಗೆ ಇದು ಒಳ್ಳೆಯ ಆಯ್ಕೆʼ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇಂತಹ ಐಡಿಯಾಗಳಿಂದ ಹಣ ಹೆಚ್ಚು ಖರ್ಚಾಗುವುದಿಲ್ಲ ಹಾಗೇನೇ ಕಾಗದಗಳೂ ವೇಸ್ಟ್ ಆಗೋಲ್ಲʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼನನ್ನ ಸಂಬಂಧಿಕರ ಹೆಸರನ್ನು ಬರೆಯಬೇಕು, ಈ ಪತ್ರಿಕೆ ಸಾಲದು ಅದಕ್ಕೆ ಎಂದು ತಮಾಷೆ ಮಾಡಿದ್ದಾರೆ. ಇನ್ನೂ ಅನೇಕರು ಕಡಿಮೆ ಖರ್ಚಿನಲ್ಲಿ ಹೀಗೂ ವಿನೂತನ ರೀತಿಯಲ್ಲಿ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಬಹುದೇ ಎಂದು ಆಶ್ಚರ್ಯಪಟ್ಟಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:04 pm, Mon, 18 March 24