World Bicycle Day 2022: ಇಂದು ವಿಶ್ವ ಸೈಕಲ್ ದಿನ; ಈ ವರ್ಷದ ಥೀಮ್, ವಿಶೇಷತೆ ಹೀಗಿದೆ​

| Updated By: ಸುಷ್ಮಾ ಚಕ್ರೆ

Updated on: Jun 03, 2022 | 9:42 AM

ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಾದ ಬಳಿಕ ಸೈಕಲ್​ನತ್ತ ಒಲವು ಹೆಚ್ಚಾಗಿದೆ. ಹೀಗಾಗಿ, ಮಾರುಕಟ್ಟೆಯಲ್ಲಿ ಇಂದಿನ ಯುವಪೀಳಿಗೆಗೆ ಅನುಕೂಲವಾಗುವಂತಹ ಅನೇಕ ರೀತಿಯ ಸೈಕಲ್​ಗಳು ಲಭ್ಯ ಇವೆ. ಇಂದು ವಿಶ್ವ ಸೈಕಲ್ ದಿನ. ಏನಿದರ ವಿಶೇಷತೆ?

World Bicycle Day 2022: ಇಂದು ವಿಶ್ವ ಸೈಕಲ್ ದಿನ; ಈ ವರ್ಷದ ಥೀಮ್, ವಿಶೇಷತೆ ಹೀಗಿದೆ​
ವಿಶ್ವ ಸೈಕಲ್ ದಿನ
Image Credit source: Business Today
Follow us on

ಜನಜೀವನ ಬದಲಾದಂತೆ ಆರೋಗ್ಯ ಕಾಪಾಡಿಕೊಳ್ಳಲು ಜನರು ಮತ್ತೆ ಹಳೆಯ ಜೀವನಶೈಲಿಯತ್ತ ವಾಲುತ್ತಿದ್ದಾರೆ. ಬೈಕ್, ಕಾರುಗಳ ಬದಲು ನಗರಗಳಲ್ಲಿ ಸೈಕಲ್ ಸವಾರಿ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಸೈಕ್ಲಿಂಗ್ (Cycling) ಇತ್ತೀಚೆಗೆ ಆಧುನಿಕ ಜೀವನಶೈಲಿಯಲ್ಲಿ ಸ್ಥಾನ ಪಡೆದಿದೆ. ವೀಕೆಂಡ್​ನಲ್ಲಿ ಸೈಕಲ್​ನಲ್ಲೇ ನೂರಾರು ಕಿ.ಮೀ. ಪ್ರಯಾಣ ಮಾಡುವ ಟೆಕ್ಕಿಗಳು ಕೂಡ ಇದ್ದಾರೆ. ಅದರಲ್ಲೂ ಪೆಟ್ರೋಲ್ (Petrol Price), ಡೀಸೆಲ್ ಬೆಲೆ (Diesel Price) ಹೆಚ್ಚಾದ ಬಳಿಕ ಸೈಕಲ್​ನತ್ತ ಒಲವು ಹೆಚ್ಚಾಗಿದೆ. ಹೀಗಾಗಿ, ಮಾರುಕಟ್ಟೆಯಲ್ಲಿ ಇಂದಿನ ಯುವಪೀಳಿಗೆಗೆ ಅನುಕೂಲವಾಗುವಂತಹ ಅನೇಕ ರೀತಿಯ ಸೈಕಲ್​ಗಳು ಲಭ್ಯ ಇವೆ. ಇಂದು ವಿಶ್ವ ಸೈಕಲ್ ದಿನ (World Bicycle Day). ಏನಿದರ ವಿಶೇಷತೆ?

ಪ್ರಪಂಚದಾದ್ಯಂತ ಸೈಕಲ್‌ನ ಮಹತ್ವವನ್ನು ಗುರುತಿಸಲು ಪ್ರತಿ ವರ್ಷ ಜೂನ್ 3ರಂದು ವಿಶ್ವ ಸೈಕಲ್ ದಿನವನ್ನು ಆಚರಿಸಲಾಗುತ್ತದೆ. ಸೈಕಲ್‌ನ ವೈಶಿಷ್ಟ್ಯತೆ, ದೀರ್ಘಾಯುಷ್ಯವನ್ನು ಗುರುತಿಸಲು ಇದು ವಿಶ್ವಸಂಸ್ಥೆಯ ಪ್ರಯತ್ನವಾಗಿದೆ. ಸೈಕಲ್ ಪರಿಸರ ಸ್ನೇಹಿ ಸಾರಿಗೆ ಸಾಧನವಾಗಿದೆ. 2018ರ ಏಪ್ರಿಲ್ ತಿಂಗಳಲ್ಲಿ ಅಮೆರಿಕಾದಲ್ಲಿ ಮೊದಲು ಜನರಲ್ ಅಸೆಂಬ್ಲಿ ಜೂನ್ 3 ಅನ್ನು ವಿಶ್ವ ಬೈಸಿಕಲ್ ದಿನ ಎಂದು ಘೋಷಿಸಿತು. ಪ್ರಪಂಚದಾದ್ಯಂತದ ಇದೇ ದಿನ ಸೈಕಲ್ ದಿನವನ್ನು ಆಚರಿಸಲಾಗುತ್ತದೆ. ದುಬಾರಿ ಸಾರಿಗೆಯನ್ನು ಖರೀದಿಸಲು ಸಾಧ್ಯವಾಗದ ಅನೇಕ ಜನರು ತಮ್ಮ ದೈನಂದಿನ ಪ್ರಯಾಣಕ್ಕಾಗಿ ಸೈಕಲ್ ಅನ್ನು ಅವಲಂಬಿಸಿದ್ದಾರೆ.

ವಿಶ್ವ ಸೈಕಲ್ ದಿನದ ಲೋಗೋ 2022:
ವಿಶ್ವ ಸೈಕಲ್ ದಿನದ ಮೂಲ ಲೋಗೋವನ್ನು ಐಸಾಕ್ ಫೆಲ್ಡ್ ಅವರು ನೀಲಿ ಮತ್ತು ಬಿಳಿ ಬಣ್ಣಗಳಲ್ಲಿ ವಿನ್ಯಾಸಗೊಳಿಸಿದ್ದಾರೆ. ಇದು ಪ್ರಪಂಚದಾದ್ಯಂತ ವಿವಿಧ ಸೈಕಲ್ ಸವಾರರು ಸವಾರಿ ಮಾಡುವುದನ್ನು ಚಿತ್ರಿಸುತ್ತದೆ ಮತ್ತು ಪ್ರೊಫೆಸರ್ ಜಾನ್ E. ಸ್ವಾನ್ಸನ್ ಇದನ್ನು ಅನಿಮೇಟ್ ಮಾಡಿದ್ದಾರೆ. ಸೈಕಲ್ ಪ್ರತಿಯೊಬ್ಬರಿಗೂ ಸೇರಿದ್ದಾಗಿದೆ ಮತ್ತು ಅದು ಎಲ್ಲರಿಗೂ ಅನ್ವಯಿಸುತ್ತದೆ ಎಂದು ತೋರಿಸುವುದು ಈ ದಿನದ ಗುರಿಯಾಗಿದೆ.

ಇದನ್ನೂ ಓದಿ: Viral Video: ಚಾಲಕನಿಲ್ಲದೆ ಮುಂದಕ್ಕೆ ಚಲಿಸಿ ಹಿಂದಕ್ಕೆ ಬಂದ ಸೈಕಲ್ ಆಟೋ ರಿಕ್ಷಾ! ವಿಡಿಯೋ ವೈರಲ್

ವಿಶ್ವ ಸೈಕಲ್ ದಿನದ ಥೀಮ್:
ವಿಶ್ವಸಂಸ್ಥೆಯು ಪ್ರಪಂಚದ ಮೇಲೆ ಪರಿಣಾಮ ಬೀರುವ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲು ನಿರ್ದಿಷ್ಟ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲು ವಿವಿಧ ಅಂತಾರಾಷ್ಟ್ರೀಯ ದಿನಗಳನ್ನು ಆಚರಿಸಲು ಹೆಸರುವಾಸಿಯಾಗಿದೆ. ವಿಶ್ವ ಸೈಕಲ್ ದಿನವು ಸೈಕಲ್ ಬಳಸುವ ಪ್ರಯೋಜನಗಳ ಬಗ್ಗೆ ಜಾಗೃತಿಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ವಿಶ್ವಸಂಸ್ಥೆಯ ಪ್ರಕಾರ, ಸೈಕಲ್ ಸುಸ್ಥಿರ ಸಾರಿಗೆ ಸಾಧನವಾಗಿದೆ. ಇದು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟವನ್ನು ಉತ್ತೇಜಿಸುವ ಮೂಲಕ ಅಸಮಾನತೆಗಳನ್ನು ಕಡಿಮೆ ಮಾಡುತ್ತದೆ.

ಅಂತರಸರ್ಕಾರಿ ಸಂಸ್ಥೆಯ ಪ್ರಕಾರ, ಸೈಕಲ್ ಬಳಕೆಯು ಅದು ನಿಗದಿಪಡಿಸಿದ 13 ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಪೂರೈಸಲು ನಿರ್ಣಾಯಕವಾಗಿದೆ. ಸೈಕ್ಲಿಂಗ್ ದೈಹಿಕ ಚಟುವಟಿಕೆಗಳಲ್ಲಿ ಒಂದಾಗಿದೆ. ಇದು ಕೇವಲ ಮೋಜು ಮಾತ್ರವಲ್ಲದೆ ವ್ಯಾಯಾಮದ ಉತ್ತಮ ರೂಪವಾಗಿದೆ. ನೀವು ಜಿಮ್‌ನಲ್ಲಿ ಗಂಟೆಗಳ ಕಾಲ ಕಳೆಯಲು ಬಯಸದಿದ್ದರೆ, ನೀವು ಸೈಕ್ಲಿಂಗ್ ಅನ್ನು ಆಯ್ಕೆ ಮಾಡಬಹುದು. ಇದು ನಿಮ್ಮನ್ನು ಪ್ರಕೃತಿಯೊಂದಿಗೆ ಸಂಪರ್ಕಿಸಲು ಸಹಾಯ ಮಾಡುತ್ತದೆ ಮತ್ತು ನಿಮ್ಮನ್ನು ದೈಹಿಕವಾಗಿ ಸದೃಢವಾಗಿರಿಸುತ್ತದೆ.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ