ವಿಶ್ವದಲ್ಲಿಯೇ ಅತ್ಯಂತ ಪುಟ್ಟ ಮಗುವಿನ ಜನನ; 212 ಗ್ರಾಂ ತೂಕ ಹೊಂದಿದ್ದ ಮಗುವಿನ ರೋಚಕ ಕಥೆ ವೈರಲ್
ಹೆರಿಗೆ ನೋವಿನಿಂದ ಗರ್ಭಿಣಿ ಆಸ್ಪತ್ರೆಗೆ ಹೋದಾಗ 22 ವರ್ಷದ ನರ್ಸ್ಗೆ ನಂಬಲೇ ಸಾಧ್ಯವಾಗಲಿಲ್ಲ. ಅವರು ಒಂದು ಕ್ಷಣ ಬೆರಗಾದರು ಇಂತಹ ಚಿಕ್ಕ ಮಗುವನ್ನು ನಾನು ಎಂದು ನೋಡಿರಲಿಲ್ಲ ಎಂದು ಎಂದು ನರ್ಸ್ ಪ್ರತಿಕ್ರಿಯೆ ಹಂಚಿಕೊಂಡಿದ್ದಾರೆ.
ವಿಶ್ವದ ಅತ್ಯಂತ ಚಿಕ್ಕ ಮಗು ಕಳೆದ ವರ್ಷ ಜೂನ್ 9ರಂದು ಸಿಂಗಾಪುರದಲ್ಲಿ ಜನಿಸಿದೆ. ಕೇವಲ 25 ವಾರಗಳಲ್ಲಿಯೇ ತಾಯಿ ಮಗುವಿಗೆ ಜನನ ನೀಡಿದ್ದಾಳೆ. ಸಿಂಗಾಪುರದ ನ್ಯಾಷನಲ್ ಯುನಿವರ್ಸಿಟಿ ಹಾಸ್ಪಿಟಲ್ನಲ್ಲಿ (NUH) ಮಗು ಜನಿಸಿದಾಗ 212 ಗ್ರಾಂ ತೂಕವಿತ್ತು. ಕೇವಲ 24 ಸೆಂ.ಮೀ ಉದ್ದವನ್ನು ಹೊಂದಿತ್ತು ಎಂಬುದಾಗಿ ಬಿಬಿಸಿ ವರದಿ ಮಾಡಿದೆ.
ಈಗ ಮಗುವಿಗೆ ಕ್ವೆಕ್ ಯು ಕ್ಸುವಾನ್ ಎಂಬ ಹೆಸರಿಡಲಾಗಿದೆ. ಹೆರಿಗೆ ನೋವಿನಿಂದ ಗರ್ಭಿಣಿ ಆಸ್ಪತ್ರೆಗೆ ಹೋದಾಗ 22 ವರ್ಷದ ನರ್ಸ್ಗೆ ನಂಬಲೇ ಸಾಧ್ಯವಾಗಲಿಲ್ಲ. ಅವರು ಒಂದು ಕ್ಷಣ ಬೆರಗಾದರು ಇಂತಹ ಚಿಕ್ಕ ಮಗುವನ್ನು ನಾನು ಎಂದು ನೋಡಿರಲಿಲ್ಲ ಎಂದು ಎಂದು ನರ್ಸ್ ಪ್ರತಿಕ್ರಿಯೆ ಹಂಚಿಕೊಂಡಿದ್ದಾರೆ.
ಮಗುವಿನ ಜನನದ ಬಳಿಕ ಮಗು ಮತ್ತು ತಾಯಿ 13 ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಹಲವು ವಾರಗಳ ಕಾಲ ವೆಂಟಿಲೇಟರ್ನಲ್ಲಿ ಇರಿಸಲಾಯಿತು. ಇದೀಗ ಮಗು 6.3 ಕೆಜಿ ಹೊಂದಿದ್ದಾಳೆ. ಕಳೆದ 3 ತಿಂಗಳ ಹಿಂದಷ್ಟೇ ತಾಯಿ ಮತ್ತು ಮಗುವನ್ನು ಆಸ್ಪತ್ರೆಯಿಂದ ಡಿಶ್ಚಾರ್ಜ್ ಮಾಡಲಾಗಿದೆ ಎಂಬುದು ವರದಿಗಳಿಂದ ತಿಳಿದು ಬಂದಿದೆ.
ಮಗುವಿನ ಚರ್ಮ ತುಂಬಾ ತೆಳುವಾಗಿತ್ತು. ದೇಹವು ತುಂಬಾ ಚಿಕ್ಕವಾದ್ದರಿಂದ ಹೆಚ್ಚು ಕಾಳಜಿಯಿಂದ ನೋಡಿಕೊಳ್ಳಬೇಕಾಗಿತ್ತು. ಚಿಕ್ಕದಾದ ಉಸಿರಾಟ ಕೊಳವೆಯನ್ನು ಹುಡುಕಿ ಅಳವಡಿಸಲಾಯಿತು. ಔಷಧಿಗಳನ್ನೂ ಸಹ ನೀಡಲು ತುಂಬಾ ಎಚ್ಚರಿಕೆ ವಹಿಸಬೇಕಿತ್ತು ಎಂದು ವೈದ್ಯರು ಮಾಹಿತಿ ಹಂಚಿಕೊಂಡಿದ್ದಾರೆ.
ಮಗು ಯು ಕ್ಸುವಾನ್ಳ ಹೆತ್ತವರಿಗೆ ವೈದ್ಯಕೀಯ ಉಪಕರಣಗಳನ್ನು ಬಳಸುವ ಕುರಿತಾಗಿ ತಿಳಿ ಹೇಳಲಾಗಿದೆ. ಆಸ್ಪತ್ರೆಯಿಂದ ಡಿಶ್ಚಾರ್ಜ್ ಆದಾಗಿನಿಂದ ಮನೆಯಲ್ಲಿಯೇ ಮಗುವಿನ ಆರೈಕೆ ನಡೆಯುತ್ತಿದೆ ಎಂದು ಆಸ್ಪತ್ರೆಯ ಸಿಬ್ಬಂದಿ ಹೇಳಿದ್ದಾರೆ.
ಈ ಹಿಂದೆ 2018ರಲ್ಲಿ ಜನಿಸಿದ 245 ಗ್ರಾಂ ತೂಕದ ಮಗು ಯುನೈಟೆಡ್ ಸ್ಟೇಟ್ನಲ್ಲಿ ಜನಿಸಿತ್ತು. ಇದೀಗ ಈ ಮಗು 212 ಗ್ರಾಂ ತೂಕ ಹೊಂದಿದ್ದು ವಿಶ್ವದಲ್ಲಿಯೇ ಹುಟ್ಟಿದ ಅತಿ ಚಿಕ್ಕ ಮಗುವಾಗಿದೆ.
ಇದನ್ನೂ ಓದಿ:
Viral Video: ಗಾಳಿಯಲ್ಲಿ ತೇಲುತ್ತಿರುವ ಮಗುವನ್ನು ಕಂಡು ಗಾಬರಿಗೊಂಡ ತಾಯಿ! ಮುಂದೇನಾಯ್ತು? ವಿಡಿಯೋ ನೋಡಿ