Viral Video : ಈಗಲೂ ಆಸ್ಪತ್ರೆ ಎಂದರೆ ಎಷ್ಟೋ ಜನಕ್ಕೆ ಕೈಕಾಲು ನಡುಗುತ್ತವೆ. ಅದರಲ್ಲೂ ಪ್ರಯೋಗಾಲಯಕ್ಕೆ ಹೋಗುವುದೆಂದರೆ ಇನ್ನೂ ಭಯ. ಮನುಷ್ಯರಾದ ನಾವು ಹೇಗೋ ಧೈರ್ಯ ತಂದುಕೊಳ್ಳುತ್ತೇವೆ. ಆದರೆ ಕಾಡಿನ ಪ್ರಾಣಿಗಳಿಗೆ? ಊಹಿಸಲು ಅಸಾಧ್ಯವೇ. ಆದರೆ ವೈರಲ್ ಆಗಿರುವ ವಿಡಿಯೋದಲ್ಲಿ ಈ ಆನೆ ಮಾತ್ರ ಸಮಾಧಾನದಿಂದ, ನಮ್ರತೆಯಿಂದ ಪ್ರಯೋಗಾಲಯಕ್ಕೆ ಹೋಗುತ್ತದೆ. ಯಂತ್ರಗಳನ್ನು, ಮನುಷ್ಯರನ್ನು ನೋಡಿ ಕಂಗಾಲಾಗುವುದಿಲ್ಲ. ಅಲ್ಲಿ ಹೇಗೆ ಹೇಳುತ್ತಾರೋ ಹಾಗೆ ಕೇಳುತ್ತದೆ. ಎಕ್ಸ್ರೇ ತೆಗೆಸಿಕೊಳ್ಳುವಾಗ ಅದು ನೀಡುವ ಸಹಕಾರ ನಂಬಲಸಾಧ್ಯವೆನ್ನುವಂತಿದೆ.
ಬಹಳ ತಾಳ್ಮೆಯಿಂದ ಮನುಷ್ಯರೂ ನಾಚುವಂತೆ ವರ್ತಿಸಿದೆ ಈ ಆನೆ. ಬಹುಶಃ ಇಷ್ಟೊಂದು ತಿಳಿವಳಿಕೆ ಮತ್ತು ಸಹಕಾರದಿಂದ ನಡೆದುಕೊಂಡ ಇಂಥ ಆನೆಯನ್ನು ನೀವು ಈ ತನಕ ನೋಡಿಲ್ಲವೇನೋ. ಈತನಕ ಈ ವಿಡಿಯೋ ಅನ್ನು ಸುಮಾರು 8,000 ಜನ ನೋಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ಧಾರೆ.
I am sure you have never seen such a cooperative patient coming in for an X-Ray pic.twitter.com/UNmhSIrXOr
— Kaveri ?? (@ikaveri) December 7, 2022
ಈತನಕ ನಾನು ಇಷ್ಟು ಸಹಕಾರದಿಂದ ವರ್ತಿಸಿದ ಆನೆಯನ್ನು, ಪ್ರಾಣಿಯನ್ನು ನೋಡಿರಲೇ ಇಲ್ಲ ಎಂದಿದ್ದಾರೆ ಒಬ್ಬರು. ಈಕೆ ಬಹಳ ತಿಳಿವಳಿಕೆಯುಳ್ಳವಳಾಗಿದ್ದಾಳೆ ಎಂದಿದ್ದಾರೆ ಇನ್ನೊಬ್ಬರು. ಎಂಥ ಸೌಮ್ಯ, ಎಂಥ ಬುದ್ಧಿಶಕ್ತಿ, ಎಷ್ಟೊಂದು ವಿಶ್ವಾಸ, ಈಕೆಯ ನಂಬಿಕೆಗೆ ನಾವೆಲ್ಲ ಅರ್ಹರು ಎಂದಿದ್ದಾರೆ ಮಗದೊಬ್ಬರು. ಎಂಥ ಚೆಂದ, ಇಂಥ ಸೌಮ್ಯ ಪ್ರಾಣಿಗೆ ತೊಂದರೆ ಕೊಡಲು ಮನುಷ್ಯರಾದ ನಮಗೆ ಹೇಗೆ ಮನಸ್ಸಾಗುತ್ತದೆಯೋ. ನಾವು ಮನುಷ್ಯರು ಕ್ರೂರ ಸಂತತಿಯವರೇನೋ ಎನ್ನಿಸುತ್ತದೆ ಪ್ರಾಣಿಗಳಿಗೆ ತೊಂದರೆ ಕೊಡುವಾಗ.
ಸೌಮ್ಯವರ್ತನೆಯಿಂದ ಆನೆಯ ಮೇಲೆ ಪ್ರೀತಿ ಉಂಟಾಗಿ ಮತ್ತೆ ಮತ್ತೆ ವಿಡಿಯೋ ನೋಡಬೇಕು ಅನ್ನಿಸುತ್ತಿದೆಯಲ್ಲ ನಿಮಗೆ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ