ಹೊಸ ವರ್ಷದ ಆರಂಭಕ್ಕೆ ಇನ್ನೇನೂ ಕೆಲ ದಿನಗಳು ಮಾತ್ರ ಬಾಕಿ ಉಳಿದಿವೆ. 2025 ಅನ್ನು ಸಂಭ್ರಮದಿಂದ ಬರ ಮಾಡಿಕೊಳ್ಳಲು ಇಡೀ ವಿಶ್ವವೇ ಸಿದ್ಧತೆ ನಡೆಸುತ್ತಿದೆ. ಈ ಮಧ್ಯೆ ಸರ್ಚ್ ಇಂಜಿನ್ ಗೂಗಲ್ ಭಾರತೀಯರು ಗೂಗಲ್‌ನಲ್ಲಿ ಯಾವೆಲ್ಲಾ ವಿಷಯಗಳ ಬಗ್ಗೆ ಅತಿ ಹೆಚ್ಚು ಹುಡುಕಾಟ ನಡೆಸಿದ್ದಾರೆ ಎನ್ನುವ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ನಮಗೆ ಏನೇ ಒಂದು ವಿಷಯಗಳ ಬಗ್ಗೆ ಮಾಹಿತಿ ಬೇಕೆಂದರೂ ನಾವು ಗೂಗಲ್‌ನಲ್ಲಿ ಆ ಬಗ್ಗೆ ಉತ್ತರವನ್ನು ಕಂಡುಕೊಳ್ಳುತ್ತೇವೆ. ಹೀಗೆ 2024 ರಲ್ಲಿ ವಿಶೇಷವಾಗಿ ಭಾರತೀಯರು ಯಾವೆಲ್ಲಾ ವಿಷಯಗಳ ಬಗ್ಗೆ ಅತೀ ಹೆಚ್ಚು ಹುಡುಕಾಟ ನಡೆಸಿದ್ದಾರೆ ಎಂಬ ಟಾಪ್ 10 ಪಟ್ಟಿಯನ್ನು ಗೂಗಲ್ ಬಿಡುಗಡೆಗೊಳಿದೆ.
ರತನ್ ಟಾಟಾರಿಂದ ಹಿಡಿದು ಐಪಿಎಲ್ ವರೆಗೆ ಭಾರತೀಯರು ಗೂಗಲ್‌ನಲ್ಲಿ ಹುಡುಕಾಡಿದ ಟಾಪ್ 10 ವಿಷಯಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ. ಈ ವರ್ಷ ಭಾರತೀಯರು ವೈವಿದ್ಯಮಯ ಕುತೂಹಲಕಾರಿ ವಿಷಯಗಳ ಬಗ್ಗೆ ಗೂಗಲ್‌ನಲ್ಲಿ ಹುಡುಕಾಟ ನಡೆಸಿದ್ದು, ಅದರಲ್ಲಿ ಐಪಿಎಲ್, ಟಿ20 ವಿಶ್ವ ಕಪ್, ಬಿಜೆಪಿ ಮತ್ತು ಚುನಾವಣಾ ಫಲಿತಾಂಶದಂತಹ ರಾಜಕೀಯ ವಿಷಯಗಳು ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ.
ಭಾರತೀಯರು ಈ ವರ್ಷ ಗೂಗಲ್‌ನಲ್ಲಿ ಅತೀ ಹೆಚ್ಚಾಗಿ ಐಪಿಎಲ್ ಮ್ಯಾಚ್ ಬಗ್ಗೆ ಸರ್ಚ್ ಮಾಡಿದ್ದಾರೆ. ಆಟಗಾರರು, ನೆಚ್ಚಿನ ತಂಡಗಳು, ಹರಾಜು ಪ್ರಕ್ರಿಯೆ ಐಪಿಎಲ್‌ಗೆ ಸಂಬಂಧಿಸಿದ ಈ ಎಲ್ಲಾ ವಿಷಯಗಳ ಬಗ್ಗೆ ಭಾರತೀಯರು ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಮಾಡಿದ್ದಾರೆ.
ಬಾರ್ಬಡೋಸ್‌ನ ಕೆನ್ಸಿಂಗ್ವನ್ ಓವಲ್ ಕ್ರೀಡಾಂಗಣದಲ್ಲಿ ನಡೆದಿದ್ದ 2024 ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಭಾರತವು ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ವಿಶ್ವ ಕಪ್ ಗೆದ್ದಿತ್ತು. ಸ್ಕೋರ್‌ಗಳು, ಆಟಗಾರರರ ಪ್ರದರ್ಶನಗಳು ಹೀಗೆ ಈ ಟಿ20 ವಿಶ್ವ ಕಪ್ ಟೂರ್ನಿಗೆ ಸಂಬಂಧಪಟ್ಟ ಅನೇಕ ವಿಷಯಗಳ ಬಗ್ಗೆಯೂ ಭಾರತೀಯರು ಗೂಗಲ್‌ನಲ್ಲಿ ಅತೀ ಹೆಚ್ಚು ಹುಡುಕಾಟ ನಡೆಸಿದ್ದಾರೆ.
ಈ ವರ್ಷ ವರ್ಷ ನಡೆದ ಲೋಕಸಭೆಯ ಚುನಾವಣೆಯ ಬಗ್ಗೆ ಗೊತ್ತೇ ಇದೆ ಅಲ್ವಾ. ಈ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿಯ ನೀತಿಗಳು, ಬಿಜೆಪಿ ನಾಯಕರು, ಚುನಾವಣಾ ತಂತ್ರಗಳ ಬಗ್ಗೆ ಭಾರತೀಯರು ಗೂಗಲ್‌ನಲ್ಲಿ ಹುಡುಕಾಟ ನಡೆಸಿದ್ದಾರೆ.
ಇದನ್ನೂ ಓದಿ: ಈ ವರ್ಷದ ಭಾರತದ ನವವಿವಾಹಿತ ಜೋಡಿಗಳ ಫೇವರಿಟ್ ಐದು ಹನಿಮೂನ್ ಸ್ಟಾಪ್ಗಳಿವು
2024 ರ ಲೋಕಸಭೆ ಚುನಾವಣೆಯ ಫಲಿತಾಂಶಗಳ ಬಗ್ಗೆಯೂ ಜನ ಗೂಗಲ್‌ನಲ್ಲಿ ಸರ್ಚ್ ಮಾಡಿದ್ದಾರೆ. ಎನ್‌ಡಿಎ ಮತ್ತು ಇಂಡಿಯಾ ಒಕ್ಕೂಟದ ನಡುವೆ ಜಿದ್ದಾಜಿದ್ದಿನ ಫೈಟ್ ಏರ್ಪಟ್ಟಿತ್ತು, ಈ ಚುನಾವಣಾ ಫಲಿತಾಂಶದ ಸಮಯದಲ್ಲಿ ಮತ ಎಣಿಕೆ, ಸೀಟ್ ಇತ್ಯಾದಿ ವಿಷಯಗಳ ಬಗ್ಗೆ ಹೆಚ್ಚು ಹುಡುಕಾಟ ನಡೆಸಲಾಗಿತ್ತು.
ಈ ವರ್ಷ ನಡೆದ ಪ್ಯಾರಿಸ್ ಒಲಿಂಪಿಕ್ಸ್ ಬಗ್ಗೆಯೂ ಭಾರತೀಯರು ಗೂಗಲ್‌ನಲ್ಲಿ ಹುಡುಕಾಟ ನಡೆಸಿದ್ದಾರೆ. ವಿನೇಶ್ ಫೋಗಟ್ ಅವರಿಂದ ಹಿಡಿದು ನೀರಜ್ ಚೋಪ್ರವಾವರೆಗೆ ಭಾರತೀಯ ಆಟಗಾರರ ಬಗ್ಗೆ, ಆಟಗಳ ಲೈವ್ ಅಪ್‌ಡೇಟ್‌ಗಳ ಬಗ್ಗೆ, ಕ್ರೀಡಾಪಟುಗಳ ಪ್ರದರ್ಶನಗಳು, ಎಷ್ಟು ಪದಕ ಭಾರತಕ್ಕೆ ಬಂದವು ಈ ಎಲ್ಲಾ ವಿಷಯಗಳ ಬಗ್ಗೆ ಅತೀ ಹೆಚ್ಚಾಗಿ ಸರ್ಚ್ ಮಾಡಲಾಗಿದೆ.
ಈ ವರ್ಷ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಅಂದರೆ ಬೇಸಿಗೆ ಕಾಲದ ಸಮಯದಲ್ಲಿ ನಮ್ಮ ದೇಶದಲ್ಲಿ ಹಿಂದಿನ ವರ್ಷಗಳಿಗಿಂತಲೂ ಅತಿಯಾದ ಶಾಖ ದಾಖಲಾಗಿತ್ತು. ಈ ವಿಷಯದ ಬಗ್ಗೆಯೂ ಭಾರತೀಯರು ಹೆಚ್ಚು ಸರ್ಚ್ ಮಾಡಿದ್ದಾರೆ. ಹೌದು ಹೆಚ್ಚಿನ ತಾಪಮಾನವನ್ನು ಹೇಗೆ ನಿಭಾಯಿಸುವುದು, ಅತಿಯಾದ ಶಾಖದಿಂದ ದೇಹವನ್ನು ಹೇಗೆ ತಂಪಾಗಿರಿಸುವುದು, ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ, ಹವಾಮಾನ ಬದಲಾವಣೆ ಈ ಎಲ್ಲಾ ವಿಷಯಗಳ ಬಗ್ಗೆ ಗೂಗಲ್‌ನಲ್ಲಿ ನಮ್ಮ ಜನ ಹುಡುಕಾಡಿದ್ದಾರೆ.
ರತನ್ ಟಾಟಾ ಅವರು ಅಕ್ಟೋಬರ್ 9 ರಂದು ತಮ್ಮ 86 ನೇ ವಯಸ್ಸಿನಲ್ಲಿ ನಿಧನರಾದರು. ಈ ಮಹಾನ್ ವ್ಯಕ್ತಿ ನಿಧನರಾದ ಸಂದರ್ಭದಲ್ಲಿ ಇವರಿಗೆ ಸಂಬಂಧಪಟ್ಟ ವಿಷಯಗಳ ಬಗ್ಗೆಯೂ ಕೂಡಾ ಗೂಗಲ್‌ನಲ್ಲಿ ಭಾರತೀಯರು ಹುಡುಕಾಟ ನಡೆದಿದ್ದಾರೆ. ಹೌದು ಅವರ ವ್ಯವಹಾರಗಳು, ಅವರ ಇತ್ತೀಚಿನ ಸಂದರ್ಶನಗಳು ಇತ್ಯಾದಿ ವಿಷಯಗಳ ಬಗ್ಗೆ ಜನ ಗೂಗಲ್ ಸರ್ಚ್ ಮಾಡಿದ್ದಾರೆ.
2024 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ಸಂಬಂಧಿಸಿದ ವಿಷಯಗಳ ಬಗ್ಗೆಯೂ ಜನ ಹೆಚ್ಚು ಸರ್ಚ್ ಮಾಡಿದ್ದಾರೆ. ಪಕ್ಷದ ನಾಯಕತ್ವ, ಚುನಾವಣಾ ತಂತ್ರಗಳು, ಆಂತರಿಕ ಸುಧಾರಣೆಗಳು, ಬದಲಾಗುತ್ತಿರುವ ರಾಜಕೀಯ ದೃಶ್ಯ ಈ ಎಲ್ಲಾ ವಿಷಯಗಳ ಬಗ್ಗೆ ಭಾರತೀಯರು ಗೂಗಲ್ ಸರ್ಚ್ ಮಾಡಿದ್ದಾರೆ.
2024 ರ ಪ್ರೋ ಕಬಡ್ಡಿ ಲೀಗ್ ಬಗ್ಗೆಯೂ ಭಾರತದಲ್ಲಿ ಹೆಚ್ಚು ಸರ್ಚ್ ಮಾಡಲಾಗಿದೆ. ಕಬಡ್ಡಿ ತಂಡಗಳು, ಆಟಗಾರರು, ಪಂದ್ಯದ ವೇಳಾಪಟ್ಟಿ ಹೀಗೆ ಪ್ರೋ ಕಬಡ್ಡಿ 2024 ಕ್ಕೆ ಸಂಬಂಧಿಸಿದ ಈ ಎಲ್ಲಾ ವಿಷಯಗಳ ಬಗ್ಗೆ ಭಾರತೀಯರು ಗೂಗಲ್ ಸರ್ಚ್ ಮಾಡಿದ್ದಾರೆ.
ಫುಟ್‌ಬಾಲ್‌ಗೆ ಸಂಬಂಧಿಸಿದ ಇಂಡಿಯನ್ ಸೂಪರ್ ಲೀಗ್ ಪಂದ್ಯದ ಬಗ್ಗೆಯೂ ಭಾರತೀಯರು ಹೆಚ್ಚು ಗೂಗಲ್‌ನಲ್ಲಿ ಹುಡುಕಾಟ ನಡೆಸಿದ್ದಾರೆ. ಹೊಸ ಆಟಗಾರರು, ಕ್ಲಬ್‌ಗಳು, ಪಂದ್ಯದ ಫಲಿತಾಂಶ, ತಂಡದ ಪ್ರದರ್ಶನಗಳು ಇತ್ಯಾದಿ ವಿಷಯಗಳ ಬಗ್ಗೆ ಹೆಚ್ಚು ಸರ್ಚ್ ಮಾಡಲಾಗಿದೆ.
ಇದಲ್ಲದೆ ನಾವು ಸಾಮಾನ್ಯವಾಗಿ ಹುಡುಕಾಡುವ “ನಿಯರ್ ಮಿ” ವಿಷಯದಲ್ಲಿ ವಾಯು ಮಾಲಿನ್ಯ ಮತ್ತು ಅದರ ಆರೋಗ್ಯ ಪರಿಣಾಮಗಳ ಬಗ್ಗೆ ತಿಳಿಯಲು ಮತ್ತು ಎಕ್ಯೂಐ ಮಟ್ಟದ ಬಗ್ಗೆ ತಿಳಿಯಲು ಎಕ್ಯೂಐ ನಿಯರ್ ಮಿ ಬಗ್ಗೆ ಹೆಚ್ಚು ಸರ್ಚ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಓಣಂ ಸಾಧ್ಯಾ ನಿಯರ್ ಮಿ, ರಾಮ ಮಂದಿರ, ಸ್ಪೋರ್ಟ್ಸ್ ಬಾರ್, ಬೆಸ್ಟ್ ಬೇಕರಿ ನಿಯರ್ ಮಿ ವಿಷಯಗಳ ಬಗ್ಗೆ ಸರ್ಚ್ ಮಾಡಲಾಗಿದೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ