ಹೊಸ ವರ್ಷವನ್ನು ಬರಮಾಡಿಕೊಳ್ಳಲು ಇನ್ನು ಕೆಲವೇ ಕೆಲವು ದಿನಗಳು ಬಾಕಿ ಉಳಿದಿವೆ. ಕೆಲವು ಸಿಹಿ, ಕೆಲವು ಕಹಿ ಘಟನೆಗಳು ನಿಮ್ಮ ಜೀವನದಲ್ಲಿ ನಡೆದಿರುವಂತೆಯೇ ವಿಶ್ವಾದ್ಯಂತ ಒಳ್ಳೆಯ ಹಾಗೂ ಕೆಟ್ಟ ಘಟನೆಗಳು ನಡೆದಿರುತ್ತವೆ. ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಸೆನ್ಸೇಷನ್ಸ್ ಸೃಷ್ಟಿಸಿದ್ದ ವಿಡಿಯೋಗಳ ಕುರಿತ ಮಾಹಿತಿ ಇಲ್ಲಿದೆ.
ಬೇಬಿ ಶಾರ್ಕ್ ಡ್ಯಾನ್ಸ್
2024 ರಲ್ಲಿ ಅತ್ಯಂತ ವೈರಲ್ ವೀಡಿಯೊಗಳಲ್ಲಿ ‘ಬೇಬಿ ಶಾರ್ಕ್ ಡ್ಯಾನ್ಸ್’ ಮೊದಲ ಸ್ಥಾನದಲ್ಲಿದೆ. ಈ ವೀಡಿಯೊ ಬಹಳಷ್ಟು ಜನರಿಗೆ ಇಷ್ಟವಾಗಿತ್ತು. ದಕ್ಷಿಣ ಕೊರಿಯಾದ ಕಂಪನಿಯಾದ ಪಿಂಕ್‌ಫಾಂಗ್ ಇದನ್ನು ರಚಿಸಿದೆ, ಭಾರತದಲ್ಲೂ ಇದು ಫೇಮಸ್ ಆಗಿದೆ. ಈ ವೀಡಿಯೊವನ್ನು 15 ಬಿಲಿಯನ್‌ಗಿಂತಲೂ ಹೆಚ್ಚು ಜನರು ವೀಕ್ಷಿಸಿದ್ದಾರೆ.
ಡೆಸ್ಪಾಸಿಟೋ ಹಾಡು
ಲೂಯಿಸ್ ಫೋನ್ಸಿ ಅವರ ಡ್ಯಾಡಿ ಯಾಂಕೀ ಅವರ ಹಾಡು ಡೆಸ್ಪಾಸಿಟೊ ವಿಶ್ವದ ಅತಿ ಹೆಚ್ಚು ವೀಕ್ಷಿಸಿದ ವೀಡಿಯೊಗಳಲ್ಲಿ ಎರಡನೇ ಸ್ಥಾನದಲ್ಲಿದೆ. ಹಲವರು ಈ ಹಾಡಿಗೆ ರೀಲ್ ಮಾಡಿ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 2017 ರಲ್ಲಿ ಬಿಡುಗಡೆಯಾದ ಈ ಹಾಡನ್ನು ಇದುವರೆಗೆ 8 ಬಿಲಿಯನ್ ಜನರು ವೀಕ್ಷಿಸಿದ್ದಾರೆ.
ಅನಂತ್ ಅಂಬಾನಿ ರಾಧಿಕಾ ಮರ್ಚೆಂಟ್ ಮದುವೆ ವಿಡಿಯೋ
ಯೂಟ್ಯೂಬ್ನಲ್ಲಿ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹವನ್ನು 6.5 ಬಿಲಿಯನ್ ಬಾರಿ ವೀಕ್ಷಿಸಲಾಗಿದೆ. 2024 ರಲ್ಲಿ, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಅದ್ಧೂರಿ ವಿವಾಹವು ಬಹಳಷ್ಟು ಪ್ರಾಮುಖ್ಯತೆ ಗಳಿಸಿತ್ತು.
ಸುಶಿಯನ್ನು ತಿನ್ನುವಾಗ ಮೀನು ತೆವಳಿದ್ದು
ಜಪಾನಿನ ಪ್ರಸಿದ್ಧ ಅಡುಗೆಯಾದ ಸುಶಿ ಎಲ್ಲಾ ದೇಶಗಳಲ್ಲೂ ಅಚ್ಚುಮೆಚ್ಚು, ಇನ್ನೇನು ಸುಶಿಯನ್ನು ತಿನ್ನಬೇಕೆನ್ನುವಷ್ಟರಲ್ಲಿ ಅದರಲ್ಲಿಂದ ಜೀವಂತ ಮೀನು ಹೊರಬಂದಿತ್ತು. ಈ ವೀಡಿಯೋ ನೋಡಿದ ಜನರು ತಮ್ಮ ಕಣ್ಣನ್ನೇ ನಂಬಲಾರದೆ ಬೆಚ್ಚಿಬಿದ್ದರು. ಈ ವಿಡಿಯೋವನ್ನು ಕೋಟಿಗಟ್ಟಲೆ ಜನರು ವೀಕ್ಷಿಸಿದ್ದಾರೆ.
ಮನ ಕದ್ದ ವ್ಯಕ್ತಿ
ವ್ಯಕ್ತಿಯೊಬ್ಬ ಮನೆಗೆ ಬಣ್ಣ ಬಳಿಯುತ್ತಿರುವ ವಿಡಿಯೋ ವೈರಲ್ ಆಗಿದೆ. ರಾಷ್ಟ್ರಗೀತೆಯ ಸದ್ದು ಕೇಳಿ ಪೇಂಟಿಂಗ್ ಮಾಡುತ್ತಿದ್ದ ವ್ಯಕ್ತಿ ನಿಲ್ಲಿಸಿರುವುದು ಈ ವಿಡಿಯೋದಲ್ಲಿ ಕಂಡುಬಂದಿದೆ. ರಾಷ್ಟ್ರಗೀತೆ ಮೊಳಗುವಷ್ಟು ಹೊತ್ತು ಅವರು ಕದಲಲಿಲ್ಲ. ಈ ವಿಡಿಯೋ ತುಂಬಾ ವೈರಲ್ ಆಗಿತ್ತು. ಕೋಟಿಗಟ್ಟಲೆ ಜನ ಈ ವಿಡಿಯೋವನ್ನೂ ವೀಕ್ಷಿಸಿದ್ದಾರೆ.
ಮಹಿಳೆಯ ತಾಳ್ಮೆ
ಆಹಾರ ಮತ್ತು ಪಾನೀಯಕ್ಕೆ ಸಂಬಂಧಿಸಿದ ಅನೇಕ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಂಡುಬರುತ್ತವೆ. ಅನೇಕ ಬಾರಿ ಆಹಾರ ಪಾಕವಿಧಾನಗಳು ವೈರಲ್ ಆಗುತ್ತವೆ. ಕೆಲವು ದಿನಗಳ ಹಿಂದೆ, ಮಹಿಳೆಯೊಬ್ಬರು ತಾಳ್ಮೆಯಿಂದ ಒಂದು ಪಾಪ್‌ಕಾರ್ನ್ ಅನ್ನು ಬಾಣಲೆಯಲ್ಲಿ ಹುರಿಯುತ್ತಿರುವುದು ಕಂಡುಬಂದಿದೆ. ಈ ವಿಡಿಯೋವನ್ನು ಕೋಟಿಗಟ್ಟಲೆ ಜನ ವೀಕ್ಷಿಸಿದ್ದಾರೆ.
ಹಸು ಮತ್ತು ಚಿರತೆ
ಮತ್ತೊಂದು ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಕತ್ ಆಗಿ ಟ್ರೆಂಡ್ ಆಗಿತ್ತು. ಹಲವು ಹಸುಗಳನ್ನು ಕಟ್ಟಿ ಹಾಕಲಾಗಿದ್ದ ಲಾಯಕ್ಕೆ ಚಿರತೆಯೊಂದು ನುಗ್ಗಿದೆ. ಕಾಣಿಸಿಕೊಂಡ ಚಿರತೆ ಗಾಯಗೊಂಡ ಸ್ಥಿತಿಯಲ್ಲಿದ್ದು, ಹಸುವಿನ ಬಳಿ ಹೋಗಿ ಕುಳಿತಿತ್ತು. ಅತ್ಯಂತ ಆಶ್ಚರ್ಯಕರ ವಿಷಯವೆಂದರೆ ಹಸು ಚಿರತೆಗೆ ಹೆದರಲಿಲ್ಲ, ಬದಲಿಗೆ ಅದನ್ನು ನೆಕ್ಕಲು ಪ್ರಾರಂಭಿಸಿತ್ತು.
ಮಗುವಿನ ಹಠ
ತಾಯಿ ಸಿಂಧೂರ ಹಚ್ಚಿಕೊಳ್ಳುತ್ತಿರುವುದನ್ನು ನೋಡಿ ಬಾಲಕಿ ತನಗೂ ಹಚ್ಚಿ ಎಂದು ಮುದ್ದು ಮುದ್ದಾಗಿ ಕೇಳುತ್ತಿರುವ ವಿಡಿಯೋ ವೈರಲ್ ಆಗಿತ್ತು.
ಆನೆ ಮತ್ತು ಯುವತಿಯ ಭರತನಾಟ್ಯ
ವಿಡಿಯೋದಲ್ಲಿ ಮರಿ ಆನೆಯ ಮುಂದೆ ಇಬ್ಬರು ಹುಡುಗಿಯರು ಶಾಸ್ತ್ರೀಯ ನೃತ್ಯ ಮಾಡುತ್ತಿದ್ದರು. ಇದರಲ್ಲಿ ಅತ್ಯಂತ ವಿಭಿನ್ನವಾದ ಮತ್ತು ಮುದ್ದಾದ ವಿಷಯವೆಂದರೆ ಹುಡುಗಿಯರು ತಮ್ಮ ತಲೆ ಮತ್ತು ದೇಹವನ್ನು ಚಲಿಸಲು ಪ್ರಾರಂಭಿಸಿದ ತಕ್ಷಣ, ಆನೆಯ ಕೈಗಳನ್ನು ಸಹ ಅದೇ ರೀತಿ ಮಾಡಲು ಪ್ರಾರಂಭಿಸಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ.
ಡಿಫರೆಂಟ್ ಆಮ್ಲೆಟ್
ಬಾಲಕಿಯೊಬ್ಬಳು ವಿಶಿಷ್ಟ ರೀತಿಯಲ್ಲಿ ಆಮ್ಲೆಟ್ ಸಿದ್ಧಪಡಿಸಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
Published On - 2:31 pm, Tue, 10 December 24