ಗಣೇಶನ ಚಿತ್ರವಿರುವ ಬಿಕಿನಿ ಮತ್ತು ಚಪ್ಪಲಿಗಳನ್ನು ಮಾರಾಟಕ್ಕೆ ಇಟ್ಟ ವಾಲ್‌ಮಾರ್ಟ್; ಪೋಸ್ಟ್ ವೈರಲ್
ವಾಲ್‌ಮಾರ್ಟ್ ಸಂಸ್ಥೆಯು ಗಣೇಶನ ಚಿತ್ರವನ್ನು ಬಳಸಿ ವಿನ್ಯಾಸಗೊಳಿಸಿದ ಒಳಉಡುಪು ಮತ್ತು ಚಪ್ಪಲಿಗಳ ಮಾರಾಟದಿಂದಾಗಿ ದೊಡ್ಡ ವಿವಾದಕ್ಕೆ ಸಿಲುಕಿದೆ. ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಬಹುತೇಕ ಜನರು ಬಾಯ್ಕಾಟ್ ವಾಲ್‌ಮಾರ್ಟ್ ಅಭಿಯಾನ ಆರಂಭಿಸಿದ್ದಾರೆ. ಇದರ ಬೆನ್ನಲ್ಲೇ ವಾಲ್‌ಮಾರ್ಟ್ ಉತ್ಪನ್ನಗಳನ್ನು ತೆಗೆದುಹಾಕಿ, ಕ್ಷಮೆಯಾಚಿಸಿದೆ ಎಂದು ವರದಿಯಾಗಿದೆ.
ವಿಶ್ವದಾದ್ಯಂತ ಖ್ಯಾತಿ ಪಡೆದಿರುವ ವಾಲ್‌ಮಾರ್ಟ್ ಸಂಸ್ಥೆಯ ಒಂದು ದೊಡ್ಡ ಎಡವಟ್ಟು ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಹಿಂದೂ ಧರ್ಮದಲ್ಲಿ ಪೂಜಿಸಲಾಗುವ ಗಣೇಶನ ಫೋಟೋ ಬಳಸಿ ವಾಲ್‌ಮಾರ್ಟ್ ಸಂಸ್ಥೆ ವಿವಿಧ ವಿನ್ಯಾಸ ಒಳಉಡುಪು ಹಾಗೂ ಚಪ್ಪಲಿಗಳನ್ನು ತಯಾರಿಸಿ ತನ್ನ ಆನ್ಲೈನ್ ಮಾರುಕಟ್ಟೆಯಲ್ಲಿ ಮಾರಾಟ ಶುರು ಮಾಡಿತ್ತು.
ಗಣಪತಿ ದೇವರ ಫೋಟೋಗಳನ್ನು ಇಷ್ಟು ಕೀಳು ಮಟ್ಟದಲ್ಲಿ ಉಪಯೋಗಿಸಿರುವ ವಾಲ್‌ಮಾರ್ಟ್ ಸಂಸ್ಥೆಯ ವಿರುದ್ದ ಭಾರತ ಹಾಗೂ ಅಮೆರಿಕದಲ್ಲಿರುವ ಹಿಂದುಗಳು ಪ್ರತಿಭಟನೆ ನಡೆಸಿದ್ದು, ಬಾಯ್ಕಾಟ್ ವಾಲ್‌ಮಾರ್ಟ್ ಎನ್ನುವ ಅಭಿಯಾನವನ್ನೂ ಶುರು ಮಾಡಿದ್ದರು. ಇದರ ಬೆನ್ನಲ್ಲೇ ಇದೀಗ ವಾಲ್‌ಮಾರ್ಟ್ ಆ ಎಲ್ಲಾ ಉಡುಪುಗಳ ಮಾರಾಟವನ್ನು ತನ್ನ ಆನ್ಲೈನ್ ಮಾರುಕಟ್ಟೆಯಿಂದ ತೆಗೆದುಹಾಕಿ ಕ್ಷಮಾಪಣೆಯ ಕೇಳಿದೆ ಎಂದು ಹಿಂದೂ ಧರ್ಮದ ಯುನಿವರ್ಸಲ್ ಸೊಸೈಟಿಯ ಅಧ್ಯಕ್ಷರಾದ ರಾಜನ್ ಜೆಡ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಡಿಸೆಂಬರ್ ಪ್ರಾರಂಭದಲ್ಲಿ ಗಣೇಶನ ಚಿತ್ರವನ್ನು ಹೊಂದಿರುವ ಬರೋಬ್ಬರಿ 74 ರೀತಿಯ ಒಳ ಉಡುಪುಗಳನ್ನು ವಾಲ್‌ಮಾರ್ಟ್ ತನ್ನ ಆನ್ಲೈನ್ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಟ್ಟಿತ್ತು. ಈ ಕುರಿತು @ssaratht ಎಂಬ ಟ್ವಿಟರ್ ಖಾತೆಯಲ್ಲಿ ಡಿಸೆಂಬರ್ 6ರಂದು ಪೋಸ್ಟ್ ವೈರಲ್ ಆಗಿತ್ತು.
ಇದನ್ನೂ ಓದಿ: Video: ಗಾಳಿಪಟವನ್ನು ಹಿಂಬಾಲಿಸುತ್ತಾ ರಸ್ತೆಗೆ ಓಡಿ ಬಂದ ಬಾಲಕನಿಗೆ ಕಾರು ಡಿಕ್ಕಿ; ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಪೋಸ್ಟ್ ಇಲ್ಲಿದೆ ನೋಡಿ:
This is unacceptable. You can’t demean our Hindu Gods.@Walmart should immediately withdraw ‘Celestial Ganesh Blessings collection’ and apologise to Hindus. 😡😡 pic.twitter.com/KGCcqqObXu
— Tathvam-asi (@ssaratht) December 6, 2024
ಡಿಸೆಂಬರ್ 6ರಂದು ಹಂಚಿಕೊಂಡಿರುವ ಈ ಫೋಸ್ಟ್ ಇದೀಗಾಗಲೇ ಮಿಲಿಯನ್ ಅಂದರೆ 10ಲಕ್ಷಕ್ಕೂ ಅಧಿಕ ನೆಟ್ಟಿಗರನ್ನು ತಲುಪಿದೆ. ಹಿಂದೂ ಧರ್ಮಕ್ಕೆ ದಕ್ಕೆ ತಂದಿರುವ ವಾಲ್‌ಮಾರ್ಟ್ ಸಂಸ್ಥೆಯ ವಿರುದ್ದ ಸಾಕಷ್ಟು ನೆಟ್ಟಿಗರಯ ಬಾಯ್ಕಾಟ್ ವಾಲ್‌ಮಾರ್ಟ್ ಎನ್ನುವ ಅಭಿಯಾನ ಶುರು ಮಾಡಿದ್ದಾರೆ. ಸದ್ಯ ವಾಲ್‌ಮಾರ್ಟ್ ತನ್ನ ಎಡವಟ್ಟಿಗೆ ಕ್ಷಮೆಯಾಚಿಸಿದೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:21 pm, Tue, 10 December 24