ಬೆಟ್ಟದಲ್ಲಿರುವ ಕಲ್ಲಿನಲ್ಲಿ ಸಂಗೀತದ ಸಪ್ತಸ್ವರಗಳು
ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಸಂಗೀತ ಶಿಕ್ಷಕ ಕೋಟೇಶ್ವರ ರಾವ್ ಅವರು ಬೆಟ್ಟದಲ್ಲಿ ಸಂಗೀತದ ಸ್ವರಗಳನ್ನು ಹೊಮ್ಮಿಸುವ ಕಲ್ಲುಗಳನ್ನು ಪತ್ತೆಹಚ್ಚಿದ್ದಾರೆ. ಈ ಕಲ್ಲುಗಳು ಸಪ್ತಸ್ವರಗಳನ್ನು ಮಾತ್ರವಲ್ಲ, ದ್ವಾದಶ ಸ್ವರಗಳನ್ನೂ ಹೊಂದಿವೆ ಎಂದು ಸಂಶೋಧಕರು ಹೇಳಿದ್ದಾರೆ. ಕೋಟೇಶ್ವರ ರಾವ್ ತಮ್ಮ ಶಾಲೆಯಲ್ಲಿ ಈ ಕಲ್ಲುಗಳನ್ನು ತಂದು ಪ್ರದರ್ಶನಕ್ಕೆ ಇಟ್ಟಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಚೌಡವರಂನಲ್ಲಿರುವ ಚೇತನ ಶಾಲೆಯ ಸಂಗೀತ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಕೋಟೇಶ್ವರ ರಾವ್ ಅವರು ಬೆಟ್ಟದಲ್ಲಿರುವ ಕಲ್ಲಿನಲ್ಲಿ ಸಂಗೀತದ ಸಪ್ತಸ್ವರಗಳನ್ನು ಪತ್ತೆ ಹಚ್ಚಿದ್ದಾರೆ. ಬಳಿಕ ಕಲ್ಲುಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿ ತಮ್ಮ ಶಾಲೆಗೆ ತಂದು ಪ್ರದರ್ಶನಕ್ಕೆ ಇಟ್ಟಿದ್ದಾರೆ. ಕಲ್ಲುಗಳು ಸಂಗೀತ ಸ್ವರಗಳನ್ನು ಹೇಳುತ್ತವೆ ಎಂದು ಕೋಟೇಶ್ವರರಾವ್ ಹೇಳಿದ್ದು, ಸದ್ಯ ಇದಕ್ಕೆ ಸಂಬಂಧಿಸಿದ ಪೋಸ್ಟ್ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ.
ಕೋಟೇಶ್ವರ ರಾವ್ ಅವರ ಹುಟ್ಟೂರು ಗೊರ್ರೆಪಾಡು ಬಳಿ ಮಡಿಕೇರಿಯ ಗುಡ್ಡವಿದ್ದು, ಇಲ್ಲಿನ ದೇವಾಲಯಕ್ಕೆ ಆಗಾಗ ಹೋಗುತ್ತಿದ್ದರು. ಅದರಂತೆ ಗೆಳೆಯರೊಂದಿಗೆ ಬೆಟ್ಟದ ಮೇಲೆ ಹೋದಾಗ ತಮಾಷೆಯಾಗಿ ಇನ್ನೊಂದು ಕಲ್ಲಿನಿಂದ ಕಲ್ಲಿಗೆ ಹೊಡೆದಾಗ ಸರಿಗಮಪದನಿಸ ಕೇಳಿ ಕೋಟೇಶ್ವರ ರಾವ್ ಶಾಕ್ ಆಗಿದ್ದರಂತೆ. ಮರುಪ್ರಯತ್ನ ಮಾಡಿದ ತಕ್ಷಣ ಅದೇ ಶಬ್ದ ಕೇಳಿಸಿದೆ. ಸ್ವತಃ ಸಂಗೀತದ ಬಗ್ಗೆ ಹೆಚ್ಚಿನ ಆಸಕ್ತಿಯಿದ್ದ ಇವರು ಅವರು ತಮ್ಮ ಅಭಿಪ್ರಾಯವನ್ನು ಸಾಬೀತುಪಡಿಸಲು ಕಲ್ಲಿನ ಸಂಶೋಧಕರನ್ನು ಕರೆಸಿದ್ದಾರೆ.
ಇದನ್ನೂ ಓದಿ: ಗಣೇಶನ ಚಿತ್ರವಿರುವ ಬಿಕಿನಿ ಮತ್ತು ಚಪ್ಪಲಿಗಳನ್ನು ಮಾರಾಟಕ್ಕೆ ಇಟ್ಟ ವಾಲ್‌ಮಾರ್ಟ್; ಪೋಸ್ಟ್ ವೈರಲ್
ಅವುಗಳನ್ನು ಪರೀಕ್ಷಿಸಿದ ನಂತರ, ಆ ಕಲ್ಲು ಮಾತ್ರವಲ್ಲ, ಇತರ ಕಲ್ಲುಗಳಲ್ಲಿಯೂ ಸಹ ಸಂಗೀತದ ಧ್ವನಿಗಳನ್ನು ಕೇಳಿ ಆಶ್ಚರ್ಯರಾಗಿದ್ದಾರೆ. ಆದರೆ ಇಲ್ಲಿ ಸಿಕ್ಕಿರುವ ಕಲ್ಲುಗಳು ದ್ವಾದಶ ಸ್ವರಗಳನ್ನು ಹೇಳುತ್ತಿವೆ ಎನ್ನುತ್ತಾರೆ ಸಂಶೋಧಕರು.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ