
ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಕೆಲಸ (job) ಗಿಟ್ಟಿಸಿಕೊಳ್ಳೋದು ಸವಾಲಾದ್ರೆ, ಅದನ್ನು ಉಳಿಸಿಕೊಳ್ಳೋದು ಮತ್ತೊಂದು ರೀತಿಯ ತಲೆ ನೋವು. ಏಕಾಏಕಿ ಕಂಪನಿ ಕೆಲಸದಿಂದ ವಜಾಗೊಳಿಸಿದ್ರೆ ಮುಂದೇನು ಎಂಬ ಪ್ರಶ್ನೆ ಕಾಡುತ್ತದೆ. ಆದರೆ, ಕೆಲಸ ಕಳೆದುಕೊಂಡ 10 ತಿಂಗಳ ನಂತರ ಭಾರತೀಯ ಯುವತಿ ತನ್ನ ಅನುಭವ ಹಂಚಿಕೊಂಡಿದ್ದಾರೆ. ಉದ್ಯೋಗ ಕಳೆದುಕೊಂಡಿರುವುದು ನನಗೆ ಆಶೀರ್ವಾದ. ಉದ್ಯೋಗ ನಷ್ಟವು 9 ರಿಂದ 5 ರ ಆಚೆಗಿನ ಜೀವನವನ್ನು ಪುನರ್ವಿಮರ್ಶಿಸುವಂತೆ ಮಾಡಿತು ಎಂದು ಹೇಳಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟು ಹಾಕಿದೆ.
ಸೆಮಿನಿ ಕುಲತಿಲಕೆ (Buildwealthwithsemini) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಕ್ಲಿಪಿಂಗ್ ನಲ್ಲಿ ಕೆಲಸದಿಂದ ವಜಾಗೊಳಿಸುವುದರಿಂದಾಗುವ ಲಾಭಗಳ ಬಗ್ಗೆ ಮಾತನಾಡೋಣ. ನನ್ನನ್ನು ಕೆಲಸದಿಂದ ತೆಗೆದುಹಾಕಿದಾಗ ಸಹಜವಾಗಿ ನಾನು ಭಯಭೀತಳಾಗಿದ್ದೆ ಹಾಗೂ ಗೊಂದಲಕ್ಕೊಳಗಾಗಿದ್ದೆ. ನನ್ನ ಜೀವನವನ್ನು ಪ್ರಶ್ನಿಸಲು ಪ್ರಾರಂಭಿಸಿದೆ ಎಂದಿದ್ದಾರೆ.
ನಾನು ಕೆನಾಡದ ಅತ್ಯಂತ ದುಬಾರಿ ನಗರಗಳಲ್ಲಿ ಒಂದರಲ್ಲಿ ವಾಸಿಸುತ್ತಿದ್ದೆ. ಹಲವಾರು ಆರ್ಥಿಕ ಜವಾಬ್ದಾರಿಗಳು ನನ್ನ ಹೆಗಲ ಮೇಲಿತ್ತು. ಮದುವೆಗೆ ತಯಾರಿ ನಡೆಸುತ್ತಿದ್ದಾಗ ನನ್ನ ನಿಯಮಿತ ಆದಾಯದ ಮೂಲವು ಇದ್ದಕ್ಕಿದ್ದಂತೆ ಕಣ್ಮರೆಯಾಯಿತು. ಕೆಲಸ ಕಳೆದುಕೊಳ್ಳುವುದರಿಂದ ವರ್ಷಗಳ ಕಾಲ ತನಗೆ ಸಿಗದಿದ್ದ ಒಂದು ಅವಕಾಶ ಸಿಕ್ಕಿತು. ಜೀವನದಿಂದ ತಾನು ನಿಜವಾಗಿಯೂ ಏನನ್ನು ಬಯಸುತ್ತಿದ್ದೇನೆ ಎಂಬ ಬಗ್ಗೆ ಯೋಚಿಸಲು ಸಾಧ್ಯವಾಯ್ತು ಎಂದು ಹೇಳಿದ್ದಾರೆ.
ಕೆಲಸ ಕಳೆದುಕೊಂಡ ಬಳಿಕ ವೈಯಕ್ತಿಕ ಜೀವನದ ಕೆಲ ವಿಷ್ಯಗಳ ಮೇಲೆ ಗಮನಹರಿಸಲು ಅವಕಾಶ ಸಿಕ್ಕಿತು. ಇಲ್ಲದಿದ್ದರೆ ವೈಯುಕ್ತಿಕ ಬದುಕಿಗೆ ಆದ್ಯತೆ ನೀಡಲು ಕಷ್ಟವಾಗುತ್ತಿತ್ತು. ಈ ಅವಧಿಯಲ್ಲಿ ಮದುವೆಯಾದೆ, ಶ್ರೀಲಂಕಾ ಹಾಗೂ ಭಾರತಕ್ಕೆ ಪ್ರಯಾಣ ಬೆಳೆಸಿದೆ. ಅತ್ತೆ-ಮಾವಂದಿರನ್ನು ಭೇಟಿಯಾದೆ ಹಾಗೂ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆದೆ. ಇಮೇಲ್ ಮೂಲಕ ಯಾರೂ ನನ್ನಿಂದ ಕಸಿದುಕೊಳ್ಳಲು ಸಾಧ್ಯವಾಗದ ಆದಾಯದ ಮೂಲವನ್ನು ನಿರ್ಮಿಸುವತ್ತ ಗಮನ ಹರಿಸಿದೆ. ಆರಂಭದಲ್ಲಿ ದೊಡ್ಡ ಹಿನ್ನಡೆಯಂತೆ ಭಾಸವಾದ ಅನುಭವವು ತಾನು ವರ್ಷಗಳಿಂದ ಬಯಸುತ್ತಿದ್ದ ಜೀವನವನ್ನು ಸೃಷ್ಟಿಸಲು ಸಾಧ್ಯವಾಯ್ತು ಎಂದು ವಿವರಿಸಿದ್ದಾರೆ.
ಇದನ್ನೂ ಓದಿ: ಒತ್ತಡವಿದ್ರೂ ಜಾಬ್ ರಿಸೈನ್ ಮಾಡದ ಉದ್ಯೋಗಿ, ಕಾರಣ ತಿಳಿದ್ರೆ ನೀವು ಶಾಕ್ ಆಗ್ತೀರಾ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಕೆಲ್ಸ ಕಳೆದುಕೊಳ್ಳೋದು ಭಯಾನಕ, ಆದರೆ ಜೀವನದ ಬಗ್ಗೆ ಸ್ಪಷ್ಟತೆ ಸಿಗುತ್ತದೆ ಎಂದಿದ್ದಾರೆ. ಇನ್ನೊಬ್ಬರು, ನಿಮ್ಮ ಮಾತು ನಿಜ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ, ಎಲ್ಲರ ದೃಷ್ಟಿಕೋನ ಒಂದೇ ತರಹ ಇರಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:53 pm, Tue, 13 October 26