
ಇತ್ತೀಚೆಗಿನ ದಿನಗಳಲ್ಲಿ ವಿಯರ್ಡ್ ಫುಡ್ ಕಾಂಬಿನೇಶನ್ (Weird food combination) ಗಳನ್ನೊಳಗೊಂಡ ಆಹಾರ ಪದಾರ್ಥಗಳ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿರುತ್ತವೆ. ಮ್ಯಾಗಿ ಆಮ್ಲೆಟ್, ಗುಲಾಬ್ ದೋಸೆ, ಓರಿಯೋ ಪಕೋಡ, ಕಾಫಿ ಮ್ಯಾಗಿ ಹೀಗೆ ವಿಭಿನ್ನ ಪ್ರಯೋಗಗಳ ವಿಡಿಯೋವನ್ನು ನೀವು ನೋಡಿರುತ್ತೀರಿ. ಆದರೆ ಇದೀಗ ಇನ್ಸ್ಟಾಗ್ರಾಮ್‌ನಲ್ಲಿ ಜೂಲಿಯೆಟ್ (Juliette) ಹೆಸರಿನ ಯುವತಿಯೊಬ್ಬಳು ಕಪ್ ಕೇಕ್ (Cup Cake) ನಲ್ಲಿ ವಿಭಿನ್ನವಾದ ಪ್ರಯೋಗವನ್ನು ಮಾಡಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾಳೆ. ಕ್ಯಾಪ್ಸಿಕಂ ಬಳಸಿ ಕಪ್ ಕೇಕ್ ತಯಾರಿಸಿದ್ದು, ಈ ವಿಭಿನ್ನವಾದ ರೆಸಿಪಿ ನೋಡಲು ಅಷ್ಟೇ ಆಕರ್ಷಕವಾಗಿದೆ.
itsmejuluette ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ಇನ್ಸ್ಟಾಗ್ರಾಮರ್ ಜೂಲಿಯೆಟ್ ಕ್ಯಾಪ್ಸಿಕಂ ಬಳಸಿ ಆರೋಗ್ಯಕರ ಹಾಗೂ ರುಚಿಕರವಾದ ಚಾಕೋಲೇಟ್ ಕಪ್ ಕೇಕ್ ಮಾಡುವ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾಳೆ. ಈ ವಿಡಿಯೋದಲ್ಲಿ ಕಪ್ ಲೈನರ್ ಬದಲಿಗೆ ಕ್ಯಾಪ್ಸಿಕಂ ಬಳಸಿರುವುದನ್ನು ನೋಡಬಹುದು. ಮೊದಲಿಗೆ ಕ್ಯಾಪ್ಸಿಕಂ ಎರಡು ಭಾಗವಾಗಿ ಕತ್ತರಿಸಿದ್ದು, ಅದರ ಬೀಜಗಳನ್ನು ಸಂಪೂರ್ಣವಾಗಿ ತೆಗೆದಿದ್ದಾಳೆ. ಆ ಬಳಿಕ ಒಂದು ಟ್ರೇಯಲ್ಲಿ ಕ್ಯಾಪ್ಸಿಕಂ ಇಟ್ಟು ಅದರ ಒಳಗೆ ಚಾಕೋಲೇಟ್ ಕಪ್ ಕೇಕ್ ಬ್ಯಾಟರ್ ತುಂಬಿಸಿದ್ದು ಓವನ್ ನಲ್ಲಿ ಇಟ್ಟಿದ್ದಾಳೆ. ಸ್ವಲ್ಪ ಸಮಯದಲ್ಲೇ ಆರೋಗ್ಯಕರ ಕಪ್ ಕೇಕ್ ರೆಡಿಯಾಗಿದೆ. ಕ್ಯಾಪ್ಸಿಕಂ ಆರೋಗ್ಯಕರವಾಗಿದ್ದು, ಇದು ಕಾಗದದ ತ್ಯಾಜ್ಯವನ್ನು ಕಡಿಮೆ ಮಾಡುತ್ತದೆ ಎಂದು ವಿವರಿಸುವುದನ್ನು ನೋಡಬಹುದು.
ಇದನ್ನೂ ಓದಿ : ರಸ್ತೆಯಲ್ಲಿ ಕಸ ಎಸೆದ ಯುವಕರಿಗೆ ವಿದೇಶಿ ಮಹಿಳೆಯಿಂದ ಸ್ವಚ್ಛತೆಯ ಪಾಠ, ವಿಡಿಯೋ ವೈರಲ್
ಈ ವಿಡಿಯೋವೊಂದು ಈಗಾಗಲೇ 67 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಈ ವಿಭಿನ್ನ ಕಪ್ ಕೇಕ್ ನ್ನು ಕೆಲವರು ಮೆಚ್ಚಿಕೊಂಡಿದ್ದಾರೆ. ಈ ವಿಡಿಯೋಗೆ ಬಳಕೆದಾರರು, ಇದು ನಿಜಕ್ಕೂ ಆರೋಗ್ಯಕರ ಆಯ್ಕೆಯಾಗಿದೆ ಎಂದಿದ್ದಾರೆ. ಮತ್ತೊಬ್ಬರು, ಈ ರೀತಿ ಕಪ್ ಕೇಕ್ ಯಾರು ಕೂಡ ಪ್ರಯತ್ನಿಸಬೇಡಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಈ ರೀತಿ ಆಹಾರ ಪದಾರ್ಥಗಳ ವಿಭಿನ್ನವಾದ ಪ್ರಯೋಗಗಳನ್ನು ಮಾಡುವ ಮುನ್ನ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎನ್ನುವ ಅರಿವಿರಲಿ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ