ನಿನ್ನ ನಾಟಕ ಸಾಕು, ಖರ್ಚು ಮಾಡಿದ ದುಡ್ಡನ್ನು ವಾಪಸ್ಸು ಕೊಡು ಅಷ್ಟೇ, ಕೈ ಕೊಟ್ಟ ಹುಡುಗಿಗೆ ಶಾಕ್ ಕೊಟ್ಟ ಮಾಜಿ ಪ್ರಿಯಕರ

ಈಗಿನ ಕಾಲದಲ್ಲಿ ಪ್ರಾಮಾಣಿಕವಾಗಿ ಪ್ರೀತಿಸುವವರು ಸಿಗುವುದೇ ವಿರಳ. ಸಣ್ಣ ಪುಟ್ಟ ವಿಚಾರಗಳಿಗೆ ಜಗಳ ಮಾಡಿಕೊಂಡು ದೂರವಾಗುವವವರೇ ಹೆಚ್ಚು. ಕೆಲವರು ತಮ್ಮ ಹಣೆಬರಹ ಎಂದು ತಮ್ಮ ಪಾಡಿಗೆ ತಾವು ಇದ್ದು ಬಿಟ್ಟರೆ, ಇನ್ನು ಕೆಲವರು ಸೇಡು ತೀರಿಸಿಕೊಳ್ಳುತ್ತಾರೆ..ಆದರೆ ಇಲ್ಲೊಬ್ಬ ಪ್ರಿಯಕರು ತನ್ನ ಮಾಜಿ ಪ್ರೇಮಿಯ ಬಳಿ ತಾನು ತಿಂಡಿ ತಿನಿಸಿಗೆ ಖರ್ಚು ಮಾಡಿದ ಅಷ್ಟು ಹಣವನ್ನು ಮರುಪಾವತಿ ಮಾಡುವಂತೆ ಹೇಳಿ ಶಾಕ್ ನೀಡಿದ್ದಾನೆ. ಈ ಕುರಿತಾದ ಪೋಸ್ಟ್ ವೊಂದು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈ ರೀತಿ ಕೈಕೊಡುವ ಹುಡುಗಿಯರಿಗೆ ಹೀಗೆ ಮಾಡ್ಬೇಕು ಎಂದು ಕಾಮೆಂಟ್ ಮಾಡಿದ್ದಾರೆ.

ನಿನ್ನ ನಾಟಕ ಸಾಕು,  ಖರ್ಚು ಮಾಡಿದ ದುಡ್ಡನ್ನು ವಾಪಸ್ಸು ಕೊಡು ಅಷ್ಟೇ, ಕೈ ಕೊಟ್ಟ ಹುಡುಗಿಗೆ  ಶಾಕ್ ಕೊಟ್ಟ ಮಾಜಿ ಪ್ರಿಯಕರ
ಸಾಂದರ್ಭಿಕ ಚಿತ್ರ
Image Credit source: Getty Images
Edited By:

Updated on: May 18, 2025 | 12:29 PM

ಪ್ರೀತಿ (love) ಮಾಯೆ ಹುಷಾರು ಕಣ್ಣೀರು ಮಾರೋ ಬಜಾರು ಎನ್ನುವ ಹಾಡನ್ನು ಕೇಳಿರಬಹುದು. ಪ್ರೀತಿಯಲ್ಲಿ ಬಿದ್ದ ಪ್ರಾರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇರುತ್ತದೆ. ಆದರೆ ಈ ವೇಳೆಯಲ್ಲಿ ತನ್ನ ಪ್ರೇಮಿಯ ಬಳಿ ದುಡ್ಡು ಖರ್ಚು ಮಾಡಿಸುತ್ತಾರೆ. ತನ್ನ ಹುಡುಗಿಗಾಗಿ ಹುಡುಗರು ಗಿಫ್ಟ್  (gift) ಸೇರಿದಂತೆ ಕೇಳಿದನ್ನೆಲ್ಲಾ ಕೊಡಿಸುತ್ತಾರೆ. ಆದರೆ ಕೆಲ ಹುಡುಗಿಯರು ಹುಡುಗರನ್ನು ಚೆನ್ನಾಗಿ ಬೋಳಿಸಿ ಕೈ ಕೊಡುವುದನ್ನು ನೋಡಬಹುದು. ಹೀಗಿರುವಾಗ ಕೆಲವು ಹುಡುಗರು ಕೂಡ ಹುಡುಗಿಗೆ ಸರಿಯಾಗಿ ಬುದ್ಧಿ ಕಲಿಸುತ್ತಾರೆ. ಆದರೆ ಇಲ್ಲೊಬ್ಬ ಪ್ರಿಯಕರನು ತನ್ನ ಕೈ ಕೊಟ್ಟ ಹುಡುಗಿಗೆ ಶಾಕ್ ನೀಡಿದ್ದಾನೆ. ತಾನು ನಿನಗಾಗಿ ಏನೆಲ್ಲಾ ತಿಂಡಿ ತಿನಿಸುಗಳನ್ನು ಕೊಡಿಸಿದ್ದೆ ಅದರ ಹಣವನ್ನು ತನಗೆ ಪಾವತಿಸುವೆ ಎಂದು ಹೇಳಿದ್ದಾನೆ. ತನ್ನ ಪ್ರಿಯಕರ ತನ್ನ ಜೊತೆಗೆ ಸಂಭಾಷಣೆ ನಡೆಸಿದ ವಾಟ್ಸಪ್ಪ್ ಸ್ಕ್ರೀನ್ ಶಾರ್ಟ್ (whatsapp screenshot)  ಯುವತಿಯೂ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಂತೆ ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ.

@certifirdbkl ಹೆಸರಿನ ಖಾತೆಯಲ್ಲಿ  ಮಾಜಿ ಪ್ರಿಯಕರ ಕಳುಹಿಸಿದ ಸ್ಕ್ರೀನ್ ಶಾರ್ಟ್ ಶೇರ್ ಮಾಡಿಕೊಂಡು ತನ್ನ ಮಾಜಿ ಗೆಳೆಯ ತನಗಾಗಿ ಖರ್ಚು ಮಾಡಿದ ಹಣವನ್ನು ಪಾವತಿಸಲು ಕೇಳುತ್ತಿದ್ದಾನೆ ಎಂದು ಬರೆದುಕೊಂಡಿದ್ದಾಳೆ. ಹೌದು ದಿವ್ಯಾಳ ಮಾಜಿ ಪ್ರೇಮಿ ಆಯರ್ನ್ ಇಬ್ಬರೂ ಪ್ರೀತಿಯಲ್ಲಿದ್ದರು. ಆ ವೇಳೆ ಆಕೆಗಾಗಿ ಸ್ವಿಗ್ಗಿ ಇನ್ ಸ್ಟಾಮಾರ್ಟ್ ಆರ್ಡರ್ ಮಾಡಿದ್ದರು. ಅದರ ಸ್ಕ್ರೀನ್ ಶಾರ್ಟ್ ಗಳನ್ನು ಶೇರ್ ಮಾಡಿಕೊಂಡಿದ್ದಾನೆ. ಈ ಸ್ಕ್ರೀನ್ ಶಾರ್ಟ್ ಗಮನಿಸಿದಾಗ, ಮಸಾಲಾ ಚಿಪ್ಸ್, ಸಾಫ್ಟ್ ಡ್ರಿಂಕ್, ಡ್ರೈ ಫ್ರೂಟ್ಸ್ ಸೇರಿದಂತೆ ಪಟ್ಟಿಗಳು ದೊಡ್ಡದೇ ಇದೆ.  ಇದರಲ್ಲಿ ಬಿಲ್ ಗಳು ಸೇರಿವೆ.

ಇದನ್ನೂ ಓದಿ
ಪತಿಯ ಮುಂದೆ ವಧುದಕ್ಷಿಣೆ ಬೇಡಿಕೆಯಿಟ್ಟ ವಾಯುಪಡೆಯ ಮಹಿಳಾ ಅಧಿಕಾರಿ
ಇಟಲಿ ಪ್ರಧಾನಿಗೆ ಅಲ್ಬೇನಿಯಾದ ಪ್ರಧಾನಿ ಪ್ರಪೋಸ್ ಮಾಡಿದ್ರಾ!
8 ರಾಜ್ಯಗಳ ಸುತ್ತಾಟ, ಇದು ಕ್ಯಾರವ್ಯಾನ್ ನಲ್ಲಿ ಕೇರಳ ಕುಟುಂಬ
ಮೊಮ್ಮಗನ ಕಾರಿನ ಕೀ ಕೈಗೆ ಸಿಗುತ್ತಿದ್ದಂತೆ ಈ ಅಜ್ಜ ಮಾಡಿದ್ದೇನು ಗೊತ್ತಾ?

ಇದನ್ನೂ ಓದಿ : ಪ್ಲೀಸ್ ನಾನು ನೀನು ಅಣ್ಣ ತಂಗಿಯಂತೆ ಇರೋಣ, ಮದುವೆ ಬೇಡ ಶಾಕ್ ಆದ ವರ

ವೈರಲ್‌  ಪೋಸ್ಟ್ ಇಲ್ಲಿದೆ ನೋಡಿ:

ಈ ಪೋಸ್ಟ್ ವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಈಗಾಗಲೇ, 1.3 ಮಿಲಿಯನ್ಸ್ ವೀವ್ಸ್  ಪಡೆದುಕೊಂಡಿದ್ದು ಲೈಕ್ಸ್ ಗಳು ಹಾಗೂ ಕಾಮೆಂಟ್ಸ್ ಗಳು ಬಂದಿವೆ. ಒಬ್ಬ ಬಳಕೆದಾರರು, ಈ ಹುಡುಗಿಯರನ್ನು ನಂಬುವುದೇ ಕಷ್ಟ. ಯಾವಾಗ ಕೈ ಕೊಡುತ್ತಾರೆ ಎಂದು ಹೇಳಲಾಗದು ಎಂದಿದ್ದಾರೆ. ಮತ್ತೊಬ್ಬರು,ಇದು ನಿಜಕ್ಕೂ ಅದ್ಭುತವಾಗಿದೆ. ಈ ಪೋಸ್ಟ್ ನೋಡಿದ ಬಳಿಕ ಯಾವ ಹುಡುಗಿಯೂ ಕೂಡ ತನ್ನ ಪ್ರೇಮಿ ಕೈಯಲ್ಲಿ ಹಣ ಖರ್ಚು ಮಾಡಿಸಲು ಯೋಚಿಸುತ್ತಾರೆ ಎಂದು ಹೇಳಿದ್ದಾರೆ. ಇನ್ನೊಬ್ಬರು,  ಆರ್ಯನ್ ನಿಮಗೆ ಇಡೀ ಪುರುಷ ಸಮುದಾಯವೇ ಗೌರವ ಸಲ್ಲಿಸುತ್ತದೆ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:12 pm, Sun, 18 May 25