ಮದುವೆ ಮಂಟಪದ ಹೊರಗೆ ಝೊಮ್ಯಾಟೋ ಡೆಲಿವರಿ ಏಜೆಂಟ್ ಡ್ಯಾನ್ಸ್​ ವಿಡಿಯೋ ವೈರಲ್

| Updated By: Digi Tech Desk

Updated on: Dec 26, 2022 | 2:22 PM

Viral Video : ಮದುವೆಯ ಸಭಾಂಗಣದಲ್ಲಿ ಆಶಾ ಭೋಸ್ಲೆ ಮತ್ತು ಸುರೇಶ ವಾಡ್ಕರ್ ಹಾಡಿರುವ ಈ ಹಾಡಿಗೆ ಅಲ್ಲಿದ್ದವರೆಲ್ಲರೂ ಕುಣಿಯುತ್ತಿದ್ದಾರೆ. ಇದನ್ನು ನೋಡಿದ ಡೆಲಿವರಿ ಏಜೆಂಟ್​ಗೂ ಕುಣಿಯಬೇಕು ಎನ್ನಿಸಿದೆ. ನೋಡಿ ವಿಡಿಯೋ.

ಮದುವೆ ಮಂಟಪದ ಹೊರಗೆ ಝೊಮ್ಯಾಟೋ ಡೆಲಿವರಿ ಏಜೆಂಟ್ ಡ್ಯಾನ್ಸ್​ ವಿಡಿಯೋ ವೈರಲ್
ಮದುವೆ ಸಭಾಂಗಣದ ಹೊರಗೆ ಡ್ಯಾನ್ಸ್ ಮಾಡುತ್ತಿರುವ ಝೊಮ್ಯಾಟೋ ಡೆಲಿವರಿ ಏಜೆಂಟ್
Follow us on

Viral Video : ‘ಸಪ್ನೆ ಮೇ ಮಿಲ್ತೀ ಹೈ’ ಹಾಡಿಗೆ ಝೊಮ್ಯಾಟೋ ಡೆಲಿವರಿ ಏಜೆಂಟ್​ರೊಬ್ಬರು ಡ್ಯಾನ್ಸ್​ ಮಾಡಿದ ವಿಡಿಯೋ ಇದೀಗ ವೈರಲ್ ಆಗಿದೆ. ಈ ವಿಡಿಯೋ ಅನ್ನು ಸೆರೆಹಿಡಿದ ರೀತಿ ಅದ್ಭುತವಾಗಿದೆ. ಸಂಗೀತ ಮತ್ತು ನೃತ್ಯ ಯಾರನ್ನೂ ಮಧುರಗೊಳಿಸುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಈ ವಿಡಿಯೋ ಇದೆ. ಮದುವೆ ಸಭಾಂಗಣದಲ್ಲಿ ಎಲ್ಲರೂ ಕುಣಿಯುತ್ತಿದ್ದರೆ ಹೊರಗಿರುವ ಝೊಮ್ಯಾಟೋ ಡೆಲಿವರಿ ಏಜೆಂಟ್​ಗೂ ಕುಣಿಯಬೇಕು ಎನ್ನುವ ಉಮೇದು ಬಂದುಬಿಟ್ಟಿದೆ.

ಈ ವಿಡಿಯೋ ಅನ್ನು 50,000 ಕ್ಕೂ ಹೆಚ್ಚು ಜನರು ನೋಡಿದ್ದಾರೆ. 8,000 ಕ್ಕೂ ಹೆಚ್ಚು ಜನ ಇಷ್ಟಪಟ್ಟಿದ್ದಾರೆ. ಆಶಾ ಭೋಸ್ಲೆ ಮತ್ತು ಸುರೇಶ ವಾಡ್ಕರ್ ಹಾಡಿದ ‘ಸಪ್ನೆ ಮೇ ಮಿಲ್ತೀ ಹೈ’ ಹಾಡಿಗೆ ಮದುವೆಗೆ ಬಂದ ಅತಿಥಿಗಳು ಡ್ಯಾನ್ಸ್​ ಮಾಡಿದ್ದಾರೆ. ಇದನ್ನು ನೋಡಿ, ಕೇಳಿ ಹುಕಿ ಎದ್ದು ಝೊಮ್ಯಾಟೋ ಡೆಲಿವರಿ ಪಾರ್ಟನರ್ ಕೂಡ ಡ್ಯಾನ್ಸ್ ಮಾಡಿದ್ದಾರೆ.  ಈ ವಿಡಿಯೋ ನೋಡಿದ ನೆಟ್ಟಿಗರು ಝೊಮ್ಯಾಟೊ ವೈಬ್​ ಹೈ ಎಂದಿದ್ದಾರೆ ನೆಟ್ಟಿಗರು.

ಸಂಗೀತಕ್ಕೆ ಮನಸೋಲದವರು ಯಾರಿದ್ದಾರೆ? ತನ್ನನ್ನೇ ತಾನು ಮರೆಯುವುದು ಎನ್ನುತ್ತಾರಲ್ಲ ಇದಕ್ಕೆ ಪರಿಪೂರ್ಣ ಉದಾಹರಣೆ ಎಂದಿದ್ದಾರೆ ನೆಟ್ಟಿಗರು. ಈ ಹಾಡನ್ನು ನೆನಪಿಸಿದ್ದಕ್ಕೆ ಧನ್ಯವಾದ ಹಾಗೆಯೇ ಝೋಮ್ಯಾಟೋ ಅಣ್ಣನಿಗೆ ಒಳ್ಳೆಯದಾಗಲಿ ಎಂದಿದ್ದಾರೆ ಅನೇಕರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 1:49 pm, Mon, 26 December 22