‘ಇವನೇ ನನ್ನ ಗೆಳೆಯ’ ಹೆಬ್ಬಾವನ್ನು ತಬ್ಬಿಕೊಳ್ಳುವ ಜೇ ಬ್ರ್ಯೂವರ್

| Updated By: ಶ್ರೀದೇವಿ ಕಳಸದ

Updated on: Oct 07, 2022 | 10:50 AM

Python : ಈತ ಸರೀಸೃಪಗಳಿಗಾಗಿ ವಿಶೇಷವಾದ ಮೃಗಾಲಯ ಸ್ಥಾಪಿಸಿದ್ದಾನೆ. ಇನ್​ಸ್ಟಾಗ್ರಾಂನಲ್ಲಿ 6 ಮಿಲಿಯನ್ ಫಾಲೋವರ್ಸ್ ಹೊಂದಿರುವ ಈತ ಇತ್ತೀಚೆಗೆ ಪೋಸ್ಟ್ ಮಾಡಿದ ಈ ವಿಡಿಯೋ ಮಾತ್ರ ಅದ್ಭುತ. ನೋಡಿ ಪಂಚರಂಗೀ ಹೆಬ್ಬಾವಿನ ವಿಡಿಯೋ!

‘ಇವನೇ ನನ್ನ ಗೆಳೆಯ’ ಹೆಬ್ಬಾವನ್ನು ತಬ್ಬಿಕೊಳ್ಳುವ ಜೇ ಬ್ರ್ಯೂವರ್
Zoo keeper hugs a giant python
Follow us on

Viral Video : ಎದುರಿಗೆ ಹಾವು ಕಾಣಿಸಿಕೊಂಡರೆ ಏನು ಮಾಡುತ್ತೀರಿ? ಮೊದಲು ನೀವು ನಿಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆಂದು ಓಡಲು ಶುರು ಮಾಡುತ್ತೀರಿ ಅಥವಾ ದೂರಲ್ಲಿಯೇ ನಿಂತು ಅದನ್ನು ನೋಡುತ್ತೀರಿ. ಆದರೆ ನಿಮ್ಮ ಜಾಗದಲ್ಲಿ ಜೇ ಬ್ರ್ಯೂವರ್ ಇದ್ದರೆ ಏನು ಮಾಡುತ್ತಾರೆ? ತಬ್ಬಿಕೊಂಡು ಇವನು ನನ್ನ ಸ್ನೇಹಿತ ಎನ್ನುತ್ತಿದ್ದರು. ಯಾರು ಈ ಜೇ ಬ್ರ್ಯೂವರ್? ಸರೀಸೃಪಗಳಿಗಾಗಿ ಮೃಗಾಲಯ ಸ್ಥಾಪಿಸಿರುವ ಪ್ರಾಣಿಪ್ರಿಯ ಜೇ ಬ್ರ್ಯೂವರ್. ತಮ್ಮ ಇನ್​ಸ್ಟಾಗ್ರಾಂನಲ್ಲಿ ಆಗಾಗ್ಗೆ ಪ್ರಾಣಿಗಳು, ಸರೀಸೃಪಗಳ ಬಗ್ಗೆ ಮಾಹಿತಿಯುಳ್ಳ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಪ್ರಾಣಿಗಳೊಂದಿಗೆ ಸಂಭಾಷಣೆ ನಡೆಸುತ್ತ ಆ ಕುರಿತು ತನ್ನ ವೀಕ್ಷಕರಿಗೆ ವಿವರಿಸುತ್ತಿರುತ್ತಾರೆ. ಇತ್ತೀಚೆಗೆ ಅಪ್​ಲೋಡ್ ಮಾಡಿದ ಈ ವಿಡಿಯೋದಲ್ಲಿ ಬ್ರ್ಯೂವರ್ ಹೆಬ್ಬಾವನ್ನು ಕೈಯಲ್ಲಿ ಹಿಡಿದುಕೊಂಡಿದ್ದಾರೆ. ಎಂಥ ದೈತ್ಯ ಹೆಬ್ಬಾವು ಇದು ಪಂಚರಂಗೀ ಬಣ್ಣ ಬೇರೆ. ಆದರೆ ಬ್ರ್ಯೂವರ್ ಅದನ್ನು ಅಪ್ಪಿಕೊಳ್ಳುವ ರೀತಿ ನೋಡಿ.

ಈ ವಿಡಿಯೋ 1 ಮಿಲಿಯನ್ ವೀಕ್ಷಕರನ್ನು ಸೆಳೆದಿದೆ. 90,000 ಕ್ಕೂ ಹೆಚ್ಚು ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ. ಅನೇಕರು ಅನೇಕ ರೀತಿಯಿಂದ ಪ್ರತಿಕ್ರಿಯಿಸಿದ್ದಾರೆ. ಬಹಳಷ್ಟು ಜನ ಭಯ ವ್ಯಕ್ತಪಡಿಸಿದ್ದೇ ಹೆಚ್ಚು. ಕೆಲವರು ಇದರ ಸೌಂದರ್ಯಕ್ಕೆ ಮಾರುಹೋಗಿದ್ದಾರೆ. ‘ಅದ್ಭುತ ಬಣ್ಣಗಳು. ಗ್ಯಾಲಕ್ಸಿ ನೋಡಿದಂತೆ ಆಗುತ್ತಿದೆ’ ಎಂದಿದ್ದಾರೆ ಒಬ್ಬರು. ‘ಅದು ಅವನನ್ನು ನುಂಗಿಬಿಟ್ಟರೆ? ಪ್ರಾಣಿಗಳನ್ನು ನಂಬಲಾಗದು’ ಎಂದಿದ್ದಾರೆ ಮತ್ತೊಬ್ಬರು. ಇದು ಗಂಡೋ ಹೆಣ್ಣೋ. ಹೆಣ್ಣೇ ಇರಬೇಕು ಇಷ್ಟು ಸುಂದರವಾಗಿದೆ ಎಂದಮೇಲೆ. ಮೈಮೇಲಿನ ಬಣ್ಣಗಳು ನನ್ನನ್ನು ಬಹುವಾಗಿ ಸೆಳೆಯುತ್ತಿವೆ. ನನಗೂ ಇಂಥದೊಂದು ಹೆಬ್ಬಾವು ಬೇಕು ಎನ್ನಿಸುತ್ತಿದೆ’ ಎಂದು ಮಗದೊಬ್ಬರು ಪ್ರತಿಕ್ರಿಯಿಸಿದ್ಧಾರೆ.

ನಿಮಗೇನು ಅನ್ನಿಸುತ್ತಿದೆ? ಬೇಕಾ ಇಂಥ ಹೆಬ್ಬಾವು ನಿಮಗೂ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 10:50 am, Fri, 7 October 22