ತುಂಗಭದ್ರಾ ಡ್ಯಾಂನ 10 ಗೇಟ್​ಗಳು ಓಪನ್; 18 ಸಾವಿರ ಕ್ಯೂಸೆಕ್ ನೀರು ರಿಲೀಸ್

|

Updated on: Jul 24, 2024 | 9:03 PM

ತುಂಗಭದ್ರಾ(Tungabhadra) ಜಲಾಶಯದ ಒಳಹರಿವು ಹೆಚ್ಚಿದ ಹಿನ್ನೆಲೆ ಜಲಾಶಯದಿಂದ ನದಿಗೆ ಹೆಚ್ಚಿನ ಪ್ರಮಾಣದ ನೀರು ಬಿಡುಗಡೆ ಮಾಡಲಾಗಿದೆ. ಬರೋಬ್ಬರಿ 10 ಗೇಟ್​​ಗಳ ಮೂಲಕ 18,686 ಕ್ಯೂಸೆಕ್ ನೀರು ನದಿಗೆ ರಿಲೀಸ್​ ಮಾಡಲಾಗಿದ್ದು, ನದಿ ಪಾತ್ರಕ್ಕೆ ತೆರಳದಂತೆ ಅಧಿಕಾರಿಗಳು ಜನರಿಗೆ ಎಚ್ಚರಿಕೆ ನೀಡಿದ್ದಾರೆ. 

ಕೊಪ್ಪಳ, ಜು.24: ಮಲೆನಾಡಿನಲ್ಲಿ ಭರ್ಜರಿ ಮಳೆಯಾಗುತ್ತಿದ್ದ ಪರಿಣಾಮ ತುಂಗಭದ್ರಾ(Tungabhadra) ನೀರು ತುಂಬಿದೆ. ಇದರಿಂದ ಜಲಾಶಯದ ಒಳಹರಿವು ಹೆಚ್ಚಿದ ಹಿನ್ನೆಲೆ ಜಲಾಶಯದಿಂದ ನದಿಗೆ ಹೆಚ್ಚಿನ ಪ್ರಮಾಣದ ನೀರು ಬಿಡುಗಡೆ ಮಾಡಲಾಗಿದೆ. ಬರೋಬ್ಬರಿ 10 ಗೇಟ್​​ಗಳ ಮೂಲಕ 18,686 ಕ್ಯೂಸೆಕ್ ನೀರು ನದಿಗೆ ರಿಲೀಸ್​ ಮಾಡಲಾಗಿದ್ದು, ನದಿ ಪಾತ್ರಕ್ಕೆ ತೆರಳದಂತೆ ಅಧಿಕಾರಿಗಳು ಜನರಿಗೆ ಎಚ್ಚರಿಕೆ ನೀಡಿದ್ದಾರೆ.  ಇನ್ನು ಈ ತುಂಗಭದ್ರಾ ಜಲಾಶಯದ ಒಟ್ಟು ಸಾಮರ್ಥ್ಯ 105 ಟಿಎಮ್‌ಸಿ ಆಗಿದ್ದು, ಅದರಲ್ಲಿ ಈಗಾಗಲೇ 99.36 ಟಿಎಮ್‌ಸಿ ಭರ್ತಿಯಾಗಿದೆ. ಹೀಗಾಗಿ ನೀರನ್ನು ಹೊರಕ್ಕೆ ಬಿಡಲಾಗಿದೆ. ಇತ್ತ ನೀರು ಹೊರಕ್ಕೆ ಬಿಟ್ಟ ಹಿನ್ನಲೆ ಹಂಪಿ ಸ್ಮಾರಕ ಪ್ರದೇಶದಲ್ಲಿ ಪ್ರವಾಹ ಭೀತಿ ಎದುರಾಗಿದೆ. ನದಿಯಲ್ಲಿನ ಕೆಲ ಮಂಟಪಗಳು ಮುಳುಗಡೆಯಾಗುವ ಸಾಧ್ಯತೆಯಿದೆ. ಆದ್ದರಿಂದ ಹಂಪಿ ಸ್ಮಾರಕ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ