ಜ್ವರದಿಂದ ಬಳಲುತ್ತಿದ್ದ ವಿದ್ಯಾರ್ಥಿನಿ ಸಾವು: ಮೆಗ್ಗಾನ್ ಆಸ್ಪತ್ರೆ ವೈದ್ಯರ ಯಡವಟ್ಟು ಶ್ವೇತಾ ದುರಂತ ಅಂತ್ಯ

Edited By:

Updated on: Sep 27, 2026 | 9:27 PM

ಶಿವಮೊಗ್ಗದ ರಾಗಿಗುಡ್ಡದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವ ಅಂಬೇಡ್ಕರ್ ವಸತಿ ಶಾಲೆಯ ವಿದ್ಯಾರ್ಥಿನಿ ಶ್ವೇತಾ (12) ಮೃತಪಟ್ಟಿದ್ದಾಳೆ. ಕಳೆದ ಶನಿವಾರ ಜ್ವರ ಬಂದಿದ್ದ ಶ್ವೇತಾಗೆ ಹಾಸ್ಟೇಲ್ ನಲ್ಲಿ ಡೊಲೋ ಮಾತ್ರೆ ನೀಡಿದ್ದರು. ಅದರ ಬಳಿಕ ಕಳೆದ ಭಾನುವಾರ ಬೆಳಗ್ಗೆ ಜ್ವರ ವಿಪರೀಪವಾಗಿ ಜಾಸ್ತಿಯಾಗಿತ್ತು. ಈ ಹಿನ್ನಲೆಯಲ್ಲಿ ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ವಸತಿ ಶಾಲೆಯ ಪ್ರಿನ್ಸಿಪಾಲ್ ಮತ್ತು ಶಿಕ್ಷಕರು ದಾಖಲಿಸಿದ್ದರು. ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು. ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಹಳಿಯಾಳ ಮಟ್ಟಿಕ್ಯಾಂಪ್ ಗ್ರಾಮದ ನಿವಾಸಿ ಶ್ವೇತಾ. ಹೆತ್ತವರು ಓಡಿ ಓಡಿ ಕಳೆದ ಭಾನುವಾರ ಆಸ್ಪತ್ರೆಗೆ ಬಂದಿದ್ದರು.

ಶಿವಮೊಗ್ಗ, (ಸೆಪ್ಟೆಂಬರ್ 27): ಶಿವಮೊಗ್ಗದ ರಾಗಿಗುಡ್ಡದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವ ಅಂಬೇಡ್ಕರ್ ವಸತಿ ಶಾಲೆಯ ವಿದ್ಯಾರ್ಥಿನಿ ಶ್ವೇತಾ (12) ಮೃತಪಟ್ಟಿದ್ದಾಳೆ. ಕಳೆದ ಶನಿವಾರ ಜ್ವರ ಬಂದಿದ್ದ ಶ್ವೇತಾಗೆ ಹಾಸ್ಟೇಲ್ ನಲ್ಲಿ ಡೊಲೋ ಮಾತ್ರೆ ನೀಡಿದ್ದರು. ಅದರ ಬಳಿಕ ಕಳೆದ ಭಾನುವಾರ ಬೆಳಗ್ಗೆ ಜ್ವರ ವಿಪರೀಪವಾಗಿ ಜಾಸ್ತಿಯಾಗಿತ್ತು. ಈ ಹಿನ್ನಲೆಯಲ್ಲಿ ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ವಸತಿ ಶಾಲೆಯ ಪ್ರಿನ್ಸಿಪಾಲ್ ಮತ್ತು ಶಿಕ್ಷಕರು ದಾಖಲಿಸಿದ್ದರು. ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು. ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಹಳಿಯಾಳ ಮಟ್ಟಿಕ್ಯಾಂಪ್ ಗ್ರಾಮದ ನಿವಾಸಿ ಶ್ವೇತಾ. ಹೆತ್ತವರು ಓಡಿ ಓಡಿ ಕಳೆದ ಭಾನುವಾರ ಆಸ್ಪತ್ರೆಗೆ ಬಂದಿದ್ದರು.

ಕಳೆದ ಆರು ದಿನಗಳಿಂದ ಜಿಲ್ಲಾಶ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ವೇತಾ ಗೆ ವೆಂಟಿಲೇಟರ್ ಮೂಲಕ ಆಕ್ಸಿಜನ್ ನೀಡಲಾಗುತ್ತಿತ್ತು. ಕಿಡ್ನಿ ಸಮಸ್ಯೆ ಎದುರಾಗಿತ್ತು. ಮೂರು ದಿನ ಕೋಮಾಕ್ಕೆ ಜಾರಿದ್ದ ಶ್ವೇತಾ ಸ್ವಲ್ಪ ಚೇತರಿಸಕೊಂಡಿದ್ದಳು.ಈ ನಡುವೆ ಡಯಾಲಿಸಿಸ್ ಮಾಡಲು ಟ್ಯೂಬ್ ಆಸ್ಪತ್ರೆಯಲ್ಲಿ ಇರಲಿಲ್ಲ. ಪೋಷಕರು ಮತ್ತು ಶಾಲೆಯ ಆಡಳಿತ ಮಂಡಳಿಯು ಸುಮಾರು ಔಷಧ ವೈದ್ಯಕೀಯ ಪರೀಕ್ಷಗೆಂದು 70 ಸಾವಿರ ಸರಕಾರಿ ಆಸ್ಪತ್ರೆಯಲ್ಲಿ ವೆಚ್ಚ ಮಾಡಿತ್ತು. ಈ ಟ್ಯೂಬ್ ಗಾಗಿ ಶಿವಮೊಗ್ಗದಲ್ಲಿ ಎಲ್ಲಡೆ ಹುಡುಕಾಡಿದ್ದಾರೆ. ಅದು ಸಿಕ್ಕಿಲ್ಲ. ಇದರಿಂದ ಶ್ವೇತಾಳ ಆರೋಗ್ಯ ಹದಿಗೆಟ್ಟು ಹೋಗಿದ್ದು, ಕೊನೆಗೆ ಕೊನೆಯುಸಿರೆಳೆದಿದ್ದಾಳೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
Basavaraj Yaraganavi