ಹಾರ್ಮುಜ್ ಜಲಸಂಧಿ ದಾಟುತ್ತಿದ್ದ ಭಾರತದ 2 ಹಡಗುಗಳ ಮೇಲೆ ಇರಾನ್​ನಿಂದ ಗುಂಡಿನ ದಾಳಿ

Updated on: Apr 18, 2026 | 8:01 PM

ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್ ಮತ್ತೆ ನಿರ್ಬಂಧಗಳನ್ನು ಹೇರುತ್ತಿದ್ದಂತೆ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ ಗನ್‌ಬೋಟ್‌ಗಳು ಭಾರತದ 2 ಟ್ಯಾಂಕರ್ ಮೇಲೆ ಗುಂಡು ಹಾರಿಸಿವೆ. ಇರಾನ್‌ನ ಕ್ರಾಂತಿಕಾರಿ ಗಾರ್ಡ್‌ನ ಎರಡು ಗನ್‌ಬೋಟ್‌ಗಳು ಹಾರ್ಮುಜ್ ಜಲಸಂಧಿಯ ಮೂಲಕ ಸಾಗುತ್ತಿದ್ದ ಭಾರತದ 2 ಟ್ಯಾಂಕರ್ ಮೇಲೆ ಗುಂಡು ಹಾರಿಸಿವೆ ಎಂದು ಬ್ರಿಟಿಷ್ ಮಿಲಿಟರಿ ಇಂದು ದೃಢಪಡಿಸಿದೆ. ಟ್ಯಾಂಕರ್ ಮತ್ತು ಹಡಗಿನಲ್ಲಿದ್ದ ಸಿಬ್ಬಂದಿ ಸುರಕ್ಷಿತರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಟೆಹ್ರಾನ್, ಏಪ್ರಿಲ್ 18: ಹಾರ್ಮುಜ್ ಜಲಸಂಧಿಯ (Strait of Hormuz) ಮೇಲೆ ವಿಧಿಸಲಾಗಿದ್ದ ನಿಷೇಧವನ್ನು ನಿನ್ನೆ ತೆಗೆದುಹಾಕಿದ್ದ ಇರಾನ್ ಇಂದು ಮತ್ತೆ ಅಮೆರಿಕ ಕದನವಿರಾಮವನ್ನು ಉಲ್ಲಂಘನೆ ಮಾಡಿದ ಎಂಬ ಕಾರಣ ನೀಡಿ ಹಾರ್ಮುಜ್ ಮಾರ್ಗವನ್ನು ಬಂದ್ ಮಾಡುವುದಾಗಿ ಘೋಷಿಸಿತ್ತು. ಇದರ ನಡುವೆ ಇಂದು ಸಂಜೆ ಹಾರ್ಮುಜ್ ಜಲಸಂಧಿಯನ್ನು ದಾಟಲು ಪ್ರಯತ್ನಿಸುತ್ತಿದ್ದ ಭಾರತದ 2 ಹಡಗುಗಳ ಮೇಲೆ ಇರಾನ್ ಗುಂಡಿನ ದಾಳಿ ನಡೆಸಿದೆ. ಇದರಿಂದಾಗಿ ಭಾರತದ 2 ಹಡಗುಗಳು ಯು-ಟರ್ನ್ ಹೊಡೆದು ವಾಪಾಸ್ ಹೊರಟಿವೆ.

ಇರಾನ್‌ನ ಕ್ರಾಂತಿಕಾರಿ ಗಾರ್ಡ್‌ನ ಎರಡು ಗನ್‌ಬೋಟ್‌ಗಳು ಹಾರ್ಮುಜ್ ಜಲಸಂಧಿಯ ಮೂಲಕ ಸಾಗುತ್ತಿದ್ದ ಭಾರತದ 2 ಟ್ಯಾಂಕರ್ ಮೇಲೆ ಗುಂಡು ಹಾರಿಸಿವೆ ಎಂದು ಬ್ರಿಟಿಷ್ ಮಿಲಿಟರಿ ಇಂದು ದೃಢಪಡಿಸಿದೆ. ಟ್ಯಾಂಕರ್ ಮತ್ತು ಹಡಗಿನಲ್ಲಿದ್ದ ಸಿಬ್ಬಂದಿ ಸುರಕ್ಷಿತರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Apr 18, 2026 08:01 PM
Follow Us