ಮದ್ವೆಯಲ್ಲಿ ಡಾನ್ಸ್ ಮಾಡುತ್ತಿರುವಾಗಲೇ ಕುಸಿದುಬಿದ್ದು ಯುವಕ ಸಾವು, ವಿಡಿಯೋ ಇಲ್ಲಿದೆ

Updated By: ರಮೇಶ್ ಬಿ. ಜವಳಗೇರಾ

Updated on: May 24, 2025 | 3:47 PM

ಹೃದಯಾಘಾತ ಯಾವ ಸಂದರ್ಭದಲ್ಲಿ ಆಗಿತ್ತೆ ಎನ್ನುವುದೇ ಹೇಳುವುದಕ್ಕೆ ಆಗಲ್ಲ. ಸುಖ ದುಃಖದಲ್ಲಿ ಇರುವಾಗಲೇ ಹೃದಯಾಘಾತ ಸಂಭವಿಸುತ್ತೆ. ಇದಕ್ಕೆ ಪೂರಕವೆಂಬಂತೆ ಯುವಕನೋರ್ವ ಸಂಬಂಧಿಕರೊಬ್ಬರ ಮದುವೆ ಕಾರ್ಯಕ್ರಮದಲ್ಲಿ ಡಾನ್ಸ್​ ಮಾಡುತ್ತಿರುವಾಗಲೇ ಕುಸಿದುಬಿದ್ದು ಮೃತಪಟ್ಟಿದ್ದಾನೆ. ವಿಜಯಪುರ ನಗರದ ಚಪ್ಪರಬಂದ ಕಾಲೋನಿಯಲ್ಲಿ ಈ ನಡೆದಿದೆ. ಮೊಹಮ್ಮದ್ ಪೈಗಂಬರ್ (28) ಮೃತ ಯುವಕ.

ವಿಜಯಪುರ, (ಮೇ 24): ಹೃದಯಾಘಾತ ಯಾವ ಸಂದರ್ಭದಲ್ಲಿ ಆಗಿತ್ತೆ ಎನ್ನುವುದೇ ಹೇಳುವುದಕ್ಕೆ ಆಗಲ್ಲ. ಸುಖ ದುಃಖದಲ್ಲಿ ಇರುವಾಗಲೇ ಹೃದಯಾಘಾತ ಸಂಭವಿಸುತ್ತೆ. ಇದಕ್ಕೆ ಪೂರಕವೆಂಬಂತೆ ಯುವಕನೋರ್ವ ಸಂಬಂಧಿಕರೊಬ್ಬರ ಮದುವೆ ಕಾರ್ಯಕ್ರಮದಲ್ಲಿ ಡಾನ್ಸ್​ ಮಾಡುತ್ತಿರುವಾಗಲೇ ಕುಸಿದುಬಿದ್ದು ಮೃತಪಟ್ಟಿದ್ದಾನೆ. ವಿಜಯಪುರ ನಗರದ ಚಪ್ಪರಬಂದ ಕಾಲೋನಿಯಲ್ಲಿ ಈ ನಡೆದಿದೆ. ಮೊಹಮ್ಮದ್ ಪೈಗಂಬರ್ (28) ಮೃತ ಯುವಕ. ಅಲ್ಯೂಮಿನಿಯಂ ಶಾಪ್​ನಲ್ಲಿ ಕೆಲಸ ಮಾಡುತ್ತಿದ್ದ ಮೃತ ಮೊಹಮ್ಮದ್, ಸಂಬಂಧಿಕರ ಮದುವೆಯಲ್ಲಿ ಡ್ಯಾನ್ಸ್​ ಮಾಡುತ್ತಿದ್ದಾಗ ದಿಢೀರ್​ ಕುಸಿದುಬಿದ್ದು ಮೃತಪಟ್ಟಿದ್ದಾನೆ.