Nitya Bhavishya: ಮಂಗಳವಾರದಂದು ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ ತಿಳಿದುಕೊಳ್ಳಲು ವಿಡಿಯೋ ನೋಡಿ

|

Updated on: Mar 28, 2023 | 6:35 AM

ಮಂಗಳವಾರ 28 ಮಾರ್ಚ್​ 2023ರಂದು ನಿಮ್ಮ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿಯಿಂದ ತಿಳಿದುಕೊಳ್ಳಿ.

ಶುಭೋದಯ ಓದುಗರೇ.  ಮಂಗಳವಾರ ದೇವಿ ಆರಾಧಾನೆಗೆ ಶ್ರೇಷ್ಠ ದಿನವಾಗಿದ್ದು, ನಿತ್ಯ ಆದಿಶಕ್ತಿಯನ್ನು ಧ್ಯಾನಿಸುತ್ತಿದ್ದರೇ ಸುಮಂಗಲ ಉಂಟಾಗುತ್ತದೆ.  ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಮಾರ್ಚ್ 28) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ಉತ್ತರಾಭಾದ್ರ, ಮಾಸ : ಚೈತ್ರ, ಪಕ್ಷ : ಶುಕ್ಲ, ವಾರ :ಮಂಗಳ, ತಿಥಿ : ಸಪ್ತಮೀ, ನಿತ್ಯನಕ್ಷತ್ರ : ಮೃಗಶಿರಾ, ಯೋಗ : ಸೌಭಾಗ್ಯ, ಕರಣ : ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 32 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 42 ನಿಮಿಷಕ್ಕೆ, ರಾಹು ಕಾಲ 03 :40 ರಿಂದ 11:15ರವರೆಗೆ, ಯಮಘಂಡ ಕಾಲ 09:35ರಿಂದ 11:06ರ ವರೆಗೆ, ಗುಳಿಕ ಕಾಲ 12:38 ರಿಂದ 02:09ರ ವರೆಗೆ.