[lazy-load-videos-and-sticky-control id=”y_fWaWU-1ls”]
ಧಾರವಾಡ: ಹುಬ್ಬಳ್ಳಿಯ ಕರ್ನಾಟಕ ರೈಲ್ವೆ ಪೊಲೀಸ್ ಠಾಣೆಯ ಮೂವರು ಪೊಲೀಸರಿಗೆ ಕೊರೊನಾ ಧೃಡ ಪಟ್ಟರು ಆಸ್ಪತ್ರೆಗೆ ಶಿಫ್ಟ್ ಮಾಡದೆ ಆರೋಗ್ಯ ಇಲಾಖೆ ನಿರ್ಲಕ್ಷ ತೋರಿದೆ. ಹೀಗಾಗಿ ರೈಲ್ವೆ ಪೊಲೀಸರು ರಾತ್ರಿಯಿಡಿ ಆ್ಯಂಬುಲೆನ್ಸ್ಗಾಗಿ ಟೆರೆಸ್ ಮೇಲೆ ಕಾಲ ಕಳೆದಿರುವ ಘಟನೆ ಹುಬ್ಬಳ್ಳಿಯ ಕರ್ನಾಟಕ ರೈಲ್ವೆ ಪೊಲೀಸ್ ಕ್ವಾಟ್ರಸ್೯ ನಲ್ಲಿ ನೆಡೆದಿದೆ.
ಇಬ್ಬರು ಎಎಸ್ಐ ಹಾಗೂ ಒರ್ವ ಕಾನ್ಸಟೇಬಲ್ ಸೇರಿ ಮೂವರು ಪೊಲೀಸರಿಗೆ ನಿನ್ನೆ ಬೆಳಗ್ಗೆಯೇ ಸೋಂಕು ಇರುವುದನ್ನ ದೃಢಪಡಿಸಲಾಗಿತ್ತು.ಆದರೆ ಈವರೆಗೂ ಸೋಂಕಿತ ಪೊಲೀಸರನ್ನು ಆಸ್ಪತ್ರೆಗೆ ಶಿಫ್ಟ್ ಮಾಡಿಲ್ಲ. ಇದರಿಂದಾಗಿ ರಾತ್ರಿಯಿಡಿ ಟೆರೆಸ್ ಮೇಲೆ ಆ್ಯಂಬುಲೆನ್ಸ್ ಗಾಗಿ ಕಾದು ಕುಳಿತ್ತಿದ್ದಾರೆ.ಸೋಂಕಿತರು ನೆಲೆಸಿರುವ ಕಟ್ಟಡದಲ್ಲಿ 35 ಸಿಬ್ಬಂದಿಗಳು ವಾಸವಿದ್ದಾರೆ ಹೀಗಾಗಿ ಉಳಿದವರು ಸಹ ಕೊರೊನಾ ಸೋಂಕು ತಗುಲುವ ಭಯದಲ್ಲೆ ಕಾಲ ಕಳೆಯುವಂತ್ತಾಗಿದೆ.
Published On - 12:03 pm, Sun, 19 July 20