ಸರ್ಕಾರದ ಆದೇಶಕ್ಕೆ ಜಗ್ಗದ ಖಾಸಗಿ ಆಸ್ಪತ್ರೆಗೆ BBMP ಆಯುಕ್ತ ಖಡಕ್ ವಾರ್ನಿಂಗ್
[lazy-load-videos-and-sticky-control id=”0_POQeYvrto”] ಬೆಂಗಳೂರು:ಬಿಬಿಎಂಪಿ ಅಧಿಕಾರಿಗಳು ಎಷ್ಟೇ ಮನವಿ ಮಾಡಿದ್ರು ಖಾಸಗಿ ಆಸ್ಪತ್ರೆಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಹೀಗಾಗಿ ಇಂದು ಸಾಕ್ರ ಆಸ್ಪತ್ರೆಗೆ ಭೇಟಿ ನೀಡಿದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ನಾವು ದುಡ್ಡು ಕೊಟ್ರು ನೀವು ಯಾಕೆ ಬೆಡ್ ನೀಡ್ತಿಲ್ಲವೆಂದು ಆಸ್ಪತ್ರೆಯ ಆಡಳಿತ ವರ್ಗದ ಮೇಲೆ ಬಿಬಿಎಂಪಿ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಕಿಡಿ ಕಾರಿದ್ದಾರೆ. ಸರ್ಕಾರ ನಿಗದಿ ಮಾಡಿದಂತೆ ಕೋವಿಡ್ ಸೋಂಕಿತರಿಗೆ ಬೆಡ್ ನೀಡದ ಬೆಂಗಳೂರಿನ ಮಾರತ್‌ಹಳ್ಳಿ ಬಳಿಯಿರುವ ಸಾಕ್ರ ಆಸ್ಪತ್ರೆಯ ಒಪಿಡಿಯನ್ನು ಕೂಡಲೇ […]
[lazy-load-videos-and-sticky-control id=”0_POQeYvrto”]
ಬೆಂಗಳೂರು:ಬಿಬಿಎಂಪಿ ಅಧಿಕಾರಿಗಳು ಎಷ್ಟೇ ಮನವಿ ಮಾಡಿದ್ರು ಖಾಸಗಿ ಆಸ್ಪತ್ರೆಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಹೀಗಾಗಿ ಇಂದು ಸಾಕ್ರ ಆಸ್ಪತ್ರೆಗೆ ಭೇಟಿ ನೀಡಿದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ನಾವು ದುಡ್ಡು ಕೊಟ್ರು ನೀವು ಯಾಕೆ ಬೆಡ್ ನೀಡ್ತಿಲ್ಲವೆಂದು ಆಸ್ಪತ್ರೆಯ ಆಡಳಿತ ವರ್ಗದ ಮೇಲೆ ಬಿಬಿಎಂಪಿ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಕಿಡಿ ಕಾರಿದ್ದಾರೆ.
ಸರ್ಕಾರ ನಿಗದಿ ಮಾಡಿದಂತೆ ಕೋವಿಡ್ ಸೋಂಕಿತರಿಗೆ ಬೆಡ್ ನೀಡದ ಬೆಂಗಳೂರಿನ ಮಾರತ್‌ಹಳ್ಳಿ ಬಳಿಯಿರುವ ಸಾಕ್ರ ಆಸ್ಪತ್ರೆಯ ಒಪಿಡಿಯನ್ನು ಕೂಡಲೇ ಕ್ಲೋಸ್ ಮಾಡುವಂತೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸಾಕ್ರ ಆಸ್ಪತ್ರೆಯಲ್ಲಿ ಒಟ್ಟು 300 ಹಾಸಿಗೆ ಗಳಿದ್ದು ಸರ್ಕಾರದ ಆದೇಶದಂತೆ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಬೆಡ್ ಕೊಡುವುದಕ್ಕೆ ಹಿಂದೇಟು ಹಾಕಿದ ಆಸ್ಪತ್ರೆಯ ವಿರುದ್ಧ ಕ್ರಿಮಿನಲ್ ಕೇಸ್ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಖಾಸಗಿ ಆಸ್ಪತ್ರೆಯ ಮುಖ್ಯಸ್ಥರಿಗೆ ವಿಪತ್ತು ಕಾಯ್ದೆ ಅಡಿ ಕ್ರಮ ತೆಗೆದುಕೊಳ್ಳುವ ಬಗ್ಗೆ ಮಾಹಿತಿ ನೀಡಿರುವ ಮಂಜುನಾಥ್ ಪ್ರಸಾದ್ ಸಾಕ್ರ ಆಸ್ಪತ್ರೆಗೆ ರಾತ್ರಿ 6 ಗಂಟೆಯೊಳಗೆ ಬೆಡ್ ನಿಗದಿ ಮಾಡಿ ಮಾಹಿತಿ ನೀಡುವಂತೆ ಸೂಚಿಸಿದಲ್ಲದೆ ಸರ್ಕಾರದ ಆದೇಶದಂತೆ ನೆಡೆದುಕೊಳ್ಳದ ನಿಮ್ಮ ಸಿಇಒರನ್ನ ಅರೆಸ್ಟ್ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
Published On - 2:22 pm, Sun, 19 July 20