ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ ಇದ್ದಕ್ಕಿದ್ದಂತೆ 6 ಅಡಿ ಉದ್ದದ ಹಾವು ಪ್ರತ್ಯಕ್ಷ!

|

Updated on: Sep 21, 2024 | 6:54 PM

ರೈಲಿಗಾಗಿ ಪ್ರಯಾಣಿಕರು ಪ್ಲಾಟ್​ಫಾರ್ಮ್ ಮೇಲೆ ಕಾಯುತ್ತಾ ನಿಂತಾಗ ಅಲ್ಲಿಗೆ ಅನಿರೀಕ್ಷಿತ ಅತಿಥಿಯೊಂದು ಆಗಮಿಸಿದೆ. ರೈಲ್ವೆ ಪ್ಲಾಟ್​ಫಾರ್ಮ್ ಮೇಲೆ 6 ಅಡಿ ಉದ್ದದ ಹಾವು ಹರಿದಾಡುತ್ತಿರುವುದನ್ನು ಕಂಡ ಜನರು ಕಂಗಾಲಾಗಿ ಓಡಿದ್ದಾರೆ. ಈ ಘಟನೆ ಹೃಷಿಕೇಶದಲ್ಲಿ ನಡೆದಿದೆ.

ಹೃಷಿಕೇಶ: ಉತ್ತರಾಖಂಡದ ಹೃಷಿಕೇಶ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ನಂಬರ್ ಒಂದರಲ್ಲಿ 6 ಅಡಿ ಉದ್ದದ ಬೃಹತ್ ಗಾತ್ರದ ಹಾವು ಕಾಣಿಸಿಕೊಂಡ ನಂತರ ಜನರ ಭಯಭೀತರಾಗಿದ್ದಾರೆ. ಪ್ಲಾಟ್​ಫಾರ್ಮ್​ನಲ್ಲಿದ್ದ ಜನರು ಹಾವು-ಹಾವು ಎಂದು ಕೂಗಲಾರಂಭಿಸಿದರು. ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಹಾವು ಹರಿದಾಡುತ್ತಿರುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ