ನಿನ್ನ ಆಡಳಿತ ನಿನಗಾಗಿ, ನನ್ನ ಆಡಳಿತ ಜನರಿಗಾಗಿ; ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ

ಇಂದು ಚನ್ನಪಟ್ಟಣದ ಭೈರಶೆಟ್ಟರಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಡಿಸಿಎಂ ಡಿಕೆ ಶಿವಕುಮಾರ್​ ಅವರು ‘ ನಿನ್ನ ಆಡಳಿತ ಬೇರೆ, ‌ನನ್ನ ಆಡಳಿತ ಬೇರೆ. ನಿನ್ನ ಆಡಳಿತ ನಿನಗಾಗಿ, ನನ್ನ ಆಡಳಿತ ಈ ಜನರಿಗಾಗಿ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಕೌಂಟರ್​ ಕೊಟ್ಟಿದ್ದಾರೆ.

ನಿನ್ನ ಆಡಳಿತ ನಿನಗಾಗಿ, ನನ್ನ ಆಡಳಿತ ಜನರಿಗಾಗಿ; ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
|

Updated on: Sep 21, 2024 | 6:42 PM

ರಾಮನಗರ, ಸೆ.21: ನಾವು ಕೊಟ್ಟ ಮಾತಿನಂತೆ‌ ನಡೆದು, ಚನ್ನಪಟ್ಟಣವನ್ನು ಚಿನ್ನದನಾಡಾಗಿ ಮಾಡುತ್ತೇವೆ ಎಂದು ಡಿಕೆ ಶಿವಕುಮಾರ್​ ಹೇಳಿದರು. ಇಂದು ಚನ್ನಪಟ್ಟಣ(Channapatna)ದ ಭೈರಶೆಟ್ಟರಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘27 ಸಾವಿರ ಅರ್ಜಿ ಬಂದಿತ್ತು. ಅದರಲ್ಲಿ ಮನೆ ಸೈಟಿಗೆ 12 ಸಾವಿರ ಜನ ಅರ್ಜಿ ಹಾಕಿದ್ದರು. 6600 ಅರ್ಜಿ ಪರಿಶೀಲನೆ ಮಾಡಿದ್ದೇವೆ. ಅದ್ರಲ್ಲಿ 2 ಸಾವಿರ ಅರ್ಜಿ ಸರಿಯಾದ ದಾಖಲೆ ಕೊಟ್ಟಿದ್ದಾರೆ. 170 ಎಕರೆ ಭೂಮಿಯನ್ನು ಈಗಾಗಲೇ ಗುರುತಿಸಲಾಗಿದೆ. ಇದನ್ನು ಯಾರಿಗೆ ಹೇಳುತ್ತಿದ್ದೇನೆ‌, ಮಿಸ್ಟರ್ ಕುಮಾರಸ್ವಾಮಿ ಅವರೇ, ಜಿಲ್ಲಾಧಿಕಾರಿಗೆ ಏನೋ ಗೊಡ್ಡು ಬೆದರಿಕೆ ಹಾಕಿದ್ದಾರಂತೆ. ಕುಮಾರಸ್ವಾಮಿ ನಿನ್ನ ಆಡಳಿತ ಬೇರೆ, ‌ನನ್ನ ಆಡಳಿತ ಬೇರೆ. ನಿನ್ನ ಆಡಳಿತ ನಿನಗಾಗಿ, ನನ್ನ ಆಡಳಿತ ಈ ಜನರಿಗಾಗಿ ಎಂದು ಕೌಂಟರ್​ ಕೊಟ್ಟಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us