ಘಟಪ್ರಭಾ ‌ನದಿಗೆ 60 ಸಾವಿರ ಕ್ಯೂಸೆಕ್ ನೀರು ಬಿಡುಗಡೆ; ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಡಂಗುರ ಹೊರಡಿಸಿದ ಅಧಿಕಾರಿಗಳು

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 25, 2024 | 10:39 PM

ಘಟಪ್ರಭಾ ‌ನದಿ(Ghataprabha River)ಗೆ ದೂಪದಾಳ, ಮಾರ್ಕಂಡೇಯ, ಬಳ್ಳಾರಿ‌ ನಾಲಾದಿಂದ ಒಟ್ಟು 60 ಸಾವಿರ ಕ್ಯೂಸೆಕ್ ನೀರು ಹರಿಬಿಟ್ಟ ಹಿನ್ನೆಲೆ ಘಟಪ್ರಭಾ ತೀರದ ಹಳ್ಳಿಗಳಲ್ಲಿ ಎಲ್ಲರೂ ಜಾನುವಾರುಗಳ ಸಮೇತ ಸಾಮಾನು ಸರಂಜಾಮು ಕಟ್ಟಿಕೊಂಡು ಸುರಕ್ಷತಾ ಸ್ಥಳಗಳಿಗೆ ತೆರಳುವಂತೆ ಡಂಗುರ ಸಾರಲಾಗಿದೆ.

ಬಾಗಲಕೋಟೆ , ಜು.25: ಮಹಾರಾಷ್ಟ್ರದಲ್ಲಿ ಬಾರಿ ಮಳೆ ಹಿನ್ನೆಲೆ ಘಟಪ್ರಭಾ ‌ನದಿ(Ghataprabha River)ಗೆ ದೂಪದಾಳ, ಮಾರ್ಕಂಡೇಯ, ಬಳ್ಳಾರಿ‌ ನಾಲಾದಿಂದ ಒಟ್ಟು 60 ಸಾವಿರ ಕ್ಯೂಸೆಕ್ ನೀರು ಹರಿಬಿಟ್ಟ ಹಿನ್ನೆಲೆ ಘಟಪ್ರಭಾ ತೀರದ ಹಳ್ಳಿಗಳಲ್ಲಿ ಎಲ್ಲರೂ ಜಾನುವಾರುಗಳ ಸಮೇತ ಸಾಮಾನು ಸರಂಜಾಮು ಕಟ್ಟಿಕೊಂಡು ಸುರಕ್ಷತಾ ಸ್ಥಳಗಳಿಗೆ ತೆರಳುವಂತೆ ಡಂಗುರ ಸಾರಲಾಗಿದೆ. ನದಿ ಪಾತ್ರದ ಪ್ರವಾಹಬಾಧೆಗೆ ಒಳಗಾಗುವ ಹಳ್ಳಿಗಳಲ್ಲಿ ಮುಂಜಾಗೃತ ಕ್ರಮವಾಗಿ ಅಧಿಕಾರಿಗಳು ಡಂಗುರ ಸಾರಿಸಿದ್ದಾರೆ. ಘಟಪ್ರಭಾ ನದಿಗೆ ಜಲಾವೃತವಾಗುವ ಬಾಗಲಕೋಟೆ ‌ಜಿಲ್ಲೆಯ ಮುಧೋಳ ತಾಲ್ಲೂಕಿನ ಮಿರ್ಜಿ ಗ್ರಾಮ ಜನರಿಗೆ ಸರಕಾರಿ ಪ್ರಾಥಮಿಕ ಶಾಲೆ ಕಡೆ ಬರಲು ಡಂಗುರದ‌ ಮೂಲಕ ಸೂಚನೆ ನೀಡಲಾಗಿದೆ. ಇನ್ನು ರಬಕವಿ ಬನಹಟ್ಟಿ, ಮುದೋಳ, ಬೀಳಗಿ , ಬಾಗಲಕೋಟೆ ವ್ಯಾಪ್ತಿಯಲ್ಲಿ ಈ ನದಿ ಹರಿಯುತ್ತದೆ. ನದಿ ತೀರದ ಜನರು ಜಾಗೃತರಾಗಿರಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jul 25, 2024 10:38 PM