ಸೋಂಕಿತ ಮಗುವಿನ ಜೊತೆ ಇರಲು ಪ್ರತಿದಿನ 6000 ಚಾರ್ಜ್, ಹಣವಿಲ್ಲದೆ ಕಣ್ಣೀರಿಡುತ್ತಿರುವ ತಾಯಿ
[lazy-load-videos-and-sticky-control id=”P6x1-ypOPKQ”] ಬೆಂಗಳೂರು:ಒಂದೇ ಕುಟುಂಬದ ಮೂರು ಸದಸ್ಯರಲ್ಲಿ, ಗಂಡ ಮತ್ತು ಒಂದುವರೆ ವರ್ಷದ ಮಗುವಿಗೆ ಕೊರೊನಾ ಸೋಂಕು ತಗುಲಿದ್ದು, ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಒಂದುವರೆ ವರ್ಷದ ಮಗುವನ್ನು ಬಿಟ್ಟಿರಲಾಗದ ತಾಯಿ ಕಣ್ಣೀರಿಡುತ್ತಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಶ್ರೀವೆಂಕಟೇಶ್ವರನಗರದಲ್ಲಿ ವಾಸವಾಗಿರುವ ಕುಟುಂಬದಲ್ಲಿ ಗಂಡ ಮತ್ತು ಒಂದುವರೆ ವರ್ಷದ ಮಗುವಿಗೆ ಕೊರೊನಾ ಸೋಂಕು ತಗುಲಿದೆ. ಆದರೆ ತಾಯಿಗೆ ಕೊರೊನಾ ವರದಿ ನೆಗೆಟಿವ್ ಬಂದಿದ್ದು, ತಾಯಿಯನ್ನು ಮನೆಯಲ್ಲಿ ಕ್ವಾರಂಟೈನ್ ಮಾಡಿ ಮಗು ಮತ್ತು ಗಂಡನನ್ನು ಬಿಬಿಎಂಪಿ ಸಿಬ್ಬಂದಿಗಳು […]
[lazy-load-videos-and-sticky-control id=”P6x1-ypOPKQ”]
ಬೆಂಗಳೂರು:ಒಂದೇ ಕುಟುಂಬದ ಮೂರು ಸದಸ್ಯರಲ್ಲಿ, ಗಂಡ ಮತ್ತು ಒಂದುವರೆ ವರ್ಷದ ಮಗುವಿಗೆ ಕೊರೊನಾ ಸೋಂಕು ತಗುಲಿದ್ದು, ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಒಂದುವರೆ ವರ್ಷದ ಮಗುವನ್ನು ಬಿಟ್ಟಿರಲಾಗದ ತಾಯಿ ಕಣ್ಣೀರಿಡುತ್ತಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಶ್ರೀವೆಂಕಟೇಶ್ವರನಗರದಲ್ಲಿ ವಾಸವಾಗಿರುವ ಕುಟುಂಬದಲ್ಲಿ ಗಂಡ ಮತ್ತು ಒಂದುವರೆ ವರ್ಷದ ಮಗುವಿಗೆ ಕೊರೊನಾ ಸೋಂಕು ತಗುಲಿದೆ. ಆದರೆ ತಾಯಿಗೆ ಕೊರೊನಾ ವರದಿ ನೆಗೆಟಿವ್ ಬಂದಿದ್ದು, ತಾಯಿಯನ್ನು ಮನೆಯಲ್ಲಿ ಕ್ವಾರಂಟೈನ್ ಮಾಡಿ ಮಗು ಮತ್ತು ಗಂಡನನ್ನು ಬಿಬಿಎಂಪಿ ಸಿಬ್ಬಂದಿಗಳು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ
ಆದರೆ ಒಂದುವರೆ ವರ್ಷದ ಮಗುವನ್ನ ಬಿಟ್ಟಿರಲಾಗದ ತಾಯಿ, ಮಗುವನ್ನು ಮನೆಯಲ್ಲಿಯೇ ಕ್ವಾರಂಟೈನ್ ಮಾಡಿ ಎಂದು ಬಿಬಿಎಂಪಿ ಸಿಬ್ಬಂದಿಗಳ ಬೇಡಿಕೊಂಡಿದ್ದಾರೆ. ಆದರೆ ಸಿಬ್ಬಂದಿಗಳು ಇದಕ್ಕೆ ನಿರಾಕರಿಸಿದ್ದು, ಹೀಗಾಗಿ ಮಹಿಳೆ ಆಸ್ಪತ್ರೆಯಲ್ಲಾದರೂ ಮಗುವಿನ ಜೊತೆ ಇರಲು ಅವಕಾಶ ಕೇಳುತ್ತಿದ್ದಾರೆ. ಆದರೆ ಅವಕಾಶ ನೀಡಲು ದಿನಕ್ಕೆ 6000 ಹಣ ಚಾರ್ಜ್ ಆಗುತ್ತದೆ ಎಂದು ಸಿಬ್ಬಂದಿಗಳು ಹೇಳುತ್ತಿದ್ದಾರೆ. ಹೀಗಾಗಿ ಹಣದ ಸಮಸ್ಯೆ ಸಮಸ್ಯೆಯಿಂದ ಮಹಿಳೆ ಮಗುವಿನ ಜೊತೆ ಇರಲಾಗದೆ ಕಣ್ಣೀರಿಡುತ್ತಿದ್ದಾರೆ.
Published On - 3:36 pm, Sun, 2 August 20