AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಂಟೆಗಟ್ಟಲೆ ಕಾದರೂ ಚಿಕಿತ್ಸೆ ಸಿಗದೆ ವ್ಯಕ್ತಿ ಸಾವು, ಜಯದೇವ ಆಸ್ಪತ್ರೆಯಲ್ಲಿ ದಾಂಧಲೆ!

[lazy-load-videos-and-sticky-control id=”OAqKmKoS1Co”] ಬೆಂಗಳೂರು: ಕೊರೊನಾ ಕಾಲದಲ್ಲಿ ಸಂಕಷ್ಟಗಳ ಸರಮಾಲೆಯೇ ಎದುರಾಗ್ತಿದೆ. ಅದ್ರಲ್ಲೂ ಬೆಂಗಳೂರಿನ ಖಾಸಗಿ ಆಸ್ಪತ್ರೆಗಳು ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡ್ತಿಲ್ಲ. ಇದ್ರಿಂದ ರೊಚ್ಚಿಗೆದ್ದ ರೋಗಿಗಳ ಸಂಬಂಧಿಕರು ಕೊರೊನಾ ವಾರಿಯರ್ ಮೇಲೆ ಮುಗಿಬಿದ್ದಿದ್ರು. ಆಸ್ಪತ್ರೆಯಲ್ಲಿ ದಾಂದಲೆ ಮಾಡಿ ಆಕ್ರೋಶ ಹೊರಹಾಕಿದ್ರು. ಆಸ್ಪತ್ರೆಯ ಗಾಜುಗಳು ಪೀಸ್.. ಪೀಸ್.. ಚೇರ್​ಗಳೆಲ್ಲ ಜಖಂ.. ಬ್ಯಾರಿಕೇಡ್ ಹಾಕಿದ್ರೂ ಜಗ್ಗುತ್ತಿಲ್ಲ.. ಪೊಲೀಸರ ಮನವೊಲಿಕೆಗೂ ಕ್ಯಾರೇ ಅಂತಿಲ್ಲ.. ಏನೇ ಮಾಡಿದ್ರೂ ಆಸ್ಪತ್ರೆ ಸಿಬ್ಬಂದಿ ಮೇಲೆ ಕೋಪ ಮಾತ್ರ ಕಮ್ಮಿ ಆಗ್ತಿಲ್ಲ. ಚಿಕಿತ್ಸೆ ಕೊಡದೆ ರೋಗಿ ಮೃತಪಟ್ಟಿದ್ದಕ್ಕೆ […]

ಗಂಟೆಗಟ್ಟಲೆ ಕಾದರೂ ಚಿಕಿತ್ಸೆ ಸಿಗದೆ ವ್ಯಕ್ತಿ ಸಾವು, ಜಯದೇವ ಆಸ್ಪತ್ರೆಯಲ್ಲಿ ದಾಂಧಲೆ!
ಆಯೇಷಾ ಬಾನು
| Edited By: |

Updated on:Aug 03, 2020 | 12:14 PM

Share

[lazy-load-videos-and-sticky-control id=”OAqKmKoS1Co”]

ಬೆಂಗಳೂರು: ಕೊರೊನಾ ಕಾಲದಲ್ಲಿ ಸಂಕಷ್ಟಗಳ ಸರಮಾಲೆಯೇ ಎದುರಾಗ್ತಿದೆ. ಅದ್ರಲ್ಲೂ ಬೆಂಗಳೂರಿನ ಖಾಸಗಿ ಆಸ್ಪತ್ರೆಗಳು ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡ್ತಿಲ್ಲ. ಇದ್ರಿಂದ ರೊಚ್ಚಿಗೆದ್ದ ರೋಗಿಗಳ ಸಂಬಂಧಿಕರು ಕೊರೊನಾ ವಾರಿಯರ್ ಮೇಲೆ ಮುಗಿಬಿದ್ದಿದ್ರು. ಆಸ್ಪತ್ರೆಯಲ್ಲಿ ದಾಂದಲೆ ಮಾಡಿ ಆಕ್ರೋಶ ಹೊರಹಾಕಿದ್ರು.

ಆಸ್ಪತ್ರೆಯ ಗಾಜುಗಳು ಪೀಸ್.. ಪೀಸ್.. ಚೇರ್​ಗಳೆಲ್ಲ ಜಖಂ.. ಬ್ಯಾರಿಕೇಡ್ ಹಾಕಿದ್ರೂ ಜಗ್ಗುತ್ತಿಲ್ಲ.. ಪೊಲೀಸರ ಮನವೊಲಿಕೆಗೂ ಕ್ಯಾರೇ ಅಂತಿಲ್ಲ.. ಏನೇ ಮಾಡಿದ್ರೂ ಆಸ್ಪತ್ರೆ ಸಿಬ್ಬಂದಿ ಮೇಲೆ ಕೋಪ ಮಾತ್ರ ಕಮ್ಮಿ ಆಗ್ತಿಲ್ಲ.

ಚಿಕಿತ್ಸೆ ಕೊಡದೆ ರೋಗಿ ಮೃತಪಟ್ಟಿದ್ದಕ್ಕೆ ಆಕ್ರೋಶ! ಕೊರೊನಾ ಅಬ್ಬರ ಹೆಚ್ಚಾದಾಗಿನಿಂದ ನಾನ್ ಕೊವಿಡ್ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ಸಿಕ್ತಿಲ್ಲ. ಇದ್ರಿಂದ ರೋಗಿಗಳು ನಿತ್ಯ ಪರದಾಡೋ ಪರಿಸ್ಥಿತಿ ಬಂದೊದಗಿದೆ. ಇದೇ ರೀತಿ ನಿನ್ನೆ ಸಂಜೆ ಅನ್ಸರ್ ಪಾಷಾ ಎಂಬಾತ ಜಯದೇವ ಆಸ್ಪತ್ರೆಗೆ ಬಂದಿದ್ದಾನೆ. ಇದಕ್ಕೂ ಮುನ್ನ ಇಲ್ಲಿ ಆತ ಹಲವು ಬಾರಿ ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ಪಡೆದಿದ್ರೂ ಚೇತರಿಕೆಯಾಗಿರಲಿಲ್ವಂತೆ. ನಿನ್ನೆ ಸಹ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಆಸ್ಪತ್ರೆಗೆ ಬಂದಿದ್ದಾರೆ. ಆದ್ರೆ ಗಂಟೆಗಟ್ಟಲೆ ಕಾದರೂ ಚಿಕಿತ್ಸೆ ನೀಡದೆ ಆಸ್ಪತ್ರೆ ಸಿಬ್ಬಂದಿ ಹೊರಗಡೆ ನಿಲ್ಲಿಸಿದ್ರಂತೆ. ಇದ್ರಿಂದ ಅನ್ಸರ್ ಪಾಷಾ ಮೃತಪಟ್ಟಿದ್ದಾನೆ. ವೈದ್ಯರು ಸರಿಯಾಗಿ ಚಿಕಿತ್ಸೆ ನೀಡದಿರೋದೇ ಸಾವಿಗೆ ಕಾರಣ ಅಂತಾ ಅನ್ಸರ್ ಪಾಷಾ ಕುಟುಂಬಸ್ಥರು ರೊಚ್ಚಿಗೆದ್ರು. ಆಸ್ಪತ್ರೆಯಲ್ಲಿದ್ದ ಬ್ಯಾರಿಕೇಡ್ ತಳ್ಳಿ, ಗಾಜು, ಚೇರ್ ಹೊಡೆದು ಹಾಕಿ ಆಕ್ರೋಶ ಹೊರಹಾಕಿದ್ರು.

ಘಟನೆ ನಡೆದ ಕೂಡಲೇ ಆಸ್ಪತ್ರೆ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದ್ದಾರೆ. ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಆಸ್ಪತ್ರೆಗೆ ನುಗ್ಗಿ ದಾಂದಲೆ ಮಾಡಿರೋರ ವಿರುದ್ಧ ದೂರು ನೀಡಲಾಗಿದೆ. ಸದ್ಯ ಎಫ್​ಐಆರ್ ದಾಖಲಿಸಿಕೊಂಡಿರೋ ಪೊಲೀಸ್ರು ತನಿಖೆ ಶುರು ಮಾಡಿದ್ದಾರೆ.

ಕೊರೊನಾ ಆರ್ಭಟದಲ್ಲಿ ನಾನ್ ಕೊವಿಡ್ ರೋಗಿಗಳಿಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದಿರೋದು ವಿಪರ್ಯಾಸ. ಇದಕ್ಕಾಗಿ ಆಸ್ಪತ್ರೆಯಲ್ಲಿ ದಾಂದಲೆ ಮಾಡಿರೋದು ಮಾತ್ರ ತಪ್ಪು. ಕೊರೊನಾದಂತಾ ಸಂಕಷ್ಟ ಸಮಯದಲ್ಲಿ ತಮ್ಮ ಜೀವವನ್ನೇ ಪಣಕ್ಕಿಟ್ಟು ವೈದ್ಯ ಸಿಬ್ಬಂದಿ ಕಾರ್ಯ ನಿರ್ವಹಿಸ್ತಿದ್ದಾರೆ. ಇಂತಾ ಸಮಯದಲ್ಲಿ ಹೀಗೆ ಮಾಡಿದ್ರೆ, ಅವರ ಆತ್ಮಸ್ಥೈರ್ಯ ಖಂಡಿತವಾಗಿ ಕುಗ್ಗಲಿದೆ ಅನ್ನೋದನ್ನ ಎಲ್ಲರೂ ಅರಿಯಬೇಕಿದೆ.

Published On - 7:06 am, Mon, 3 August 20

Follow Us
Ayesha Banu
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Read More
ಚಂದನವನದಲ್ಲಿ ಹಲವು ಸಮಸ್ಯೆ: ಪರಿಹಾರ ಹುಡುಕಲು ಮುಂದಾದ ವಾಣಿಜ್ಯ ಮಂಡಳಿ
ಚಂದನವನದಲ್ಲಿ ಹಲವು ಸಮಸ್ಯೆ: ಪರಿಹಾರ ಹುಡುಕಲು ಮುಂದಾದ ವಾಣಿಜ್ಯ ಮಂಡಳಿ
4 ವರ್ಷಗಳ ಬಳಿಕ ಸಿಕ್ಕ ಮಗನನ್ನು ನೋಡಿ ಕಣ್ಣೀರು ಹಾಕಿದ ಅಮ್ಮ
4 ವರ್ಷಗಳ ಬಳಿಕ ಸಿಕ್ಕ ಮಗನನ್ನು ನೋಡಿ ಕಣ್ಣೀರು ಹಾಕಿದ ಅಮ್ಮ
ಹೊಸಕೋಟೆಯ ಟೋಲ್ ಪ್ಲಾಜಾ ಬಳಿ ಭಾರಿ ಗಾಳಿಗೆ ಮುರಿದು ಬಿದ್ದ ಬೃಹತ್ ಫಲಕ
ಹೊಸಕೋಟೆಯ ಟೋಲ್ ಪ್ಲಾಜಾ ಬಳಿ ಭಾರಿ ಗಾಳಿಗೆ ಮುರಿದು ಬಿದ್ದ ಬೃಹತ್ ಫಲಕ
ನೋರಾ ಫತೇಹಿ ಮ್ಯೂಸಿಕ್ ವಿಡಿಯೋ, ತೆರೆ ಹಿಂದಿನ ಶ್ರಮ ತೋರಿಸಿದ ನಟಿ
ನೋರಾ ಫತೇಹಿ ಮ್ಯೂಸಿಕ್ ವಿಡಿಯೋ, ತೆರೆ ಹಿಂದಿನ ಶ್ರಮ ತೋರಿಸಿದ ನಟಿ
ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣು ಬೆಳೆದು ಸೈ ಎನಿಸಿಕೊಂಡ ಬೀದರ್ ರೈತ
ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣು ಬೆಳೆದು ಸೈ ಎನಿಸಿಕೊಂಡ ಬೀದರ್ ರೈತ
ನಿಯಂತ್ರಣ ತಪ್ಪಿದ ಬೈಕ್‌ನ ಅಬ್ಬರ; ಕಬ್ಬಿಣದ ಗೇಟ್ ಪುಡಿ ಪುಡಿ, CCTVನಲ್ಲಿ ಸ
ನಿಯಂತ್ರಣ ತಪ್ಪಿದ ಬೈಕ್‌ನ ಅಬ್ಬರ; ಕಬ್ಬಿಣದ ಗೇಟ್ ಪುಡಿ ಪುಡಿ, CCTVನಲ್ಲಿ ಸ
ಬಿಜೆಪಿ ರಾಜ್ಯಾಧ್ಯಕ್ಷ ಬದಲಾಗ್ತಾರಾ?ಅಭಿಪ್ರಾಯ ಸಂಗ್ರಹದಲ್ಲಿ ಏನೆಲ್ಲಾ ಆಯ್ತು
ಬಿಜೆಪಿ ರಾಜ್ಯಾಧ್ಯಕ್ಷ ಬದಲಾಗ್ತಾರಾ?ಅಭಿಪ್ರಾಯ ಸಂಗ್ರಹದಲ್ಲಿ ಏನೆಲ್ಲಾ ಆಯ್ತು
ಆಗಸ್ಟ್‌ 31 ರೊಳಗೆ ಗ್ರೇಟರ್ ಬೆಂಗಳೂರು ಚುನಾವಣೆ ಅಸಾಧ್ಯ?
ಆಗಸ್ಟ್‌ 31 ರೊಳಗೆ ಗ್ರೇಟರ್ ಬೆಂಗಳೂರು ಚುನಾವಣೆ ಅಸಾಧ್ಯ?
ಲ್ಯಾಪ್ ಟಾಪ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ NWKRTC ಡ್ರೈವರ್
ಲ್ಯಾಪ್ ಟಾಪ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ NWKRTC ಡ್ರೈವರ್
ದೆಹಲಿಗೆ ಹಾರಿದ ಸಚಿವಾಕಾಂಕ್ಷಿಗಳು: ಯಾರೆಲ್ಲ ಪ್ರಯಾಣ?
ದೆಹಲಿಗೆ ಹಾರಿದ ಸಚಿವಾಕಾಂಕ್ಷಿಗಳು: ಯಾರೆಲ್ಲ ಪ್ರಯಾಣ?