ಸೇಂಟ್ ಜಾನ್ಸ್​ನಲ್ಲಿ ಅಮಾನವೀಯತೆ: ತಂದೆ ಶವಕ್ಕಾಗಿ 2 ದಿನದಿಂದ ಮಗಳ ಶೋಕ

[lazy-load-videos-and-sticky-control id=”W4-aTSZ-vm0″] ಬೆಂಗಳೂರು: ಸರ್ಕಾರ ಹೇಳ್ತಾನೆ ಇದೆ.. ಜನ ಕೇಳ್ತಾನೆ ಇದ್ದಾರೆ.. ಆದ್ರೆ ಖಾಸಗಿ ಆಸ್ಪತ್ರೆಗಳ ಅಟ್ಟಹಾಸಕ್ಕೆ ಬ್ರೇಕ್ ಬೀಳ್ತಾನೆ ಇಲ್ಲ. ತಿಗಣೆಗಳು ರಕ್ತ ಹೀರಿದ ಹಾಗೆ ಖಾಸಗಿ ಆಸ್ಪತ್ರೆಗಳು ಜನರ ರಕ್ತವನ್ನ ಹೀರುತ್ತಿವೆ. ಅದರಲ್ಲೂ ಕೊರೊನಾ ಬಂದಿರೋದು ಆಸ್ಪತ್ರೆಗಳ ಪಾಲಿಗೆ ಲಡ್ಡು ಬಂದು ಬಾಯಿಗೆ ಬಿದ್ದಂತೆ ಆಗಿದೆ. ಮಾನವೀಯತೆ ಮರೆತು ಅಮಾನವೀಯವಾಗಿ ವರ್ತಿಸುತ್ತಿದ್ದಾರೆ! ಹಣ ಕೊಟ್ಟು ಶವ ತೆಗೆದುಕೊಂಡು ಹೋಗಿ ಎಂದು ಪಟ್ಟು! ಜುಲೈ 22ರಂದು 46 ವರ್ಷದ ಬೇಗೂರು ನಿವಾಸಿ ಕಿಡ್ನಿ ಸಮಸ್ಯೆ ಅಂತ […]

ಸೇಂಟ್ ಜಾನ್ಸ್​ನಲ್ಲಿ ಅಮಾನವೀಯತೆ: ತಂದೆ ಶವಕ್ಕಾಗಿ 2 ದಿನದಿಂದ ಮಗಳ ಶೋಕ
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on:Aug 03, 2020 | 4:11 PM

[lazy-load-videos-and-sticky-control id=”W4-aTSZ-vm0″]

ಬೆಂಗಳೂರು: ಸರ್ಕಾರ ಹೇಳ್ತಾನೆ ಇದೆ.. ಜನ ಕೇಳ್ತಾನೆ ಇದ್ದಾರೆ.. ಆದ್ರೆ ಖಾಸಗಿ ಆಸ್ಪತ್ರೆಗಳ ಅಟ್ಟಹಾಸಕ್ಕೆ ಬ್ರೇಕ್ ಬೀಳ್ತಾನೆ ಇಲ್ಲ. ತಿಗಣೆಗಳು ರಕ್ತ ಹೀರಿದ ಹಾಗೆ ಖಾಸಗಿ ಆಸ್ಪತ್ರೆಗಳು ಜನರ ರಕ್ತವನ್ನ ಹೀರುತ್ತಿವೆ. ಅದರಲ್ಲೂ ಕೊರೊನಾ ಬಂದಿರೋದು ಆಸ್ಪತ್ರೆಗಳ ಪಾಲಿಗೆ ಲಡ್ಡು ಬಂದು ಬಾಯಿಗೆ ಬಿದ್ದಂತೆ ಆಗಿದೆ. ಮಾನವೀಯತೆ ಮರೆತು ಅಮಾನವೀಯವಾಗಿ ವರ್ತಿಸುತ್ತಿದ್ದಾರೆ!

ಹಣ ಕೊಟ್ಟು ಶವ ತೆಗೆದುಕೊಂಡು ಹೋಗಿ ಎಂದು ಪಟ್ಟು! ಜುಲೈ 22ರಂದು 46 ವರ್ಷದ ಬೇಗೂರು ನಿವಾಸಿ ಕಿಡ್ನಿ ಸಮಸ್ಯೆ ಅಂತ ಮಡಿವಾಳದ ಸೇಂಟ್ ಜಾನ್ಸ್ ಆಸ್ಪತ್ರೆಗೆ ಅಡ್ಮಿಟ್ ಆಗಿದ್ರು. ನಂತರ ಜುಲೈ 25 ರಂದು ಕೊರೊನಾ ಪಾಸಿಟಿವ್ ಅಂತ ಆಸ್ಪತ್ರೆಯವರು ರಿಪೋರ್ಟ್ ನೀಡಿದ್ದಾರೆ. ಆ ನಂತರ ರೋಗಿಗೆ ಆರೋಗ್ಯ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿದೆ.

ಹೀಗಾಗಿ ಅವರನ್ನು ಐಸಿಯು ವಾರ್ಡ್​ಗೆ ಶಿಫ್ಟ್ ಮಾಡಬೇಕು. ಐಸಿಯುಗೆ ಶಿಫ್ಟ್​ ಮಾಡಬೇಕಾದ್ರೆ ಹಣ ಕಟ್ಟಿ ಅಂತಾ ಆಸ್ಪತ್ರೆ ಸಿಬ್ಬಂದಿ ಹೇಳಿದ್ರಂತೆ. ಮೊನ್ನೆ ಸಂಬಂಧಿಕರು 1 ಲಕ್ಷ 30 ಸಾವಿರ ರೂಪಾಯಿ ಬಿಲ್ ಕಟ್ಟಿದ್ದಾರೆ. ಆದ್ರೆ ಮೊನ್ನೆ ಮಧ್ಯಾಹ್ನ ಮೂರೂವರೆಗೆ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಮೃತಪಟ್ಟಿದ್ದಾರೆ.

ಬಿಲ್ ಪಾವತಿಸಿ ನಿಮ್ಮಪ್ಪನ ಶವ ಪಡೆಯಿರಿ ಇನ್ನು ಅಪ್ಪ ಸತ್ತ ದುಃಖದಲ್ಲಿದ್ದ ಮಗಳಿಗೆ ಆಸ್ಪತ್ರೆಯವರು ಮತ್ತೊಂದು ಶಾಕ್ ನೀಡಿದ್ದಾರೆ. ಮೂರು ಲಕ್ಷ ಅರವತ್ತು ಸಾವಿರ ರೂಪಾಯಿ ಹಣ ಕಟ್ಟಿ, ಮೃತದೇಹ ತೆಗೆದುಕೊಂಡು ಹೋಗಿ ಅಂತ ಆಸ್ಪತ್ರೆಯವರು ಹೇಳ್ತಿದ್ದಾರಂತೆ. ಆದ್ರೆ ನಮ್ಮ ಬಳಿ 3 ಲಕ್ಷ 60 ಸಾವಿರ ಹಣವಿಲ್ಲವೆಂದು ಮೃತನ ಪುತ್ರಿ ಕಣ್ಣೀರು ಹಾಕಿದ್ದಾರೆ. ಎಷ್ಟೇ ಗೋಗರೆದ್ರೂ ಆಸ್ಪತ್ರೆ ಸಿಬ್ಬಂದಿ ಕರುಣೆ ತೋರಿಲ್ಲ.

ಹಣ ಕಟ್ಟುವವರೆಗೆ ಮೃತ ದೇಹ ಕೊಡಲ್ಲ ಅಂತ ಹೇಳ್ತಿದ್ದಾರಂತೆ. ಹಣ ಕಟ್ಟಿಲ್ಲ ಅಂದರೆ ನಾವೇ ಅಂತ್ಯಸಂಸ್ಕಾರ ಮಾಡ್ತೀವಿ ಅಂತ ಆಸ್ಪತ್ರೆಯವರು ಹೇಳ್ತಿದ್ದಾರಂತೆ. ಮೊನ್ನೆ ಮಧ್ಯಾಹ್ನದಿಂದ ಇಲ್ಲಿಯವರೆಗೆ ಮಗಳಿಗೆ ಅಪ್ಪನ ಮುಖ ತೋರಿಸಿಲ್ಲ. ಮೃತ ದೇಹವನ್ನು ಹಸ್ತಾಂತರಿಸಿಲ್ಲ.

ಹೀಗಾಗಿ ಸೇಂಟ್ ಜಾನ್ಸ್ ಆಸ್ಪತ್ರೆಯ ಎದುರೇ ಮೃತನ ಪುತ್ರಿ ಕಣ್ಣೀರು ಹಾಕುತ್ತಾ ಅಪ್ಪನ ಶವಕ್ಕಾಗಿ ಕಾಯುತ್ತಿದ್ದಾಳೆ. ಈ ಬಗ್ಗೆ ಟಿವಿ9 ಕೂಡ ವರದಿ ಮಾಡಿತ್ತು. ಸಚಿವ ಸುಧಾಕರ್ ಕೂಡ ನಮ್ಮ ಅಧಿಕಾರಿಗಳನ್ನು ಕಳಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ರು. ಆದರೆ ಇಲ್ಲಿಯವರೆಗೆ ಮಗಳಿಗೆ ತಂದೆಯ ಬಾಡಿಯನ್ನು ಹಸ್ತಾಂತರ ಮಾಡಿಲ್ಲ.

Published On - 1:04 pm, Mon, 3 August 20

Video: ಪ್ರಬಲ ಭೂಕಂಪಕ್ಕೆ ನಲುಗಿದ ತೈವಾನ್
Video: ಪ್ರಬಲ ಭೂಕಂಪಕ್ಕೆ ನಲುಗಿದ ತೈವಾನ್
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್